Asianet Suvarna News Asianet Suvarna News

ರಾಷ್ಟಪತಿ ಜೊತೆ 2 ದಶಕಗಳ ಕಾಲ ಸೇವೆ ಸಲ್ಲಿಸಿದ ವಿರಾಟ್‌ಗೆ ಭಾವಪೂರ್ಣ ಬೀಳ್ಕೊಡುಗೆ

  • ಗಣರಾಜ್ಯೋತ್ಸವದಂದು ನಿವೃತ್ತಿಯಾದ ರಾಷ್ಟ್ರಪತಿಯ ಅಂಗ ರಕ್ಷಕ
  • ಬೆನ್ನು ತಟ್ಟಿ ಬೀಳ್ಕೊಟ್ಟ, ರಾಷ್ಟ್ರಪತಿ, ಪ್ರಧಾನಿ ಹಾಗೂ ರಕ್ಷಣಾ ಸಚಿವರು
  • ಇಲ್ಲಿದೆ ವಿರಾಟ್‌ನ ವಿರಾಟ್ ಸ್ವರೂಪದ ಚಿತ್ರಣ
Virat retires after years of service a look back at elite horse of Presidents Bodyguard akb
Author
Bangalore, First Published Jan 27, 2022, 10:16 AM IST

ನವದೆಹಲಿ(ಜ. 27): ದಶಕಗಳಿಗೂ ಹೆಚ್ಚು ಕಾಲ ದೇಶ ಸೇವೆ ಬಳಿಕ ಗಣರಾಜ್ಯೋತ್ಸವ ದಿನದಂದೇ ವಿರಾಟ್‌ ತಮ್ಮ ಸೇವೆಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದೇನು ಇಷ್ಟು ಬೇಗ ವಿರಾಟ್ ನಿವೃತ್ತಿ ಘೋಷಣೆ ಮಾಡಿದ್ರಾ ಅಂತ ಅಚ್ಚರಿ ಪಡ್ತಿದ್ದೀರಾ. ಇಲ್ಲ ನಾವು ಹೇಳ್ತಿರೋದು ಕ್ರಿಕೆಟ್‌ನ ವಿರಾಟ್‌ ಬಗ್ಗೆ ಅಲ್ಲ ಭದ್ರತಾ ಪಡೆಯ ವಿರಾಟ್ ಬಗ್ಗೆ.

ಹೌದು ರಾಷ್ಟ್ರಪತಿಗಳ ಅಂಗರಕ್ಷಕನಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ  ವಿರಾಟ್‌ಗೆ (ಜ.26) ಗಣರಾಜ್ಯೋತ್ಸವ ದಿನ ನಿವೃತ್ತಿಯ ದಿನವಾಗಿತ್ತು. ಇತ್ತ ರಾಷ್ಟ್ರಪತಿಗಳಿಗೆ 73ನೇ ಗಣರಾಜ್ಯೋತ್ಸವ ಪರೇಡ್ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಸ್ವಲ್ಪ ಸಿಹಿ ಹಾಗೂ ಸ್ವಲ್ಪ ಕಹಿಯ ಕ್ಷಣವಾಗಿತ್ತು, ಏಕೆಂದರೆ ಅವರ ಅಂಗರಕ್ಷಕನಾಗಿದ್ದ ವಿರಾಟ್ ವರ್ಷಗಳ ಸೇವೆಯ ನಂತರ ನಿವೃತ್ತಿಯಾದ ದಿನ ಅದಾಗಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind), ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮೆರವಣಿಗೆಯ ನಂತರ ಭವ್ಯವಾದ ಕುದುರೆಯ ಬೆನ್ನು ತಟ್ಟಿ ಬೀಳ್ಕೊಟ್ಟರು. ಇದುವರೆಗೂ ಯಾವ ಕುದುರೆಗೂ ರಾಷ್ಟ್ರಪತಿ, ಪ್ರಧಾನಿ ಇಂಥದ್ದೊಂದು ಬೀಳ್ಕೊಡುಗೆ ಕೊಟ್ಟಿರಲಿಲ್ಲ.

 

ಅಸಾಧಾರಣ ಸೇವೆ ಮತ್ತು ಸಾಮರ್ಥ್ಯದಿಂದ ಎಲ್ಲರ ಗಮನ ಸೆಳೆದ ಅದ್ಭುತ ಪ್ರಾಣಿ ವಿರಾಟ್ ಮತ್ತು ಆತ ದೇಶಕ್ಕೆ ಒದಗಿಸಿದ ಸೇವೆಯ ಬಗ್ಗೆ ನೀವು ಒಂದಷ್ಟು ಮಾಹಿತಿ ಇಲ್ಲಿದೆ. ಜನವರಿ 15 ರಂದು ಸೇನಾ ದಿನದ ಮುನ್ನಾದಿನದಂದು ವಿರಾಟ್‌ಗೆ ಸೇನಾ ಮುಖ್ಯಸ್ಥರು ಪ್ರಶಸ್ತಿ ನೀಡಿದ್ದರು. ಅಸಾಧಾರಣ ಸೇವೆ ಮತ್ತು ಸಾಮರ್ಥ್ಯಗಳಿಗಾಗಿ ಪ್ರಶಂಸೆಯನ್ನು ಪಡೆದ ಮೊದಲ ಕುದುರೆ ವಿರಾಟ್ ಆಗಿದ್ದ. 

ವಿರಾಟ್, ಹ್ಯಾನೋವೇರಿಯನ್(Hanoverian) ತಳಿಯ ಕುದುರೆಯಾಗಿದ್ದು ರಾಷ್ಟ್ರಪತಿಗಳ ಅಂಗರಕ್ಷಕನಾಗಿ 2000 ಇಸವಿಯ ಸೆಪ್ಟೆಂಬರ್  12 ರಂದು ಸೇವೆಗೆ ನಿಯೋಜಿಸಲಾಗಿತ್ತು. ವಿರಾಟ್‌ ಒಂದು ದಶಕಕ್ಕೂ ಹೆಚ್ಚು ಕಾಲ ಕಮಾಂಡೆಂಟ್‌ನ ಚಾರ್ಜರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಿದ್ದ. ವಿರಾಟ್ ತನ್ನ ಸಮಚಿತ್ತದ ಟ್ರೇಡ್‌ಮಾರ್ಕ್ ಮತ್ತು ಆತ್ಮವಿಶ್ವಾಸದಿಂದ ವಿದೇಶಿ ಗಣ್ಯರು ಸೇರಿದಂತೆ ಅನೇಕ ನೋಡುಗರನ್ನು ಬೆರಗುಗೊಳಿಸಿದ್ದ. ರಾಷ್ಟ್ರಪತಿಗಳ ಅಂಗರಕ್ಷಕ ಕಮಾಂಡೆಂಟ್ ಕರ್ನಲ್ ಅನುಪ್ ತಿವಾರಿ (Anup Tiwary) ವಿರಾಟ್‌ನ ಸವಾರಿ ಮಾಡುತ್ತಿದ್ದರು.  ಒಟ್ಟು  13 ಗಣರಾಜ್ಯೋತ್ಸವದ ಪರೇಡ್‌ಗಳಲ್ಲಿ ವಿರಾಟ್‌ ಭಾಗವಹಿಸಿದ್ದ.

Republic Day 2022: ಕೋವಿಡ್‌ ಯೋಧರು, ಕೇಂದ್ರ ಸೈನಿಕರ ಸೇವೆಗೆ Ram Nath Kovind ಸಲಾಂ!

ವಿರಾಟ್ ರಾಜಪಥ್‌ನಲ್ಲಿನ ಸದ್ದುಗದ್ದಲದ ನಡುವೆಯೂ ತನ್ನ ಸವಾರನ ಪಿಸುಮಾತುಗಳನ್ನು ಕೇಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದ. ಮತ್ತು ಇದುವೆ ಆತನನ್ನು ಅತ್ಯಂತ ವಿಶ್ವಾಸಾರ್ಹ ಕುದುರೆಗಳಲ್ಲಿ ಒಂದಾಗಿ ಮಾಡಿದೆ. ಗನ್‌ಗಳ ಸದ್ದು, ಬ್ಯಾಂಡ್‌ ಸೆಟ್ ಮತ್ತು ಯುದ್ಧ ಟ್ಯಾಂಕ್‌ಗಳು ಮತ್ತು ಇತರ ಆಯುಧಗಳು ರಾಜಪಥದಲ್ಲಿ ಉರುಳುತ್ತಿದ್ದರೂ, ವಿರಾಟ್ ಯಾವುದೇ ಅಂಜಿಕೆ ಇಲ್ಲದೇ ನಿಲ್ಲುತ್ತಿದ್ದು, ಶಾಂತ ಮತ್ತು ಸಮಚಿತ್ತವನ್ನು ಹೊಂದಿದ್ದ.

ಸೇನಾ ದಿನದ ಮುನ್ನಾ ದಿನವಾಗಿದ್ದ ಜನವರಿ 15 ರಂದು ವಿರಾಟ್‌ಗೆ ಸೇನಾ ಮುಖ್ಯಸ್ಥರಿಂದ ಶ್ಲಾಘನೆ ಮಾಡಲಾಯಿತು. ಅಸಾಧಾರಣ ಸೇವೆ ಮತ್ತು ಸಾಮರ್ಥ್ಯಗಳಿಗಾಗಿ ಪ್ರಶಂಸೆ ಪಡೆದ ಮೊದಲ ಕುದುರೆ ಈ ವಿರಾಟ್. 2021 ರಲ್ಲಿ ಗಣರಾಜ್ಯೋತ್ಸವ ಪರೇಡ್ ಮತ್ತು ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ವಿರಾಟ್ ತಮ್ಮ ವಯಸ್ಸಿನ ಹೊರತಾಗಿಯೂ ಅಸಾಧಾರಣ ಹಾಗೂ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ. 

ರೈಲಿಗೆ ಸ್ಪರ್ಧೆ ನೀಡಿದ ಕುದುರೆ... ಚಲಿಸುತ್ತಿರುವ ರೈಲುಗಳ ಮಧ್ಯೆ ಓಟ: ವಿಡಿಯೋ ವೈರಲ್‌

ರಾಷ್ಟ್ರಪತಿಗಳ ಅಂಗರಕ್ಷಕ ಪಡೆ (The Presidents Bodyguard) ಭಾರತೀಯ ಸೇನೆಯ ಅತ್ಯಂತ ಗಣ್ಯ ರೆಜಿಮೆಂಟ್ ಆಗಿದೆ. ಸಾವಿರಾರು ಕುದುರೆಗಳಲ್ಲಿ ಅವುಗಳ ಎತ್ತರ ಹಾಗೂ ಪರಂಪರೆಯಿಂದ ಈ ರೆಜಿಮೆಂಟ್‌ಗೆ ಆಯ್ಕೆ ಮಾಡಲಾಗುತ್ತದೆ. 

Follow Us:
Download App:
  • android
  • ios