Asianet Suvarna News Asianet Suvarna News

ರೈಲಿಗೆ ಸ್ಪರ್ಧೆ ನೀಡಿದ ಕುದುರೆ... ಚಲಿಸುತ್ತಿರುವ ರೈಲುಗಳ ಮಧ್ಯೆ ಓಟ: ವಿಡಿಯೋ ವೈರಲ್‌

  • ಎರಡು ಚಲಿಸುತ್ತಿರುವ ರೈಲುಗಳ ಮಧ್ಯೆ ಕುದುರೆಯ ಓಟ
  • ಕೊನೆಗೂ ಬಚವಾದ ಕುದುರೆ
  • ಮೈ ಜುಮ್ಮೆನಿಸುವ ವಿಡಿಯೋ ವೈರಲ್‌
     
Horse runs between moving train watch hair-raising video akb
Author
Bangalore, First Published Jan 24, 2022, 2:45 PM IST

ಈಜಿಪ್ಟ್‌( ಜ.24): ಎರಡು ವಿರುದ್ಧ ದಿಕ್ಕಿಗೆ ಚಲಿಸುತ್ತಿರುವ ರೈಲುಗಳ ಮಧ್ಯೆ ಕುದುರೆಯೊಂದು ಓಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರೈಲಿನಲ್ಲಿ ಚಲಿಸುತ್ತಿರುವ ಪ್ರಯಾಣಿಕರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈ ಘಟನೆ ಈಜಿಪ್ಟ್‌ನಲ್ಲಿ ನಡೆದಿದೆ ಎಂದು ವಿದೇಶಿ ಮಾಧ್ಯಮವೊಂದು ವರದಿ ಮಾಡಿದೆ. 

ಈ ವಿಡಿಯೋದಲ್ಲಿ ಕುದುರೆ ಓಡುವುದನ್ನು ನೋಡಿ ಜನ ಕಿಟಕಿಯಿಂದ ತಲೆ ಹೊರಗೆ ಹಾಕಿ ಜೋರಾಗಿ ಬೊಬ್ಬೆ ಹೊಡೆಯುವುದನ್ನು ನೋಡಬಹುದು. ಇತ್ತ ಶ್ವೇತ ವರ್ಣದ ಕುದುರೆಯು ಎರಡು ರೈಲುಗಳ ಮಧ್ಯೆ ಎಲ್ಲಿಯೂ ನಿಲ್ಲದೇ ಮಿಂಚಿನ ವೇಗದಲ್ಲಿ ಚಲಿಸುವುದನ್ನು ಕಾಣಬಹುದು. 

ಇತ್ತ ಈಜಿಪ್ಟ್‌ನ (Egypt) ಅಸ್ಯುತ್‌ನಿಂದ (Asyut) ಸೊಹಾಗ್‌ಗೆ (Sohag) ಚಲಿಸುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋ ಮಾಡಿದ್ದಾರೆ. ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, ಬಿಳಿ ಕುದುರೆಯೊಂದು  ಎರಡು ರೈಲುಗಳ ನಡುವೆ ಹಳಿಗಳ ಮೇಲೆ ಓಡುತ್ತಿರುವುದನ್ನು ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ನಂತರ ಕುದುರೆ ಪಕ್ಷದ ಹಳಿಗೆ ಹತ್ತಿದ್ದು ಅಲ್ಲಿಯೂ ರೈಲಿಗೆ ಸ್ಪರ್ಧೆ ಕೊಡುವಂತೆ ಓಡುತ್ತಿರುವುದನ್ನು ಕಾಣಬಹುದು. ಮತ್ತು ಅದಕ್ಕೆ ಏನು ತೊಂದರೆಯಾಗಿಲ್ಲ ಎಂಬುದು ತಿಳಿಯುತ್ತಿದ್ದಂತೆ ಪ್ರಯಾಣಿಕರು ಹರ್ಷೋದ್ಘಾರ ಮಾಡುವುದನ್ನು ಕೇಳಬಹುದು.

 

ಭಾರತೀಯ ಪೊಲೀಸ್ ಸೇವೆಯ(IPS)ಅಧಿಕಾರಿ ದೀಪಾಂಶು ಕಾಬ್ರಾ (Dipanshu Kabra) ಅವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು,  ವೀಡಿಯೊವನ್ನು17 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಟ್ವೀಟ್‌ನ ಶೀರ್ಷಿಕೆಯನ್ನು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ. 'ಕುದುರೆ ಎರಡು ರೈಲುಗಳ ನಡುವೆ ಸಿಲುಕಿಕೊಂಡಿತು. ಅದು ಹೇಗೆ ಓಡಬೇಕು ಎಂದು ತಿಳಿದಿತ್ತು, ಅದು ಗುರಿ ಬದಲಾಯಿಸದೆ ಓಡುತ್ತಲೇ ಇತ್ತು ಮತ್ತು ಅಂತಿಮವಾಗಿ ಹೊರಬಂದಿತು. ಚಿಕ್ಕ ವೀಡಿಯೊ ಜೀವನದ ಪಾಠವನ್ನು ಕಲಿಸುತ್ತದೆ. ಕಷ್ಟಗಳ ನಡುವೆ ಸಿಲುಕಿಕೊಳ್ಳಬೇಡಿ, ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ ಮತ್ತು ಮುಂದುವರಿಯಿರಿ ಎಂದು ಬರೆದು ಈ ವಿಡಿಯೋವನ್ನು ದೀಪಾಂಶು ಕಾಬ್ರಾ ಪೋಸ್ಟ್‌ ಮಾಡಿದ್ದಾರೆ.

Vastu tips: ಏಳು ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ರೆ ಗೆಲುವು ನಿಮ್ಮದೇ

ಒಹ್ ಕುದುರೆ ಕೊನೆಗೂ ಸುರಕ್ಷಿತವಾಗಿ ಹೊರ ಬಂತು. ನನಗೆ ತುಂಬಾ ಸಂತೋಷವಾಗಿದೆ. ದೇವರಿಗೆ ಧನ್ಯವಾದಗಳು ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

Viral News: ವರನಿದ್ದ ಕುದುರೆ ಗಾಡಿಗೆ ತಗುಲಿದ ಬೆಂಕಿ, ಮುಂದೇನಾಯ್ತು? ವಿಡಿಯೋ ವೈರಲ್

ಕಾಶ್ಮೀರ ಪ್ರವಾಸದ ವೇಳೆ ಆಭರಣ ಕಳೆದುಕೊಂಡ ಸೂರತ್ ಮೂಲದ ಕುಟುಂಬಕ್ಕೆ ಆಭರಣ ಹಿಂತಿರುಗಿಸಲು ಕುದುರೆ ನೋಡಿಕೊಳ್ಳೋ ಯುವಕರಿಬ್ಬರು 70 ಕಿ.ಮೀ. ಪ್ರಯಾಣಿಸಿರೋ ಘಟನೆ ಕಳೆದ ವರ್ಷ ವರದಿಯಾಗಿತ್ತು. ಕಳೆದು ಹೋದ ವಸ್ತುಗಳು ಮರಳಿ ಸಿಗುತ್ತವೆ ಎಂಬ ನಿರೀಕ್ಷೆ ಬಹುತೇಕರಿಗೆ ಇರೋದಿಲ್ಲ. ಅದ್ರಲ್ಲೂಆಭರಣಗಳಂತಹ (Ornaments) ಬೆಲೆಬಾಳೋ ವಸ್ತುಗಳು ಕಳೆದುಹೋದ್ರೆ ಮರಳಿ ಸಿಗೋದು ಕನಸಿನ ಮಾತೇ ಸರಿ. ಹೀಗಿರೋವಾಗ ಕಾಶ್ಮೀರ (Kashmir) ಪ್ರವಾಸಕ್ಕೆ (tour) ತೆರಳಿದ ಸೂರತ್(Surat) ಕುಟುಂಬವೊಂದು ಕಳೆದುಕೊಂಡ ಆಭರಣಗಳನ್ನು ಮರಳಿ ಪಡೆದಿದೆ. ಈ ಆಭರಣಗಳನ್ನು ಮರಳಿಸಲು ಕಾಶ್ಮೀರದ ಕುದುರೆ ಸವಾರರಿಬ್ಬರು  (pony  keepers)70 ಕಿ.ಮೀ. ದೂರ ಪ್ರಯಾಣ ಬೆಳೆಸಿರೋದು ವಿಶೇಷ.

Follow Us:
Download App:
  • android
  • ios