ಕಾಡುಕೋಣವೊಂದು ಹುಲಿಯೊಂದರ ಬೇಟೆಯಿಂದ ತಪ್ಪಿಸಿಕೊಂಡು ಓಡುತ್ತಿರುವ ರೋಚಕ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುರೇಂದ್ರ ಮೆಹ್ರಾ ಅವರು ಪೋಸ್ಟ್ ಮಾಡಿದ್ದು, ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಕಾಡುಕೋಣವೊಂದು ಹುಲಿಯೊಂದರ ಬೇಟೆಯಿಂದ ತಪ್ಪಿಸಿಕೊಂಡು ಓಡುತ್ತಿರುವ ರೋಚಕ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುರೇಂದ್ರ ಮೆಹ್ರಾ ಅವರು ಪೋಸ್ಟ್ ಮಾಡಿದ್ದು, ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ವಿಡಿಯೋದಲ್ಲಿ ಹುಲಿಯೊಂದು ಹಿಂಡಿನಿಂದ ದೂರವಾಗಿ ಒಂಟಿಯಾಗಿರುವ ಕಾಡುಕೋಣವನ್ನು ಓಡಿಸಿಕೊಂಡು ಹೋಗುತ್ತಿದೆ. ಹುಲಿ ತನ್ನನ್ನು ಓಡಿಸಿಕೊಂಡು ಬರುತ್ತಿರುವುದನ್ನು ನೋಡಿದ ಕಾಡುಕೋಣ ಬದುಕಿದೆಯಾ ಬಡಜೀವ ಎಂಬಂತೆ ಜೀವ ಕೈಯಲ್ಲಿಡಿದು ಓಡುತ್ತಿರುವ ವೀಡಿಯೋ ವೈರಲ್ ಆಗಿದೆ. ಒಡಿಶಾದ ಕಾಡೊಂದರಲ್ಲಿ ಸೆರೆಯಾದ ವಿಡಿಯೋ ಇದಾಗಿದೆ. ಸ್ವಲ್ಪ ದೂರ ಕಾಡುಕೋಣವನ್ನು ಓಡಿಸಿಕೊಂಡು ಹೋದ ಹುಲಿರಾಯ ಅದು ದೂರ ದೂರ ಸಾಗುತ್ತಿದ್ದಂತೆ ಸುಮ್ಮನಾಗಿದ್ದು, ಹೋದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಬಂದಿದೆ. ಇದು ಕೇವಲ ಟ್ರಯಲ್ ರನ್? ಹುಲಿಯೊಂದು ಕಾಡುಕೋಣ (Indian Gaur)ವನ್ನು ಬೆನ್ನಟ್ಟುತ್ತಿದೆ ಎಂದು ವಿಡಿಯೋ ಪೋಸ್ಟ್ ಮಾಡಿದ ಸುರೇಂದ್ರ ಮೆಹ್ರಾ ಬರೆದುಕೊಂಡಿದ್ದಾರೆ.
ಸಿನಿಮಾದ ಕ್ಲೈಮ್ಯಾಕ್ಸ್ ಮೀರಿಸ್ತಿದೆ ಈ ದೃಶ್ಯ: ಮೊಸಳೆಯಿಂದ ಜಿಂಕೆ ಗ್ರೇಟ್ ಎಸ್ಕೇಪ್
ಈ ವಿಡಿಯೋವನ್ನು ಮತ್ತೊಬ್ಬ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಕೂಡ ಶೇರ್ ಮಾಡಿಕೊಂಡಿದ್ದು, ಕಾಡಿನಲ್ಲಿ ಸುರಕ್ಷಿತವಾಗಿ ಬದುಕುವುದು ಪರಭಕ್ಷಕ ಪ್ರಾಣಿ ಹಾಗೂ ಬೇಟೆಗೆ ಆಹಾರವಾಗುವ ಪ್ರಾಣಿ ಎರಡಕ್ಕೂ ಕಷ್ಟ ಎಂದು ಬರೆದುಕೊಂಡಿದ್ದಾರೆ. ಹುಲಿಯ ಉದ್ದೇಶ ಬರೀ ಬೇಟೆಯಾಗಿರಲಿಲ್ಲ. ಈ ಕಾಡುಕೋಣವನ್ನು ಓಡಿಸುವುದಾಗಿತ್ತು. ಒಂದು ವೇಳೆ ಅದು ಬೇಟೆ ಬಯಸಿದ್ದರೆ ಅದನ್ನು ಬೇಟೆಯಾಡದೇ ಬಿಡುತ್ತಿರಲಿಲ್ಲ ಎಂದು ಒಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಕಾಮೆಂಟ್ ವಿಭಾಗದಲ್ಲಿ, ಇಂಟರ್ನೆಟ್ ಬಳಕೆದಾರರು ಹುಲಿ ಕಾಡುಕೋಣವನ್ನು ಬೆನ್ನಟ್ಟಿದ ಹಿಂದಿನ ಕಾರಣವನ್ನು ಊಹಿಸಿದ್ದಾರೆ. ಕೆಲವರು ಇದನ್ನು ಪ್ರಾದೇಶಿಕ ಸಮಸ್ಯೆ (ಅಂದರೆ ಗಡಿ ವ್ಯಾಪ್ತಿಗೆ ಸಂಬಂಧಿಸಿದ ಗಲಾಟೆ)ಎಂದು ಕರೆದರೆ, ಇತರರು ಇದನ್ನು ಬದುಕುಳಿಯುವ ಹೋರಾಟ ಎಂದು ಕರೆದರು. ಕಾಡುಪ್ರಾಣಿಗಳಿಗೂ ಮನುಷ್ಯರಂತೆ ಗಡಿ ವ್ಯಾಪ್ತಿ ಸರಹದ್ದುಗಳಿದ್ದು, ತನ್ನ ಸರಹದ್ದಿನ ಒಳಗೆ ಬರುವ ಇತರ ಪ್ರಾಣಿಗಳನ್ನು ಅವು ಬೆನ್ನಟ್ಟುತ್ತವೆ. ಇದೇ ಕಾರಣಕ್ಕೆ ಹುಲಿಗಳ ಮಧ್ಯೆ ಘೋರ ಕಾಳಗಗಳಾಗುತ್ತವೆ. ಹುಲಿಗಳು ಮರಗಳ ಮೇಲೆ ಗೆರೆ ಎಳೆದು ತನ್ನ ವ್ಯಾಪ್ತಿಯನ್ನು ಖಾತರಿಪಡಿಸುತ್ತವೆಯಂತೆ, ಅದೇ ರೀತಿ ಬಿದಿನಾಯಿಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಆ ಬೀದಿಯ ನಾಯಿ ಈ ಬೀದಿಗೆ ಬಂದರೆ ಈ ಬೀದಿಯಲ್ಲಿರುವ ನಾಯಿಗಳೆಲ್ಲಾ ಸೇರಿ ಮುಗಿ ಬೀಳುತ್ತವೆ. ಹುಲಿಗಳು ಗೆರೆ ಎಳೆದು ಬೌಂಡರಿ ಗುರುತಿಸಿದರೆ ನಾಯಿಗಳು ಮೂತ್ರ ವಿಸರ್ಜಿಸಿ ತಮ್ಮ ಗಡಿಯನ್ನು ಖಚಿತಪಡಿಸುತ್ತವೆ. ಇವೆಲ್ಲಾ ಪ್ರಾಣಿ ಪ್ರಪಂಚದ ವಿಶಿಷ್ಟವೆನಿಸುವ ನಡವಳಿಕೆಗಳಾಗಿವೆ.
Wildlife: ಜಿಂಕೆ ಮರಿಸಾಕಲು ಹೋಗಿ ಪೇಚಿಗೆ ಸಿಲುಕಿದ ಕಾಫಿ ಎಸ್ಟೇಟ್ ಮಾಲೀಕ!
ಇತ್ತ ಈ ವಿಡಿಯೋ ನೋಡಿದವರು ಹಲವು ವಿಧಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಜೀವಕ್ಕಾಗಿ ಓಟ ಎಂದು ಈ ಘಟನೆಯನ್ನು ಬಣ್ಣಿಸಿದರೆ ಮತ್ತೆ ಕೆಲವರು ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾದ ಕ್ಷಣ ಎಂದು ಬರೆದುಕೊಂಡಿದ್ದಾರೆ. ಎಂತಹಾ ಶಕ್ತಿ ಎರಡು ಬಲಿಷ್ಠ ಪ್ರಾಣಿಗಳು ತಮ್ಮ ಅತ್ಯುತ್ತಮ ಕ್ಷಣದಲ್ಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಸುಂದರ ಹಾಗೂ ಅತೀ ಅಪರೂಪದ ವಿಡಿಯೋ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
