ಗರ್ಲ್ಸ್ ಹಾಸ್ಟೆಲ್‌ನಲ್ಲಿ ಯುವತಿ ಮೈಮೇಲೆ ಬಂದ ದೆವ್ವ, ಬೆಚ್ಚಿ ಬಿದ್ದ ವಿದ್ಯಾರ್ಥಿನಿಯರು, ಹಾಸ್ಟೆಲ್‌ನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಹಪಾಠಿಗಳು ದಿಕ್ಕಾಪಾಲಾಗಿ ಓಡಿದ್ದಾರೆ.

ಗುವ್ಹಾಟಿ (ಮಾ.30) ಹಾಸ್ಟೆಲ‌್‌ನಲ್ಲಿ ವಿದ್ಯಾರ್ಥಿನಿಯ ಮೈಮೇಲೆ ಪ್ರೇತ ಪಿಶಾಚಿಯ ಬಂದ ಘಟನೆಯೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆ ಅಸ್ಸಾಂ ವಿದ್ಯಾರ್ಥಿನಿಯ ಹಾಸ್ಟೆಲ‌್‌ನಲ್ಲಿ ನಡೆದಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದ್ದಕ್ಕಿದ್ದಂತೆ ವಿದ್ಯಾರ್ಥಿನಿಯ ಸ್ವಭಾವ ಬದಲಾಗಿದೆ. ಕಿರುಚಾಡುತ್ತಾ, ಹಾವಿನಂತೆ ಹೊರಳಾಡಲು ಆರಂಭಿಸಿದ್ದಾಳೆ. ಜೊತೆಗಿದ್ದ ಇತ ವಿದ್ಯಾರ್ಥಿನಿಯರು ಸಮಾಧಾನದಿಂದ ಆಕೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆಯ ಮುಖ ಹಾಗೂ ಸ್ವಭಾವ ನೋಡಿ ಬೆಚ್ಚಿ ಬಿದ್ದಿದ್ದಾರೆ. ವಿದ್ಯಾರ್ಥಿನಿಯರು ಆಕೆಯನ್ನು ಅಲ್ಲೆ ಬಿಟ್ಟು ದಿಕ್ಕಾಪಾಲಾಗಿ ಓಡಿದ ದೃಶ್ಯ ಸೆರೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದ್ಯಾರ್ಥಿನಿಯಿಂದ ಬೆಚ್ಚಿ ಬಿದ್ದ ಹಾಸ್ಟೆಲ್

ಈ ವಿಡಿಯೋದ ಸತ್ಯಾಸತ್ಯತೆ ಇನ್ನಷ್ಟೆ ಹೊರಬರಬೇಕಿದೆ. ಅಸ್ಸಾಂ ಸ್ಥಳೀಯ ಮಾಧ್ಯಮಗಳು ಈ ಘಟನೆ ಕುರಿತು ವರದಿ ಮಾಡಿದೆ. ಕಾಲೇಜು ಮುಗಿಸಿ ರಾತ್ರಿಯಾಗುತ್ತಿದ್ದಂತೆ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಹಲವರು ಮಲಗಲು ಸಜಜಾಗಿದ್ದರು. ಇದರ ನಡುವೆ ಒರ್ವ ವಿದ್ಯಾರ್ಥಿನಿ ಪಿಶಾಚಿಯಂತೆ ಆಡಲು ಆರಂಭಿಸಿದ್ದಾಳೆ. ಇದು ಇತರರನ್ನು ಗಾಬರಿಪಡುವಂತೆ ಮಾಡಿದೆ.

ಬೆಡ್ ಮೇಲೆ ಮಲಗಿದ್ದ ವಿದ್ಯಾರ್ಥಿನಿ ವಿಚಿತ್ರವಾಗಿ ಆಡಲು ಆರಂಭಿಸಿದ್ದಾಳೆ. ಏನಾಯಿತು ಎಂದು ಕೇಳುವಷ್ಟರಲ್ಲಿ ಆಕೆಯ ಧ್ವನಿ ಬದಲಾಗಿದೆ. ಮುಖದ ಹಾವ ಭಾವ ಬದಲಾಗಿದೆ. ಕಿರುಚಾಟ, ಆಕ್ರೋಶಗಳು ಜೋರಾಗಿದೆ. ಹೊರಳಾಟ, ನರಳಾಟಗಳು ವ್ಯಕ್ತವಾಗತೊಡಗಿದೆ. ವಿದ್ಯಾರ್ಥಿನಿ ಮೈಮೇಲೆ ಭೂತ ಪ್ರೇತ ಬಂದಿದೆ ಎಂದು ಇತರ ವಿದ್ಯಾರ್ಥಿನಿಯರು ದಿಕ್ಕಾಪಾಲಾಗಿ ಓಡಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿನಿ ತನ್ನ ಹಿಂದೆ ಎಲ್ಲರೂ ಇದ್ದಾರೆ ಎಂದು ಆಕೆಯನ್ನು ಹಿಡಿದು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾಳೆ. ಆದರೆ ಹಿಂದಿರುಗಿ ನೋಡಿದಾಗ ಯಾರು ಇಲ್ಲಾ ಎಂದಾಗ ಆಕೆಯೂ ಅಲ್ಲಿಂದ ಓಡಿ ಹೋಗಿದ್ದಾಳೆ.

ವಿದ್ಯಾರ್ಥಿಗಳ ಆತಂಕ, ಚೀರಾಟ ನೋಡಿ ಮಹಿಳಾ ಸಿಬ್ಬಂದಿ ಆಗಮಿಸಿದ್ದಾರೆ. ಆದರೆ ವಿದ್ಯಾರ್ಥಿನಿಯನ್ನು ನೋಡಿ ಸಿಬ್ಬಂದಿ ಕೂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹಲವರು ವಿದ್ಯಾರ್ಥಿನಿಗೆ ಕೆಲ ಆರೋಗ್ಯ ಸಮಸ್ಯೆಗಳಿರುವ ಸಾಧ್ಯತೆ ಇದೆ. ಮನೋರೋಗ ತಜ್ಞರ ಜೊತೆ ಸಮಾಲೋಚನೆ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ಇದು ಪ್ರೇತದ ಸಮಸ್ಯೆ ಎಂದು ಅಭಿಪ್ರಾಯಪಟ್ಟಿದ್ದಾರೆ.

View post on Instagram