ಹಾಸ್ಟೆಲ್ ಟರೇಸ್ ಮೇಲೆ ಹೋದ ವಿದ್ಯಾರ್ಥಿನಿ ಮರಳಿ ಬರಲೇ ಇಲ್ಲ, ವನಿಷಾಗೆ ಏನಾಯ್ತು?, ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ದುರಂತ ಘಟನೆ ನಡೆದಿದೆ. ಅಷ್ಟಕ್ಕೂ 21ರ ಹರೆಯದ ವನಿಷಾಗೆ ಏನಾಯ್ತು?

ಶಿವಮೊಗ್ಗ (ನ.05) ಸರ್ಕಾರಿ ಕಾಲೇಜಿನ ವಸತಿ ನಿಲಯದಲ್ಲಿ ದುರಂತ ಘಟನೆಯೊಂದು ನಡೆದಿದೆ. ಹಾಸ್ಟೆಲ್‌ನ ಟರೇಸ್ ಮೇಲೆ ಹೋದ 21 ವರ್ಷದ ವಿದ್ಯಾರ್ಥಿನಿ ವನಿಷಾ ಮತ್ತೆ ಮರಳಿ ಬರಲೇ ಇಲ್ಲ. ವಿದ್ಯಾರ್ಥಿನಿ ನಾಪತ್ತೆಯಾಗಿ ಕೆಲ ಗಂಟೆಗಳು ಕಳೆದರೂ ಯಾರಿಗೂ ಸುಳಿವು ಕೂಡ ಸಿಗಲಿಲ್ಲ. ಆದರೆ ಹಾಸ್ಟೆಲ್ ಟರೇಸ್ ಮೇಲೆ ಹೋದ ವಿದ್ಯಾರ್ಥಿನಿ ಮರಳಿ ಬರಲೇ ಇಲ್ಲ. ಈಕೆ ದುರಂತ ಅಂತ್ಯಕಂಡಿರುವ ಘಟನೆ ಶಿವಮೊಗ್ಗದ ಕೋಟೆ ರಸ್ತೆಯ ಸರ್ಕಾರಿ ಬಾಲಕೀಯರ ವಸತಿ ನಿಲಯದಲ್ಲಿ ನಡೆದಿದೆ.

ವನಿಷಾಗೆ ಏನಾಯ್ತು?

ಭದ್ರಾವತಿ ತಾಲೂಕು ಗಂಗೂರಿನ ವನಿಷಾ ಶಿವಮೊಗ್ಗದ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದರು. ಮಧ್ಯಮ ವರ್ಗದ ವನಿಷಾ ತರಗತಿಯಲ್ಲಿ ಚುರುಕಿನ ವಿದ್ಯಾರ್ಥಿನಿಯಾಗಿದ್ದಳು. ಹಾಸ್ಟೆಲ್‌ನಲ್ಲಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಳು. ಇತರ ವಿದ್ಯಾರ್ಥಿನಿಯರ ಜೊತೆಗೆ ಇದ್ದ ವನಿಷಾ ಕೆಲ ಹೊತ್ತಲ್ಲಿ ನಾಪತ್ತೆಯಾಗಿದ್ದಳು. ಹಾಸ್ಟೆಲ್ ಟರೇಸ್ ಮೇಲೆ ಹೋದ ವನಿಷಾ ಟ್ಯಾಂಕ್ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಪ್ರಕರಣ ದಾಖಲಿಸಿದ ಪೊಲೀಸ್

ವನಿಷಾ ಹಾಸ್ಟೆಲ್ ಟರೇಸ್ ಮೇಲೆ ತೆರಳಿ ಬದುಕು ಅಂತ್ಯಗೊಳಿಸಿದ್ದಾಳೆ. ಟರೇಸ್ ಮೇಲೆ ಹೋದ ಇತರ ವಿದ್ಯಾರ್ಥಿನಿಯರು ವನಿಷಾ ಮೃತದೇಹ ನೋಡಿ ಬೆಚ್ಚಿ ಬಿದ್ದಿದ್ದಾರೆ. ತಕ್ಷಣವೇ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಾರ್ಡನ್, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿನಿ ಮೃತದೇಹ ವಶಪಡಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪನರ್ವಸತಿ ಕೇಂದ್ರದ ಬಾಲಕನ ದುರಂತ ಅಂತ್ಯ

ಬಾಗಲಕೋಟೆಯ ಆಲಗೂರು ಪುನರ್ವತಿ ಕೇಂದ್ರದಲ್ಲಿದ್ದ 15 ವರ್ಷದ ಬಾಲಕ ಆಕಾಶ್ ಹೆದ್ದಾರಿ ದುರಂತ ಅಂತ್ಯಕಂಡಿದ್ದಾನೆ. ಮನೆಯಲ್ಲಿ ನೇNU ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ.ಜಮಖಂಡಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಸ್ಥಳದಲ್ಲಿ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಸಾವಿಗೆ ಶರಣು

ಟಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ವ್ಯಕ್ತಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣಾದ ಘಟನೆ ಇತ್ತೀಚೆಗೆ ನಡೆದಿದೆ. ಜಮೀನು ವ್ಯಾಜ್ಯ ವಿಚಾರ ಸಹೋದರಿಯರ ಕಿರುಕುಳಕ್ಕೆ ಬೇಸತ್ತು ದುರಂತ ಅಂತ್ಯಕಂಡಿರುವುದಾಗಿ ವರದಿಯಾಗಿದೆ. ತನ್ನ ಸಾವಿಗೆ ಸಹೋದರಿಯರಾದ ದಾಕ್ಷಾಯಿಣಿ, ನಳಿನಿ ಮತ್ತು ಭಾವಂದಿರಾದ ದಾಸೇಗೌಡ, ಮತ್ತು ನಾರಾಯಣ ಗೌಡ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿದ್ದಾನೆ. ಆಸ್ತಿಯಲ್ಲಿ ಪಾಲು ಬೇಕೆಂದು ಸಹೋದರಿಯರ ಕಿರುಕುಳ ಆರೋಪ ಮಾಡಿದ್ದಾನೆ. ಈ ಹಿಂದೆಯೇ ಆಸ್ತಿಯಲ್ಲಿ ಪಾಲು ಪಡೆದು ಮತ್ತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ. ಕಿರುಕುಳಕ್ಕೆ ಬೇಸತ್ತು ಗ್ರಾಮ ತೊರೆದ ಮೃತ ಲಕ್ಷ್ಮೀಕಾಂತ್ ಕುಟುಂಬ ಮೈಸೂರಿನಲ್ಲಿ ವಾಸವಿತ್ತು. ಇತ್ತ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.