ಇಂದು ವಂದೇ ಮಾತರಂ ಗೀತೆಯನ್ನು ಮುಂದಿಟ್ಟುಕೊಂಡು ದೇಶದ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಮುಸ್ಲಿಮರು ಆಯ್ಕೆಯಿಂದ ಭಾರತೀಯರಾಗಿದ್ದಾರೆರೇ ಹೊರತು ಆಕಸ್ಮಿಕವಾಗಿಲ್ಲ. ನಮ್ಮ ಪೂರ್ವಜರು ಪ್ರೀತಿಯಿಂದ ಈ ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ನವದೆಹಲಿ: ಸೋಮವಾರ ಲೋಕಸಭೆಯಲ್ಲಿ ವಂದೇ ಮಾತರಂಗೆ 150 ವರ್ಷ ಪೂರ್ಣ ಹಿನ್ನೆಲೆ ಚರ್ಚೆ ನಡೆದಿತ್ತು. ಉತ್ತರ ಪ್ರದೇಶದ ಕೈರಾನ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದೆ ಇಕ್ರಾ ಹಸನ್ ಅವರು ತಮ್ಮ ಮಾತುಗಳನ್ನು ಸದನದ ಮುಂದೆ ಇರಿಸಿದರು. ಈ ವೇಳೆ ವಂದೇ ಮಾತರಂ ಗೀತೆಯ ಅರ್ಥವನ್ನು ಹೇಳುತ್ತಾ ಕೇಂದ್ರ ಸರ್ಕಾರದ ವಿರುದ್ದ ಆಕ್ರಮಣಕಾರಿಯಾಗಿ ವಾಗ್ದಾಳಿ ನಡೆಸಿದರು. ಇಂದು ನಾವು ವಂದೇ ಮಾತರಂ ಗೀತೆಯಲ್ಲಿರುವ ಪ್ರತಿಯೊಂದು ಪದಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ವಂದೇ ಮಾತರಂ ದೇಶದ ಪ್ರಕೃತಿಗೆ ವಂದನೆ ಸಲ್ಲಿಸಿದರು.

ಇಂದು ವಂದೇ ಮಾತರಂ ಗೀತೆಯನ್ನು ಮುಂದಿಟ್ಟುಕೊಂಡು ದೇಶದ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಮುಸ್ಲಿಮರು ಆಯ್ಕೆಯಿಂದ ಭಾರತೀಯರಾಗಿದ್ದಾರೆರೇ ಹೊರತು ಆಕಸ್ಮಿಕವಾಗಿಲ್ಲ. ನಮ್ಮ ಪೂರ್ವಜರು ಪ್ರೀತಿಯಿಂದ ಈ ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಹಾನ್ ನಾಯಕರಾದ ಸುಭಾಶ್ ಚಂದ್ರ ಬೋಸ್ ಮತ್ತು ಗುರು ರವೀಂದ್ರನಾಥ್ ಟ್ಯಾಗೋರ್ ಅವರ ಪರಮಾರ್ಶೆಯಲ್ಲಿ ವಂದೇ ಮಾತರಂ ಗೀತೆಯಾಗಿದೆ. ಇಂದು ನೀವು ಮಹಾನ್ ನಾಯಕರ ನಿರ್ಧಾರವನ್ನು ಪ್ರಶ್ನೆ ಮಾಡುತ್ತಿದ್ದೀರಾ ಎಂದು ಕೇಂದ್ರ ಸರ್ಕಾರವನ್ನು ಸಂಸದೆ ಪ್ರಶ್ನೆ ಮಾಡಿದರು.

ದೇಶದ ಜಲ, ಅರಣ್ಯ, ಭೂಮಿ, ಹಸಿರು ಮತ್ತು ಸ್ವಚ್ಛ ಗಾಳಿ

ಮುಂದುವರಿದ ಮಾತನಾಡಿದ ಎಸ್‌ಪಿ ಸಂಸದೆ ಇಕ್ರಾ, ಮಹಾನ್ ವ್ಯಕ್ತಿಗಳು ವಂದೇ ಮಾತರಂ ಗೀತೆಯನ್ನು ಒಪ್ಪಿಕೊಂಡು ದೇಶದ ಎಲ್ಲಾ ವರ್ಗಗಳನ್ನು ಒಗ್ಗೂಡಿಸಿದರು. ಇಂದು ವಂದೇ ಮಾತರಂ ಗೀತೆಯಲ್ಲಿನ ಆತ್ಮವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಈ ಗೀತೆ ದೇಶದ ಜಲ, ಅರಣ್ಯ, ಭೂಮಿ, ಹಸಿರು ಮತ್ತು ಸ್ವಚ್ಛ ಗಾಳಿಗೆ ವಂದನೆಯನ್ನು ಸಲ್ಲಿಸುತ್ತದೆ. ಪ್ರತಿಯೊಬ್ಬ ಭಾರತೀಯನು ಆರೋಗ್ಯ, ಗೌರವ ಮತ್ತು ಸುರಕ್ಷಿತವಾಗಿರಲಿ ಎಂದು ಹೇಳುತ್ತದೆ.

ಸುಜಲಾಮ್ ಸುಫಾಲಮ್ ಅಂದ್ರೆ ಭಾರತದ ಸಾಕಷ್ಟು ಜಲಮೂಲಗಳನ್ನು, ಜೀವಂತ ನದಿಗಳನ್ನು ಹೊಂದಿರುವ ಸದಾ ಹರಿಯುವ ಜೀವ ನೀಡುವ ದೇಶ. ಇಂದಿನ ಯಮುನಾ ನದಿಯ ಸ್ಥಿತಿ ನೋಡಿ. ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ 2025 ರ ವರದಿಯ ಪ್ರಕಾರ, ನದಿಯ ಹಲವು ಭಾಗಗಳಲ್ಲಿ ಬಿಒಡಿ (biochemical oxygen demand) ಮಟ್ಟ 127 ಮಿ.ಗ್ರಾಂಗೆ ತಲುಪಿದೆ. ಆದ್ರೆ ಈ ಪ್ರಮಾಣ ಲೀಟರ್‌ಗೆ 3 ಮಿಗ್ರಾಂ ಇರಬೇಕು. ನದಿಯನ್ನು ಉಳಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಮಾಮಿ ಗಂಗೆ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

ಇದು ಕೇವಲ ನದಿ ಸಮಸ್ಯೆಯಲ್ಲ, ರೈತರ ಸಂಕಟವಾಗಿದೆ. ಕೇಂದ್ರ ಸರ್ಕಾರ 'ನಮಾಮಿ ಗಂಗೆ' ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದೆ. ಆದ್ರೆ ಇಂದಿಗೂ ರೈತರು ಅನಿವಾರ್ಯವಾಗಿ ಇದೇ ಕಲುಷಿತ ನೀರು ಬಳಸಿ ಕೃಷಿ ಮಾಡುತ್ತಿದ್ದು, ಇದೇ ಆಹಾರವನ್ನು ನಾವೆಲ್ಲರೂ ಸೇವಿಸುತ್ತಿದ್ದೇವೆ. ನದಿಯ ನೀರು ಕಲುಷಿತವಾದ್ರೆ ಸುಫಲಾಮ್ ಹೇಗೆ ಆಗುತ್ತೆ ಎಂದು ಮೋದಿ ಸರ್ಕಾರವನ್ನು ಇಕ್ರಾ ಹಸನ್ ಪ್ರಶ್ನೆ ಮಾಡಿದರು.

ಮಲಯಜ ಶೀತಲಂ ಅರ್ಥ ಪರ್ವತಗಳಿಂದ ಬರುವ ತಂಪಾದ ಗಾಳಿ. ಈ ವಾಯು ಜೀವವನ್ನು ನೀಡಿ ಅನಾರೋಗ್ಯಗಳಿಂದ ದೂರವಿಡುತ್ತದೆ. ಆದ್ರೆ ಇಂದಿನ ಭಾರತದ ವಾಯು ಗುಣಮಟ್ಟ ಎಲ್ಲಿಗೆ ತಲುಪಿದೆ ಎಂದು ಪ್ರಶ್ನಿಸಿದ ಸಂಸದೆ, ಸಂಸತ್‌ನಿಂದ ಹೊರಗೆ ಹೆಜ್ಜೆಯಿಟ್ರೆ ವಿಷಕಾರಿ ಗಾಳಿ ಉಸಿರಾಡುತ್ತೇವೆ. ಇಂದು ವಿಷಕಾರಿ ಗಾಳಿ ನಮ್ಮ ದೇಹ ಪ್ರವೇಶಿಸುತ್ತಿದೆ.

ಇದನ್ನೂ ಓದಿ: ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು

ಬಂಡವಾಳಶಾಹಿಗಳಿಗೆ ಭೂಮಿ

ಭಾರತದಂತಹ ದೇಶ ಯಾವಾಗಲೂ ಪ್ರಕೃತಿಗೆ ವಂದನೆಯನ್ನು ಸಲ್ಲಿಸುತ್ತದೆ. ಆದ್ರೆ ಇಂದು ಪ್ರಕೃತಿಯನ್ನು ರಕ್ಷಿಸುವಂತಹ ಕಾನೂನುಗಳನ್ನು ತೆಗೆದು ಹಾಕಲಾಗುತ್ತಿದೆ. ಸೇವಿಸುವ ಗಾಳಿ ಸ್ವಚ್ಛವಾಗಿಲ್ಲ ಅಂದ್ರೆ ಸುಜಲಾಂ ಹೇಗೆ ಆಗುತ್ತದೆ. ಸುಜಲಾಮ್ ಉಳಿದ್ರೆ ಮಾತ್ರ ಸುಫಲಾಂ ಆಗಲಿದೆ. ಶಸ್ಯ ಶಮ್ಲಂ ಎಂದರೆ ಭೂಮಿ ಫಲವತ್ತಾಗಿದ್ದು, ಹೊಲಗಳು ಬೆಳೆಗಳಿಂದ ತುಂಬಿದ್ದು, ರೈತ ಹತಾಶೆಯಲ್ಲಿ ಇರುವುದಿಲ್ಲ. ಇಂದು ರೈತ ಹವಾಮಾನ ವೈಪರೀತ್ಯದಿಂದ ಮಾತ್ರವಲ್ಲ, ಮಾಲಿನ್ಯ ಮತ್ತು ವ್ಯವಸ್ಥೆಯ ನೀತಿಗಳಿಂದಲೂ ಸಾಯುತ್ತಿದ್ದಾನೆ ಎಂದರು.

ಇಂದು ವಂದೇ ಮಾತರಂ ಗೀತೆಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ದೇಶದ ಭೂಮಿಯನ್ನು ಬಂಡವಾಳಶಾಹಿಗಳಿಗೆ ನೀಡಲಾಗುತ್ತಿದೆ. ಬಲವಂತವಾಗಿ ಬುಡಕಟ್ಟು ಜನಾಂಗದವರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಗುತ್ತಿದೆ. ಮಾತರಂ ಅಂದ್ರೆ " ಮಾತೃಭೂಮಿಯನ್ನು ಹೊಗಳುವುದಲ್ಲದೆ, ಈ ಭೂಮಿಯ ಮೇಲಿನ ಪ್ರತಿಯೊಬ್ಬ ಮಹಿಳೆ, ಮಗಳು ಮತ್ತು ಮಹಿಳೆಗೆ ಗೌರವದ ಬಗ್ಗೆ ಹೇಳಲಾಗುತ್ತದೆ. ಅಂಕಿಅಂಶಗಳನ್ನು ನೋಡಿದರೆ, ದೇಶದಲ್ಲಿ ಪ್ರತಿ ವರ್ಷ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಹೇಳಿದರು.

ಇದನ್ನೂ ಓದಿ: ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ

View post on Instagram