Asianet Suvarna News Asianet Suvarna News

Breaking: 17 ದಿನಗಳ ಬಳಿಕ ಸುರಂಗದಿಂದ ಹೊರಬಂದ ಕಾರ್ಮಿಕರು!

Silkyara tunnel rescue ಬರೋಬ್ಬರಿ 17 ದಿನಗಳ ಕಾಲ ಸುರಂಗ ಮಾರ್ಗದ ಒಳಗೆ ಸಿಲುಕಿದ್ದ 41 ಕಾರ್ಮಿಕರನ್ನು ಮಂಗಳವಾರ ಯಶಸ್ವಿಯಾಗಿ ಹೊರತರಲಾಗಿದೆ. ಕಾರ್ಮಿಕರು ಹೊರಬರುತ್ತಿದ್ದಂತೆ ರಕ್ಷಣಾ ಕಾರ್ಯಚರಣೆಯಲ್ಲಿ ಇದ್ದವರ ಸಂಭ್ರಮ ಮುಗಿಲು ಮುಟ್ಟಿತ್ತು.
 

Uttarkashi Silkyara tunnel rescue after 17 days 41 workers trapped inside the tunnel Come outside san
Author
First Published Nov 28, 2023, 8:03 PM IST

ಉತ್ತರಕಾಶಿ (ನ.28): ಇನ್ನೇನು ಬದುಕುವ ಯಾವ ಮಾರ್ಗವೂ ಇಲ್ಲದೇ ಸಾವೇ ದಿಕ್ಕು ಎಂದು ಕಣ್ಣೀರಿಟ್ಟಿದ್ದ 41 ಕಾರ್ಮಿಕರನ್ನು ರಕ್ಷಿಸುವಲ್ಲಿ ಕೊನೆಗೂ ಸರ್ಕಾರ ಯಶಸ್ವಿಯಾಗಿದೆ. 17 ದಿನಗಳ ನಿರಂತರ ಪ್ರಯತ್ನದಿಂದಾಗಿ 41 ಕಾರ್ಮಿಕರು ಈಗ ಸಾವನ್ನೇ ಗೆದ್ದು ಬಂದಿದ್ದಾರೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕೊರೆಯುತ್ತಿದ್ದ ಸುರಂಗ ಕೊನೇ ಹಂತಕ್ಕೆ ಬಂದಿತು. ಅದಾದ ಕೆಲವೇ ಹೊತ್ತಿನಲ್ಲಿ ಕಾರ್ಮಿಕರು ಒಬ್ಬೊಬ್ಬರಾಗಿ ಸುರಂಗದಿಂದ ಹೊರಬಂದರು. ಸುರಂಗದ ಒಳಗಡೆಯೇ ಕಾರ್ಮಿಕರನ್ನು ವೈದ್ಯಕೀಯ ತಪಾಸಣೆ ಮಾಡಿ ಬಳಿಕ ಅವರನ್ನು ಹೊರತರಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಕಾರಣದಿಂದಾ ಸುರಂಗದೊಳಗೆ ತಾತ್ಕಾಲಿಕ ವೈದ್ಯಕೀಯ ಸೌಲಭ್ಯವನ್ನು ಮಾಡಲಾಗಿತ್ತು. ಸಿಕ್ಕಿಬಿದ್ದ ಕಾರ್ಮಿಕರನ್ನು ಹೊರತಂದ ಬಳಿಕ, ಈ ಸ್ಥಳದಲ್ಲಿ ಆರೋಗ್ಯ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಸಮಸ್ಯೆ ಕಂಡುಬಂದಲ್ಲಿ ಆರೋಗ್ಯ ಇಲಾಖೆಯಿಂದ 8 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ವೈದ್ಯರು ಹಾಗೂ ತಜ್ಞರ ತಂಡವನ್ನು ನಿಯೋಜಿಸಲಾಗಿದೆ.ಒಟ್ಟು ಈ ಕಾರ್ಯಾಚರಣೆ 398 ಗಂಟೆಗಳ ಕಾಲ ನಡೆದಿದೆ. ಮೊದಲ ಹಂತದಲ್ಲಿ ಒಟ್ಟು 12  ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

ಮುಂದಿನ ಅರ್ಧಗಂಟೆಯಲ್ಲಿ ಸುರಂಗದಲ್ಲಿ ಸಿಲುಕಿರುವ ಉಳಿದ ಕಾರ್ಮಿಕರು 67 ಮೀಟರ್‌ ಕೊರೆದಿರುವ ಪೈಪ್‌ನ ಮೂಲಕ ಹೊರ ಬರಲಿದ್ದಾರೆ. ಅದರೊಂದಿಗೆ ಕಾರ್ಮಿಕರನ್ನು ಉಳಿಸುವ ನಿಟ್ಟಿನಲ್ಲಿ ನಡೆದ ರಣರೋಚಕ ಆಪರೇಷನ್‌ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ರಕ್ಷಣೆಯಾಗೊ ಹೊರಬಂದ ಮೊದಲ ಕಾರ್ಮಿಕನಿಗೆ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಹಾಗೂ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದ ಕೇಂದ್ರ ಸಚಿವ ವಿಕೆ ಸಿಂಗ್‌ ಹಾರ ಹಾಕಿ ಅಭಿನಂದಿಸಿದರು.

ಉತ್ತರಕಾಶಿ: ರಕ್ಷಣಾ ಕಾರ್ಯ ಅಂತಿಮ ಘಟ್ಟಕ್ಕೆ: ಇಂದು 41 ಜನ ಕಾರ್ಮಿಕರು ಹೊರಬರುವ ಸಾಧ್ಯತೆ

ಕಾರ್ಮಿಕರ ರಕ್ಷಣೆಗೆ ಸಿಎಂ ಧಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಟನಲ್‌ ಮುಂದೆ ಅಂಬ್ಯುಲೆನ್ಸ್ ಸಾಲು ಗಟ್ಟಿ ನಿಂತಿದ್ದವು. ಮೊದಲ ಕಾರ್ಮಿಕ ರಕ್ಷಣೆಯಾದ ಬೆನ್ನಲ್ಲಿಯೇ ಆತನನ್ನು ಕರೆದುಕೊಂಡು ಸ್ಥಳದಿಂದ ಮೊದಲ ಅಂಬ್ಯುಲೆನ್ಸ್ ಹೊರಟಿತು. ಈ ಕಾರ್ಮಿಕರು ಕಳೆದ 17 ದಿನಗಳಿಂದ ಸುರಂಗದಲ್ಲಿದ್ದರು.

Exclusive: ಇನ್ನು 1-2 ಗಂಟೆಗಳಲ್ಲಿ ಸಿಲ್‌ಕ್ಯಾರಾ ಸುರಂಗದಿಂದ ಹೊರಬರಲಿದ್ದಾರೆ 41 ಕಾರ್ಮಿಕರು!

'ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರತರುವ ಕಾರ್ಯ ಆರಂಭವಾಗಿದೆ. ಇದುವರೆಗೆ 8 ಕಾರ್ಮಿಕರನ್ನು ರಕ್ಷಿಸಲಾಗಿದೆ. ಸುರಂಗದಲ್ಲಿ ನಿರ್ಮಿಸಲಾದ ತಾತ್ಕಾಲಿಕ ವೈದ್ಯಕೀಯ ಶಿಬಿರದಲ್ಲಿ ಎಲ್ಲಾ ಕಾರ್ಮಿಕರ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ." ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿದ್ದಾರೆ    
 

 

Follow Us:
Download App:
  • android
  • ios