Asianet Suvarna News Asianet Suvarna News

Exclusive: ಇನ್ನು 1-2 ಗಂಟೆಗಳಲ್ಲಿ ಸಿಲ್‌ಕ್ಯಾರಾ ಸುರಂಗದಿಂದ ಹೊರಬರಲಿದ್ದಾರೆ 41 ಕಾರ್ಮಿಕರು!

Silkyara Tunnel ಸಿಲ್‌ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ತಲುಪುವ ಕಾರ್ಯ ಅಂತಿಮ ಹಂತದಲ್ಲಿದೆ. ಕಬ್ಬಿಣದ ಅವಶೇಷಗಳು ಬಂದಿದ್ದರಿಂದ ಉತ್ಖನನ ಸ್ಥಗಿತಗೊಂಡಿದ್ದು, ಮತ್ತೆ ಆರಂಭಿಸಲಾಗಿದೆ. ದೆಹಲಿಯಿಂದ ತಜ್ಞರ ತಂಡ ಬಂದಿದೆ.

Uttarkashi tunnel collapse Just 5 meters from the workers trapped in the tunnel good news soon san
Author
First Published Nov 23, 2023, 12:46 PM IST

ನವದೆಹಲಿ (ನ.23): ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಕಾರ್ಮಿಕರನ್ನು ಹೊರತರುವ ನಿರೀಕ್ಷೆ ಇಡಲಾಗಿತ್ತು. ಆದರೆ ಡ್ರಿಲ್ಲಿಂಗ್‌ ಸಮಯದಲ್ಲಿ ಕಬ್ಬಿಣದ ಅವಶೇಷಗಳು ಎದುರಾದ ಕಾರಣದಿಂದ ಔಗರ್‌ ಯಂತ್ರವನ್ನು ನಿಲ್ಲಿಸಲಾಯಿತು. ದೆಹಲಿಯ ತಜ್ಞರ ತಂಡವು ಯಂತ್ರವನ್ನು ಸರಿಪಡಿಸಿದೆ. ನಂತರ ಅಡಚಣೆಯನ್ನು ರೂಪಿಸಿದ ಅವಶೇಷಗಳನ್ನು ತೆಗೆದುಹಾಕಲಾಗಿದ್ದು, ಕಾರ್ಮಿಕರನ್ನು ತಲುಪುವ ಮಾರ್ಗದ ಡ್ರಿಲ್ಲಿಂಗ್‌ ಪ್ರಾರಂಭಿಸಲಾಗಿದೆ. ಮುಂದಿನ 1 ಅಥವಾ 2 ಗಂಟೆಗಳಲ್ಲಿ 41 ಕಾರ್ಮಿಕರು ಸುರಂಗದಿಂದ ಹೊರಬರಲಿದ್ದಾರೆ ಎಂದು ತಿಳಿಸಲಾಗಿದೆ.

ಸುರಂಗ ನಿರ್ಮಾಣ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಬಳಸಲಾಗುವ ದೊಡ್ಡ ಯಂತ್ರಗಳು ಮತ್ತು ಕಂಪ್ರೆಸರ್ ಯಂತ್ರಗಳ ಮಾಲೀಕ ಶೈಲೇಶ್ ಗುಲಾಟಿ ಅವರೊಂದಿಗೆ ಮಾತನಾಡಿರುವ ಏಷ್ಯಾನೆಟ್ ನ್ಯೂಸ್, ಕಾರ್ಮಿಕರನ್ನು ಸ್ಥಳಾಂತರಿಸಲು ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ತಿಳಿಸಿದರು. ಇನ್ನು 5-6 ಮೀಟರ್ ಮಾತ್ರ ಅಗೆಯಬೇಕಿದ್ದು, ಎದುರಿಗೆ ಕಬ್ಬಿಣದ ಅವಶೇಷಗಳು ಬರುತ್ತಿದ್ದರಿಂದ ಅಗೆಯುವುದನ್ನು ತಕ್ಷಣಕ್ಕೆ ನಿಲ್ಲಿಸಬೇಕಾಗಿತ್ತು. ಅವಶೇಷಗಳಲ್ಲಿ ಕಬ್ಬಿಣದ ಪೈಪ್‌ಗಳು ಮತ್ತು ರಾಡ್‌ಗಳು ಸಿಕ್ಕಿದ್ದವು. ಯಂತ್ರದ ಎರಡು ಪೈಪುಗಳು ಇದರಿಂದಾಗಿ ಬೆಂಡಾಗಿದ್ದವು. ದೆಹಲಿಯಿಂದ ತಜ್ಞರ ತಂಡ ಬಂದಿದ್ದು, ಬಳಿಕ ಯಂತ್ರವನ್ನು ದುರಸ್ತಿ ಮಾಡಲಾಗಿದೆ. ಮತ್ತೆ ಡ್ರಿಲ್ಲಿಂಗ್‌ ಕಾರ್ಯ ಆರಂಭವಾಗಿದೆ. ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಬಹುದು ಎಂದು ಹೇಳಿದ್ದಾರೆ.ಕಾರ್ಮಿಕರನ್ನು ಸ್ಥಳಾಂತರಿಸಲು ಸಿದ್ಧತೆಗಳು ಪೂರ್ಣಗೊಂಡಿವೆ: ಕಾರ್ಮಿಕರನ್ನು ಸ್ಥಳಾಂತರಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗುಲಾಟಿ ತಿಳಿಸಿದ್ದಾರೆ. ನಾವು ಆಹಾರ ಪೈಪ್ ಅನ್ನು ಅವರು ಇರುವ ಸ್ಥಳದ ತನಕ ಮುಟ್ಟಿಸಿದ್ದೇವೆ. ಅದು ಆರು ಇಂಚು ಅಗಲವಾಗಿದೆ  800 ಎಂಎಂ ಪೈಪ್ ಹಾಕಲು ಮಾಡುತ್ತಿರುವ ಅಗೆಯುವ ಕಾಮಗಾರಿಗೆ ಅಡ್ಡಿಯಾಗಿದೆ. ಎಲ್ಲವೂ ಸರಿಯಾಗಿ ನಡೆದಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಉತ್ಖನನ ಯಾವಾಗ ಮುಗಿಯುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ದೆಹಲಿಯ ತಜ್ಞರ ತಂಡದ ಸಲಹೆಯ ನಂತರ, ಹೇಗೆ ಮುಂದುವರಿಯಬೇಕು ಎಂದು ನಿರ್ಧರಿಸಲಾಯಿತು.

ಸಿಲ್‌ಕ್ಯಾರಾ ಸುರಂಗ ಭೂಕುಸಿತ: ಕಾರ್ಮಿಕರ ರಕ್ಷಣೆಗೆ ಬೆಂಗಳೂರು ತಂಡ

ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ: "ಒಳಗೆ ಸಿಕ್ಕಿಬಿದ್ದ ಜನರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಆಹಾರ ನೀಡಲು ಅಳವಡಿಸಿದ ಪೈಪ್ ಮೂಲಕ ಮಾತುಕತೆ ನಡೆಸಲಾಗುತ್ತಿದೆ. ಧ್ವನಿ ಸ್ಪಷ್ಟವಾಗಿ ಹೋಗುತ್ತಿದೆ. ಕ್ಯಾಮೆರಾಗಳನ್ನು ಅಳವಡಿಸಿ ಒಳಗಿನ ಪರಿಸ್ಥಿತಿಯನ್ನು ನೋಡಲಾಗಿದೆ. ಅವರ ಸ್ಥಿತಿ ಚೆನ್ನಾಗಿದೆ. ಆದರೆ ಅವರ ಮಾನಸಿಕ ಸ್ಥಿತಿ ದುರ್ಬಲವಾಗುತ್ತಿದೆ. ಕೂಲಿ ಕಾರ್ಮಿಕರಿಗೆ ಸಂಪೂರ್ಣ ಆಹಾರ ನೀಡಲಾಗುತ್ತಿದೆ.ಹಗ್ಗಗಳನ್ನು ಅಳವಡಿಸಿದ್ದೇವೆ.ಇದರ ಸಹಾಯದಿಂದ ಆಹಾರ ಕಳುಹಿಸಲಾಗುತ್ತಿದೆ.ಮೊದಲು ಒಣಹಣ್ಣುಗಳನ್ನು ನೀಡಲಾಗುತ್ತಿತ್ತು,ಈಗ ರೊಟ್ಟಿ,ಅನ್ನದಂತಹ ಸಂಪೂರ್ಣ ಆಹಾರ ನೀಡಲಾಗುತ್ತಿದೆ' ಎಂದು ಗುಲಾಟಿ ತಿಳಿಸಿದ್ದಾರೆ.

ಅಪಾಯ ತಂದೊಡ್ಡಿತಾ ದೇವರ ಕೋಪ..? ಕತ್ತಲೆ ಕೂಪದಿಂದ ಪಾರಾಗೋಕೆ ಇನ್ನೆಷ್ಟು ಸಮಯ ಬೇಕು..?

Follow Us:
Download App:
  • android
  • ios