Asianet Suvarna News Asianet Suvarna News

ಮದ್ವೆ ಮರುದಿನವೇ ಹುಡ್ಗಿ ಎಸ್ಕೇಪ್... ಚಿನ್ನ ಹಣದೊಂದಿಗೆ ಪರಾರಿಯಾದ ಕಿಲಾಡಿ ವಧು

ನೀವು ಸೋನಂ ಕಪೂರ್ ಅಭಿನಯದ ಡಾಲಿ ಕೀ ಡೋಲಿ ಸಿನಿಮಾ ನೋಡಿದ್ದೀರಾ? ಪಕ್ಕಾ ಅದೇ ರೀತಿ ಸಿನಿಮೀಯ ಶೈಲಿಯ ಘಟನೆಯೊಂದು ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

Uttar Pradesh Dolly ki Doli movie style robber, Bride Runs Away from in laws house With Jewellery and cash in Kanpur akb
Author
First Published Oct 23, 2022, 4:30 PM IST

ಕಾನ್ಪುರ: ನೀವು ಸೋನಂ ಕಪೂರ್ ಅಭಿನಯದ ಡಾಲಿ ಕೀ ಡೋಲಿ ಸಿನಿಮಾ ನೋಡಿದ್ದೀರಾ? ಪಕ್ಕಾ ಅದೇ ರೀತಿ ಸಿನಿಮೀಯ ಶೈಲಿಯ ಘಟನೆಯೊಂದು ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮದುವೆಯ ಮರುದಿನವೇ ಗಂಡನ ಮನೆಯಿಂದ ವಧು ಚಿನ್ನಾಭರಣ ಹಣ ಎತ್ತಿಕೊಂಡು ಕಾಲ್ಕಿತ್ತಿದ್ದಾಳೆ. ಹಣ ನಗದು ಮಾತ್ರವಲ್ಲದೇ ಗಂಡನ ಮನೆಯ ಇನ್ನು ಹಲವು ವಸ್ತುಗಳನ್ನು ಎಗರಿಸಿಕೊಂಡು ಕಿಲಾಡಿ ವಧು ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇಷ್ಟು ಮಾತ್ರವಲ್ಲದೇ ಈಕೆ ತನ್ನ ಗಂಡನಿಗೆ ಕರೆ ಮಾಡಿ ತನ್ನನ್ನು ಇನ್ನು ಮುಂದೆ ಸಂಪರ್ಕಿಸದಂತೆ ಹೇಳಿದ್ದಾರೆ. ನಾನು ನಿನ್ನನ್ನು ಪ್ರೀತಿಸುವುದಿಲ್ಲ. ನನಗೆ ಕರೆ ಮಾಡಬೇಡ ಎಂದು ಆಕೆ ತನ್ನನ್ನು ಮದುವೆಯಾದ ಗಂಡಿಗೆ ಹೇಳಿ ಫೋನ್ ಕರೆ ಕಡಿತಗೊಳಿಸಿದ್ದಾಳೆ. ಈ ಘಟನೆ ಆಕ್ಟೋಬರ್ ನಾಲ್ಕರಂದೇ ನಡೆದಿದ್ದು, ಘಟನೆಯಿಂದ ಆಘಾತಕ್ಕೊಳಗಾದ ಹುಡುಗನ ಕಡೆಯವರು ಏನು ಮಾಡಬೇಕು ಎಂದು ತೋಚದೇ ನಿನ್ನೆ (ಆಕ್ಟೋಬರ್ 22 ರಂದು) ದೂರು ದಾಖಲಿಸಿದ್ದರಿಂದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Marriage Fraud: 60 ವರ್ಷದ ಮುದುಕನ ಮದುವೆಗೆ ತಂದಿದ್ದ ಸೀರೆ, ತಾಳಿ ಜತೆ ವಧು ಪರಾರಿ..!

ಕಾನ್ಪುರ ಜಿಲ್ಲೆಯ ಬಿಲ್ಹಾಪುರದಲ್ಲಿ(Bilhaur) ಈ ಬಗ್ಗೆ ಪ್ರಕರಣ ದಾಖಲಾಗಿದೆ. ಜಡೇಪುರ ಗ್ರಾಮದ (Jadepur village) ನಿವಾಸಿ ಅರವಿಂದ್ ಎಂಬುವವರು ಈ ಬಗ್ಗೆ ದೂರು ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ ತಕ್ತಾಲಿ ಗ್ರಾಮದ ಇಬ್ಬರು ಈತನಿಗೆ ಮದುವೆ ನಿಗದಿ ಮಾಡಲು 70 ಸಾವಿರ ಹಣದ ಬೇಡಿಕೆ ಇಟ್ಟಿದ್ದರು. ನಂತರ ಬಿಹಾರದ ಗಯಾಕ್ಕೆ ಕರೆದೊಯ್ದ ಅಲ್ಲಿ ರುಚಿ ಎಂಬ ಹುಡುಗಿಯೊಂದಿಗೆ ಈತನ ವಿವಾಹ ನಿಗದಿಪಡಿಸಿದ್ದರು. ನಂತರ ಸೆಪ್ಟೆಂಬರ್ 30 ರಂದು ಮೊದಲೇ ನಿಗದಿಯಾದಂತೆ ಈತನಿಂದ 70 ಸಾವಿರ ಹಣ ಪಡೆದ ಆ ಇಬ್ಬರು ಹೊಟೇಲೊಂದಕ್ಕೆ ಈತನನ್ನು ಕರೆದೊಯ್ದು ಆತನಿಗೆ ಹುಡುಗಿ ಫೋಟೋವನ್ನು ತೋರಿಸಿದರು. ನಂತರ ಆಕ್ಟೋಬರ್ ಒಂದರಂದು ಗಯಾದ ದೇಗುಲವೊಂದರಲ್ಲಿ ಈತನಿಗೆ ಆ ಹುಡುಗಿಯೊಂದಿಗೆ ವಿವಾಹ ಮಾಡಲಾಗಿದೆ.  ಮದುವೆಯ ನಂತರ ಈತ ತನ್ನ ಪತ್ನಿಯೊಂದಿಗೆ ತನ್ನ ಊರಾದ ಕಾನ್ಪುರದ(Kanpur) ಜಡೇಪುರ ಗ್ರಾಮಕ್ಕೆ ಬಂದಿದ್ದಾನೆ. 

ವಧು, ಪೋಷಕರು, ಪೂಜಾರಿ ಎಲ್ಲರೂ ನಕಲಿ.. ಮದುವೆ ಆಸೆಗೆ ಹಣ ಕಳೆದುಕೊಂಡ!

ಇದಾದ ಬಳಿಕ ಆಕ್ಟೋಬರ್ 4 ರಂದು ವಧು ಈತನ ಮನೆಯಲ್ಲಿದ್ದ 30 ಸಾವಿರ ನಗದಿನ ಜೊತೆ ಆಕೆಗೆ ಮದುವೆಯಲ್ಲಿ ನೀಡಲಾಗಿದ್ದ ಚಿನ್ನಾಭರಣ ಹಾಗೂ ಬಟ್ಟೆಯೊಂದಿಗೆ ಪರಾರಿಯಾಗಿದ್ದಾಳೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿ ಮಹಿಳೆ ಹಾಗೂ ಆಕೆಯ ಜೊತೆಗಿರುವ ಖದೀಮರನ್ನು ಕೂಡಲೇ ಬಂಧಿಸಲಾಗುವುದು ಎಂದು ಬಿಲ್ಹಾಪುರ ಠಾಣೆಯ ಮುಖ್ಯಸ್ಥ(Station House Officer), ಜಗದೀಶ್ ಪಾಂಡೆ (Jagdish Pandey) ತಿಳಿಸಿದ್ದಾರೆ. 
 

Follow Us:
Download App:
  • android
  • ios