Marriage Fraud: 60 ವರ್ಷದ ಮುದುಕನ ಮದುವೆಗೆ ತಂದಿದ್ದ ಸೀರೆ, ತಾಳಿ ಜತೆ ವಧು ಪರಾರಿ..!
* ಮೂರು ಮಕ್ಕಳ ತಂದೆ, ವಿಧುರನ ಮದುವೆಗೆ ಒಪ್ಪಿ ಕೈ ಕೊಟ್ಟ ಚಂದ್ರಿಕಾ
* ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿದ್ದ ಮಹಿಳೆ
* ಚಂದ್ರಿಕಾ ವಂಚನೆ ವಿರುದ್ಧ ಪೊಲೀಸರಿಗೆ ನಂಜುಂಡಪ್ಪ ದೂರು
ಶಿವಮೊಗ್ಗ(ಡಿ.10): 60 ವರ್ಷದ ವಿಧುರರೊಬ್ಬರಿಗೆ ಎರಡನೇ ಮದುವೆ(Marriage) ಆಗುವುದಾಗಿ ನಂಬಿಸಿ ಮದುವೆ ಆಗುವುದಕ್ಕೆ ತಂದಿದ್ದ ತಾಳಿ, ಕಾಲುಂಗರದ ಜೊತೆಗೆ ಮಹಿಳೆಯೊಬ್ಬಳು(Woman) ಪರಾರಿ ಆಗಿರುವ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆಯೇ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿವಮೊಗ್ಗ(Shivamogga) ಜಿಲ್ಲೆಯ ಹೊಳೆಹೊನ್ನೂರು(Holehonnuru)ನಂಜುಂಡಪ್ಪ (60) ಮದುವೆಯಾಗಿ 30 ವರ್ಷವಾಗಿದೆ. ಒಂದು ಗಂಡು ಎರಡು ಹೆಣ್ಣು ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ಈ ನಡುವೆ 7 ತಿಂಗಳ ಹಿಂದೆ ನಂಜುಂಡಪ್ಪನ ಪತ್ನಿ ಅನಾರೋಗ್ಯದಿಂದ(Illness) ಮೃತಪಟ್ಟಿದ್ದರು(Death). ಆ ಬಳಿಕ ನಂಜುಂಡಪ್ಪನಿಗೆ ಒಂಟಿತನ ಕಾಡೋಕೆ ಶುರುವಾಗಿತ್ತು. ಹೀಗಾಗಿ ಮತ್ತೊಂದು ಮದುವೆಯಾಗಲು ನಿರ್ಧರಿಸಿದ ನಂಜುಂಡಪ್ಪ. ಶಿವಮೊಗ್ಗದ ಕನ್ನಡ ಮ್ಯಾಟ್ರಿಮೊನಿಯಲ್ಲಿ(Kannada Matrimony) ನೋಂದಣಿ ಮಾಡಿಕೊಂಡಿದ್ದರು. ಆ ಬಳಿಕ ಬೆಂಗಳೂರಿನ(Bengaluru) ಯಲಹಂಕದ ಚಂದ್ರಿಕಾ ಎಂಬ ಮಹಿಳೆ ನಂಜುಂಡಪ್ಪನನ್ನ ಒಪ್ಪಿಕೊಂಡು ಮದುವೆಯಾಗಲು ನಿರ್ಧರಿಸಿದ್ದಾರೆ.
Love Sex Dhokha: ಮದುವೆ ಮಾತುಕತೆಗೆಂದು ಕರೆಸಿ ಕಾರಲ್ಲಿ ಸೆಕ್ಸ್, ಆಮೇಲೆ ನಂಬರ್ ಬ್ಲಾಕ್!
ಚಂದ್ರಿಕಾ ಮದುವೆಗೆ ಒಪ್ಪಿಗೆ ನೀಡುತ್ತಿದ್ದಂತೆ ಮದುವೆಗೆ ದಿನಾಂಕ ಕೂಡ ಫಿಕ್ಸ್ ಆಗಿ ನ.15ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ, ಸಿಗಂಧೂರಿನಲ್ಲಿ ಮದುವೆಗೆ ಅವಕಾಶ ಇಲ್ಲ ಎಂದಿದ್ದಾರೆ. ಆಗ ಶಿವಮೊಗ್ಗಕ್ಕೆ ಜೋಡಿ ವಾಪಸ್ ಬಂದಿದ್ದಾರೆ. ಆ ಸಂದರ್ಭದಲ್ಲಿ ಮದುವೆಗೆ ತಂದಿದ್ದ ಚಿನ್ನದ ತಾಳಿ, 4 ಬೆಳ್ಳಿ ಕಾಲುಂಗುರ, ಬೆಳ್ಳಿ ಕಾಲು ಚೈನ್, ಎರಡು ಬೆಳ್ಳಿ ಕೈ ಬಳೆ, ರೇಷ್ಮೆ ಸೀರೆ ಚಂದ್ರಿಕಾಳ ಬಳಿ ಇದ್ದವು. ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಬೈಕ್ ತರುವುದಾಗಿ ನಂಜುಂಡಪ್ಪ ಹೋದ ಸಮಯದಲ್ಲಿ ಚಂದ್ರಿಕಾ ಹಸಿವಾಗಿದೆ, ಹೋಟೆಲ್‌ಗೆ ಹೋಗುತ್ತೀನಿ ಎಂದು ಹೇಳಿದ್ದಾಳೆ. ಬಳಿಕ ಒಡವೆ, ಸೀರೆ ಜೊತೆಗೆ ಚಂದ್ರಿಕಾ ಪರಾರಿಯಾಗಿದ್ದಾರೆ(Abscond).
ಎಷ್ಟು ಹೊತ್ತಾದರೂ ಚಂದ್ರಿಕಾ ಬಾರದ ಕಾರಣ ತಾವು ಮೋಸ ಹೋಗಿರುವುದು ನಂಜುಂಡಪ್ಪನಿಗೆ ತಿಳಿದಿದೆ. ಇದೀಗ ನಂಜುಂಡಪ್ಪ ಪೊಲೀಸ್ ಠಾಣೆಗೆ(Police Station) ದೂರು(Complaint) ದಾಖಲಿಸಿದ್ದು, ಈ ಮಹಿಳೆಗಾಗಿ ಪೊಲೀಸರು(Police) ಹುಡುಕಾಟ ನಡೆಸಿದ್ದಾರೆ.
ಆಸೆ ತೋರಿಸಿ ಮಹಿಳೆಗೆ ವಂಚಿಸಿದ ಫೇಸ್ಬುಕ್ ಗೆಳೆಯ
ಬೆಂಗಳೂರು: ಟ್ರಾವೆಲ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಸಂಪಾದಿಸಬಹುದೆಂದು ನಂಬಿಸಿ ಮಹಿಳೆಯೊಬ್ಬರಿಂದ 4.97 ಲಕ್ಷ ರು. ಹಣ ಪಡೆದು ಫೇಸ್‌ಬುಕ್ ಗೆಳೆಯ ವಂಚಿಸಿರುವ ಘಟನೆ ನಗರದಲ್ಲಿ ಮಾ.02 ರಂದು ನಡೆದಿತ್ತು. ಬೆಳ್ಳಂದೂರು ನಿವಾಸಿ ಅನಿತಾ ಹಣ ಕಳೆದುಕೊಂಡಿದ್ದು, ಈ ಬಗ್ಗೆ ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
2020ರಲ್ಲಿ ಫೇಸ್‌ಬುಕ್‌ನಲ್ಲಿ ಅಪರಿಚಿತ ರವಿಕುಮಾರ್ ಅಲಿಯಾಸ್ ಬುಲೆಟ್ ರವಿ ಪರಿಚಯವಾಗಿತ್ತು. ತಾನು ಟ್ರಾವೆಲ್ ಬ್ಯುಸಿನೆಸ್ ಮಾಡುತ್ತಿರುವುದಾಗಿ ಹೇಳಿದ್ದ. ಬಳಿಕ ಈ ವ್ಯವಹಾರದಲ್ಲಿ ನೀವು ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಂಪಾದಿಸಬಹುದೆಂದು ನಂಬಿಸಿದ. ಆತನ ಮಾತನ್ನು ನಂಬಿ ಎರಡು ಹಂತದಲ್ಲಿ 4.97 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ಕಳುಹಿಸಿದೆ. ಆದರೆ ಹಣವನ್ನು ಹೂಡಿಕೆ ಮಾಡದೆ ಹಾಗೂ ಮರಳಿಸದೆ ವಂಚಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದರು.
Job Fraud Busted: ನಕಲಿ ದಾಖಲೆ ಸೃಷ್ಟಿಸಿ ಸೇನೆಗೆ ನೇಮಕ: ಹತ್ತು ಮಂದಿ ಅರೆಸ್ಟ್
ಲಿಂಗ ಪರಿವರ್ತನೆಗೆ ಮುಂದಾಗಿದ್ದ ಯುವತಿಗೆ ಮಹಿಳೆಯಿಂದಲೇ 2 ಲಕ್ಷ ದೋಖಾ!
ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಮುಂದಾಗಿದ್ದ ಮಹಿಳೆ ಮೋಸ ಹೋದ ಘಟನೆ ಲುಧಿಯಾನದಲ್ಲಿ ನಡದಿತ್ತು. ಉತ್ತರ ಪ್ರದೇಶದ 22 ವರ್ಷದ ಯುವತಿಗೆ 2 ಲಕ್ಷ ರೂ. ಮೋಸವಾಗಿದೆ.
ಲಿಂಗ ಬದಲಾವಣೆ ಮಾಡಿಕೊಳ್ಳಲು ಬಯಸಿದ್ದ ಯುವತಿಗೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರ ಪರಿಚಯವಾಗಿದೆ. ಹಿಮಾಚಲ ಪ್ರದೇಶದ ಮೂಲದ ಮಹಿಳೆ ಪಂಜಾಬ್‌ನ ಲುಧಿಯಾನಕ್ಕೆ ತೆರಳಿ ಮೋಸಹೋಗಿದ್ದಾರೆ. ತಾನು ಲಿಂಗ ಬದಲಾವಣೆ ಮಾಡಿಕೊಂಡಿದ್ದು ನಿಮಗೂ ಅನುಕೂಲವಾಗಲಿದೆ ಎಂದು ನಂಬಿಸಿದ್ದಳು.