Asianet Suvarna News Asianet Suvarna News

ಕಾಶಿ ವಿಶ್ವನಾಥ ಮಂದಿರಕ್ಕೆ 100 ಬಾರಿ ಭೇಟಿ ನೀಡಿದ ಉತ್ತರ ಪ್ರದೇಶದ ಮೊದಲ ಸಿಎಂ ಯೋಗಿ ಆದಿತ್ಯನಾಥ್!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳೆದ 6 ವರ್ಷದಲ್ಲಿ ಬರೋಬ್ಬರಿ 100 ಬಾರಿ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ್ದಾರೆ.ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ. 
 

Uttar Pradesh CM Yogi Adityanath visit Kashi Vishwanath temple 100 time become first cm of UP to achieve this feat ckm
Author
First Published Mar 18, 2023, 7:52 PM IST

ವಾರಣಾಸಿ(ಮಾ.18): ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೊಸ ದಾಖಲೆ ಬರೆದಿದ್ದಾರೆ.  ಕಳೆದ 6 ವರ್ಷದಲ್ಲಿ ಯೋಗಿ ಆದಿತ್ಯನಾಥ್ 100 ಬಾರಿ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಸೆಂಚುರಿ ಸಾಧನೆ ಮಾಡಿದ ಉತ್ತರ ಪ್ರದೇಶದ ಮೊದಲ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾರ್ಚ್ 17ರಂದು ಹಲವು ಅಭಿವೃದ್ಧಿ ಕಾಮಾಕಾರಿ ಪರಿಶೀಲನೆ ಹಾಗೂ ಯೋಜನೆಗೆ ಚಾಲನೆ ನೀಡಲು ಯೋಗಿ ಆದಿತ್ಯನಾಥ್ ವಾರಣಾಸಿಗೆ 2ದಿನದ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ 100ನೇ ಬಾರಿಗೆ ಕಾಶಿ ವಿಶ್ವನಾಂದ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಮತ್ತೊಂದು ವಿಶೇಷತೆ ಇದೆ. ಕಳೆದ 6 ವರ್ಷದಲ್ಲಿ ಯೋಗಿ ಆದಿತ್ಯನಾಥ್ 113ನೇ ಬಾರಿ ವಾರಣಾಸಿಗೆ ಭೇಟಿ ನೀಡುತ್ತಿದ್ದಾರೆ. ಇದರಲ್ಲಿ 100 ಬಾರಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಸರಾಸರಿ ಪ್ರಕಾರ, 2017ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯೋಗಿ ಆದಿತ್ಯನಾಥ್ ಪ್ರತಿ 21 ದಿನಕ್ಕೆ ಕಾಶಿ ವಿಶ್ವನಾಥನ ಸನ್ನಿಧಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. 

ಯೋಗಿ ಪ್ರತಾಪಕ್ಕೆ ಪತರಗುಟ್ಟಿದೆ ಮಾಫಿಯಾ: ಪಾಪಿಗಳ ಜಾತಕ ಜಾಲಾಡಿ ಯಮಪಾಶ ಹಾಕಿದ ಯುಪಿ ಸಿಎಂ..!

ಯೋಗಿ ಆದಿತ್ಯನಾಥ್ ಪ್ರತಿ ಭೇಟಿಯಲ್ಲೂ ವಾರಣಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದಾರೆ. ರೈಲು ನಿಲ್ದಾಣ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿ ಕಾಮಾಗಾರಿಗಳನ್ನು ಖುದ್ದು ಪರಿಶೀಲಿಸಿದ್ದಾರೆ. ವಾರಣಾಸಿ ಭೇಟಿಯಲ್ಲಿ ಯೋಗಿ ಆದಿತ್ಯನಾಥ್ 74 ಬಾರಿ ವಿಶ್ವೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದಾರೆ. 

ಯೋದಿ ಆದಿತ್ಯನಾಥ್‌ಗೆ ಸನಾತನ ಧರ್ಮದ ನಂಬಿಕೆ, ವಿಶ್ವನಾಥನ ಮೇಲಿರುವ ಭಕ್ತಿ ಅಪಾರವಾಗಿದೆ. ಪ್ರತಿ ಬಾರಿ ಭೇಟಿ ನೀಡಿದಾಗಲು ಅಷ್ಟೇ ಶ್ರದ್ಧಾ ಭಕ್ತಿಯಿಂದ ವಿಶ್ವನಾಥನಿಗೆ ಪೂಜೆ ಸಲ್ಲಿಸುತ್ತಾರೆ ಎಂದು ಕಾಶಿ ವಿಶ್ವನಾಥ ಮಂದಿರದ ಅರ್ಚಕ ನೀರಜ್ ಕುಮಾರ್ ಪಾಂಡೆ ಹೇಳಿದ್ದಾರೆ. 100 ಬಾರಿ ಕಾಶಿ ವಿಶ್ವನಾಥ್ ಮಂದಿರಕ್ಕೆ ನೀಡಿದ ಭೇಟಿಯಲ್ಲಿ ಯೋಗಿ ಆದಿತ್ಯನಾಥ್ 88 ಬಾರಿ ಕಾಶಿ ವಿಶ್ವನಾಥ ಧಾಮಕ್ಕೂ ಭೇಟಿ ನೀಡಿದ್ದಾರೆ. ಇಷ್ಟೇ ಅಲ್ಲ ಕಾಳ ಭೈರವ ದೇವಸ್ಥಾನಕ್ಕೆ ಕಳೆದ 6 ವರ್ಷದಲ್ಲಿ 100 ಬಾರಿ ಭೇಟಿ ನೀಡಿದ್ದಾರೆ. ಇಂದು(ಮಾ.18) ಬೆಳಗ್ಗೆ ಕಾಳ ಭೈರವ ದೇವಸ್ಥಾನಕ್ಕೆ ತೆರಳಿದ ಯೋಗಿ ಆದಿತ್ಯನಾಥ್ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ. 

 

ಎಲೆಕ್ಟ್ರಿಕ್‌ ವಾಹನ ಖರೀದಿದಾರರಿಗೆ ತೆರಿಗೆ, ನೋಂದಣಿ ಶುಲ್ಕ ವಿನಾಯಿತಿ ನೀಡಿದ ಯೋಗಿ ಆದಿತ್ಯನಾಥ್ ಸರ್ಕಾರ

ಮಾಫಿಯಾ ವಿರುದ್ಧ ಯೋಗಿ ದಾಳಿ
ದೇವಸ್ಥಾನ, ಭಕ್ತಿ ಕೇಂದ್ರಗಳಿಗೆ ಭೇಟಿ ನೀಡುವ ಯೋಗಿ ಆದಿತ್ಯನಾಥ್ ತಮ್ಮ ಕಠಿಣ ನಿರ್ಧಾರಗಳ ಮೂಲಕ ಅತ್ಯಂತ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಮಾಫಿಯಾ ವಿರುದ್ಧ ಸದನದಲ್ಲಿ ಗುಡುಗಿದ ಆದಿತ್ಯನಾಥ್, ಗೂಂಡಾ, ಮಾಫಿಯಾದವರನ್ನು ಹೂತು ಹಾಕುತ್ತೇನೆ ಎಂದಿದ್ದರು. ಇಷ್ಟೇ ಅಲ್ಲ ಉತ್ತರ ಪ್ರದೇಶದ ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ಕೇಸಿನ ಸಾಕ್ಷಿ ಉಮೇಶ್‌ ಪಾಲ್‌ ಕೊಲೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್, ಮನೆ ಮೇಲೆ ಜೆಸಿಬಿ ಹತ್ತಿಸಿ ಬಿಸಿ ಮುಟ್ಟಿಸಿದ್ದರು.
 

Follow Us:
Download App:
  • android
  • ios