Asianet Suvarna News Asianet Suvarna News

ಎಲೆಕ್ಟ್ರಿಕ್‌ ವಾಹನ ಖರೀದಿದಾರರಿಗೆ ತೆರಿಗೆ, ನೋಂದಣಿ ಶುಲ್ಕ ವಿನಾಯಿತಿ ನೀಡಿದ ಯೋಗಿ ಆದಿತ್ಯನಾಥ್ ಸರ್ಕಾರ

ಅಲ್ಲದೆ, ಎಲೆಕ್ಟ್ರಿಕ್ ವಾಹನಗಳ ವ್ಯಾಖ್ಯಾನದ ಬಗ್ಗೆಯೂ ಯುಪಿ ಸರ್ಕಾರ ಸ್ಪಷ್ಟೀಕರಣ ನೀಡಿದೆ. ಇದರ ಪ್ರಕಾರ, ಬ್ಯಾಟರಿಗಳು, ಅಲ್ಟ್ರಾಕೆಪಾಸಿಟರ್‌ಗಳು ಅಥವಾ ಇಂಧನ ಸೆಲ್‌ಗಳಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಬಳಸುವ ಎಲ್ಲಾ ಆಟೋಮೊಬೈಲ್‌ಗಳನ್ನು ಎಲೆಕ್ಟ್ರಿಕ್‌ ವಾಹನ ಎಂದು ಸೂಚಿಸುತ್ತದೆ.

yogi adityanath govt to exempt ev buyers from tax registration fees ash
Author
First Published Mar 5, 2023, 11:57 AM IST | Last Updated Mar 5, 2023, 11:57 AM IST

ಲಖನೌ (ಮಾರ್ಚ್‌ 5, 2023): ದೇಶದಲ್ಲಿ ಡೀಸೆಲ್‌ ಎಂಜಿನ್‌ ಹಾಗೂ ಪೆಟ್ರೋಲ್‌ ಎಂಜಿನ್‌ ವಾಹನಗಳನ್ನು ಹಂತ ಹಂತವಾಗಿ ನಿಷೇಧ ಮಾಡುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಅಲ್ಲದೆ, ಎಲೆಕ್ಟ್ರಿಕ್‌ ವಾಹನಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಇದೇ ರೀತಿ, ಉತ್ತರ ಪ್ರದೇಶ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಅಕ್ಟೋಬರ್ 14, 2022 ರಿಂದ ಮೂರು ವರ್ಷಗಳವರೆಗೆ ಇವಿ ವಾಹನಗಳ ಖರೀದಿಯ ಮೇಲಿನ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ತೆಗೆದುಹಾಕಲು ನಿರ್ಧರಿಸಿದೆ ಎಂದು ಶುಕ್ರವಾರ ಹೇಳಿಕೆಯೊಂದು ತಿಳಿಸಿದೆ. ಅಲ್ಲದೆ, ಉತ್ತರ ಪ್ರದೇಶ ರಾಜ್ಯದಲ್ಲೇ ತಯಾರಾಗುವ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ವಿನಾಯಿತಿ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಎಂದೂ ತಿಳಿದುಬಂದಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಈ ಸೂಚನೆಗಳನ್ನು ಪಾಲಿಸುವಂತೆ ಎಲ್ಲಾ ಜಿಲ್ಲೆಗಳ ಆರ್‌ಟಿಒಗಳಿಗೆ ಸರ್ಕಾರದ ಪರವಾಗಿ ಆದೇಶ ನೀಡಲಾಗಿದೆ.

ಉತ್ತರ ಪ್ರದೇಶ (Uttar Pradesh) ಎಲೆಕ್ಟ್ರಿಕ್ ವೆಹಿಕಲ್ (Electric Vehicle) ಮ್ಯಾನುಫ್ಯಾಕ್ಚರಿಂಗ್ ಮತ್ತು ಮೊಬಿಲಿಟಿ ಪಾಲಿಸಿ 2022 ರ ಪ್ರಕಾರ, ಅಕ್ಟೋಬರ್ 14, 2022 ರಿಂದ ಅಕ್ಟೋಬರ್ 13, 2025 ರವರೆಗೆ 100 ಪ್ರತಿಶತ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಎಲ್. ವೆಂಕಟೇಶ್ವರಲು ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಇದಲ್ಲದೆ, ಅಕ್ಟೋಬರ್ 14, 2022 ರಂದು ಅಧಿಸೂಚಿಸಲಾದ ಎಲೆಕ್ಟ್ರಿಕ್ ವಾಹನ ನೀತಿಯ ಪರಿಣಾಮಕಾರಿ ಅವಧಿಯ ನಾಲ್ಕನೇ ಮತ್ತು ಐದನೇ ವರ್ಷದಲ್ಲಿ, ಅಂದರೆ ಅಕ್ಟೋಬರ್ 14, 2025 ರಿಂದ ಅಕ್ಟೋಬರ್ 13, 2027 ರವರೆಗೆ,  ಉತ್ತರ ಪ್ರದೇಶದಲ್ಲಿ ತಯಾರಾದ ಮತ್ತು ಮಾರಾಟವಾದ ಇವಿಗಳ ಮೇಲೆ ಶೇಕಡಾ 100 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಈ ಊರಲ್ಲಿ ಇನ್ಮುಂದೆ ಸಂಪೂರ್ಣ ಎಲೆಕ್ಟ್ರಿಕ್‌ ವಾಹನಗಳ ಕಾರುಬಾರು; ಪೆಟ್ರೋಲ್‌ ವೆಹಿಕಲ್ಸ್ ನೋಂದಣಿ ನಿಷೇಧ

ಅಲ್ಲದೆ, ಎಲೆಕ್ಟ್ರಿಕ್ ವಾಹನಗಳ ವ್ಯಾಖ್ಯಾನದ ಬಗ್ಗೆಯೂ ಯುಪಿ ಸರ್ಕಾರ (UP Government) ಸ್ಪಷ್ಟೀಕರಣ ನೀಡಿದೆ. ಇದರ ಪ್ರಕಾರ, ಬ್ಯಾಟರಿಗಳು, ಅಲ್ಟ್ರಾಕೆಪಾಸಿಟರ್‌ಗಳು ಅಥವಾ ಇಂಧನ ಸೆಲ್‌ಗಳಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಬಳಸುವ ಎಲ್ಲಾ ಆಟೋಮೊಬೈಲ್‌ಗಳನ್ನು ಎಲೆಕ್ಟ್ರಿಕ್‌ ವಾಹನ ಎಂದು ಸೂಚಿಸುತ್ತದೆ.

ಇವುಗಳಲ್ಲಿ ಎಲ್ಲಾ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರಗಳು, ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (HEV), ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (PHEV), ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (BEV), ಮತ್ತು ಇಂಧನ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (FCEV) ಸೇರಿವೆ. ಈ ನಿರ್ಧಾರವು ಪ್ರಸ್ತುತ, ಅಕ್ಟೋಬರ್ 14, 2022 ರ ನಡುವೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ವಿಧಿಸಿರುವ ಆಗ್ರಾದ 3,997 ಇವಿ ಮಾಲೀಕರಿಗೆ ರಿಲೀಫ್‌ ನೀಡುತ್ತದೆ.

ಇದನ್ನೂ ಓದಿ: ಎಲೆಕ್ಟ್ರಿಕ್‌, ಹೈಡ್ರೋಜನ್‌ ವಾಹನಗಳ ಮೂಲಕ ಇಂಧನದ ಬೇಡಿಕೆ ತಗ್ಗುತ್ತದೆ: ಬೆಂಗಳೂರಲ್ಲಿ ಮೋದಿ ಮಾತು

ಇನ್ನು, ಈವರೆಗೆ, 11340 ಇವಿಗಳು ಆಗ್ರಾದ ವಿಭಾಗೀಯ ಸಾರಿಗೆ ಕಚೇರಿಯಲ್ಲಿ (Regional Transport Office) (ಆರ್‌ಟಿಒ) ನೋಂದಾಯಿಸಲ್ಪಟ್ಟಿದ್ದು, ಅವುಗಳಲ್ಲಿ 3,997 ವಾಹನಗಳನ್ನು ಅಕ್ಟೋಬರ್ 14, 2022 ರಿಂದ ಇಲ್ಲಿಯವರೆಗೆ ಖರೀದಿಸಲಾಗಿದೆ. ಇದರಲ್ಲಿ 437 ಇ-ರಿಕ್ಷಾಗಳು, 30 ಕಾರುಗಳು ಮತ್ತು ದ್ವಿಚಕ್ರ ವಾಹನಗಳು (ಇವಿಗಳು) ಸೇರಿವೆ. ಯುಪಿ ಸರ್ಕಾರದ ವಿನಾಯಿತಿಯು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಕೇಂದ್ರ ಸರ್ಕಾರವು ಒದಗಿಸುವ ಸಬ್ಸಿಡಿಗೆ ಹೆಚ್ಚುವರಿಯಾಗಿದೆ ಎಂಬುದು ಪ್ರಮುಖ ಅಂಶ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಒದಗಿಸಿರುವ ಈ ಸಬ್ಸಿಡಿಯಿಂದ ದ್ವಿಚಕ್ರ ವಾಹನಗಳ ಬೆಲೆಯನ್ನು 15,000 ರಿಂದ 20,000 ರೂ.ಗಳಷ್ಟು ಆನ್-ರೋಡ್ ಮತ್ತು ಕಾರುಗಳ ಬೆಲೆಯನ್ನು 1 ಲಕ್ ರೂ. ವರೆಗೆ ಕಡಿಮೆ ಮಾಡುತ್ತದೆ. ಇನ್ನು, ಯೋಗಿ ಆದಿತ್ಯನಾಥ್‌ ಸರ್ಕಾರದ ಈ ನಿರ್ಧಾರವು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ನೋಂದಣಿಯ ವ್ಯತ್ಯಾಸವನ್ನು ಕೊನೆಗೊಳಿಸುತ್ತದೆ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ದರಗಳು ಒಂದೇ ಆಗಿರುತ್ತವೆ. 

ಇದನ್ನೂ ಓದಿ: ಸಗಣಿ ಗ್ಯಾಸ್‌ ಬಳಸಿ ಓಡಬಲ್ಲ ಕಾರು ನಿರ್ಮಾಣಕ್ಕೆ ಮಾರು​ತಿ ರೆಡಿ..!

ಈ ನೀತಿಯ ಪ್ರಕಾರ, ರಾಜ್ಯದಲ್ಲಿ ಖರೀದಿಸುವ ಎಲೆಕ್ಟ್ರಿಕ್ ವಾಹನಗಳ ಫ್ಯಾಕ್ಟರಿ ಬೆಲೆಯ ಮೇಲೆ 15 ಪ್ರತಿಶತ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಇನ್ನೊಂದೆಡೆ, ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸರ್ಕಾರಿ ನೌಕರರನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರವೂ ನೌಕರರಿಗೆ ಮುಂಗಡ ಹಣ ಪಡೆಯಲು ಅವಕಾಶ ನೀಡಲಿದೆ.

Latest Videos
Follow Us:
Download App:
  • android
  • ios