ಭಾರತ ಹಾಗೂ ಅಮೆರಿಕದಲ್ಲಿನ ವೇತನದಲ್ಲಿ ಭಾರಿ ವ್ಯತ್ಯಾಸಗಳಿವೆ. ಅಮೆರಿಕದ ಸ್ಯಾಲರಿ ಭಾರತಕ್ಕೆ ಹೆಚ್ಚಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಅಳೆದು ತೂಗಿ ಲೆಕ್ಕ ಹಾಕಿದರೆ ಸಮ ಸಮ, ಏನಿದು ಹೊಸ ಲೆಕ್ಕಾಚಾರ ಇಲ್ಲಿದೆ.

ನವದೆಹಲಿ (ಆ.03) ಭಾರತದಲ್ಲಿ ದಿನ ಅಥವಾ ತಿಂಗಳಿಗೆ ವೇತನ ಲೆಕ್ಕ ಹಾಕಿದರೆ ಅಮೆರಿಕದಲ್ಲಿ ಗಂಟೆಗೆ ಲೆಕ್ಕ ಹಾಕಲಾಗುತ್ತದೆ. ಭಾರತದಲ್ಲಿ ಗಂಟೆಯ ಆಧಾರದ ಮೇಲೆ ಒಂದೇ ರಾಷ್ಟ್ರೀಯ ಕನಿಷ್ಠ ವೇತನ ಇಲ್ಲ. ಬದಲಾಗಿ, ಕಾರ್ಮಿಕರ ಕೌಶಲ್ಯ ಮಟ್ಟ, ವಲಯ ಮತ್ತು ಭೌಗೋಳಿಕ ಪ್ರದೇಶಗಳ ಆಧಾರದ ಮೇಲೆ ಅವಲಂಬಿವಾಗುತ್ತದೆ. ಕೇಂದ್ರ ಸರ್ಕಾರ ದಿನಕ್ಕೆ ಸುಮಾರು ₹178 (ಗಂಟೆಗೆ ಸುಮಾರು ₹22.41) ರಾಷ್ಟ್ರೀಯ ಕನಿಷ್ಠ ವೇತನವನ್ನು ಸೂಚಿಸಿದೆ. ಆದರೆ, ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಜಾರಿ ಮಾಡಬೇಕಾದ ಕನಿಷ್ಠ ವೇತನವನ್ನು ವರ್ಗಗಳ ಆಧಾರದ ಮೇಲೆ ನಿರ್ಧರಿಸುತ್ತವೆ. ಕಾರ್ಮಿಕರನ್ನು ಅಕುಶಲ, ಅರೆ-ಕುಶಲ, ಕುಶಲ ಮತ್ತು ಹೆಚ್ಚು-ಕುಶಲ ಎಂದು ವಿಂಗಡಿಸಲಾಗುತ್ತದೆ. ಕೌಶಲ್ಯವಿಲ್ಲದ ಕಾರ್ಮಿಕರಿಗೆ ದಿನಕ್ಕೆ ₹300 ರಿಂದ ₹700 (ಗಂಟೆಗೆ ಸುಮಾರು ₹37.35 ರಿಂದ ₹83.00) ಸಿಗುತ್ತದೆ. ಅದೇ ದೆಹಲಿ, ಮಹಾರಾಷ್ಟ್ರ, ಕರ್ನಾಟಕದಂತಹ ಪ್ರಮುಖ ಆರ್ಥಿಕ ಕೇಂದ್ರಗಳಲ್ಲಿ ಕುಶಲ ಕಾರ್ಮಿಕರಿಗೆ ದಿನಕ್ಕೆ ₹700 ರಿಂದ ₹1,000ಕ್ಕಿಂತ ಹೆಚ್ಚು (ಗಂಟೆಗೆ ಸುಮಾರು ₹83.00 ರಿಂದ ₹124.50) ಸಿಗುತ್ತದೆ.

ಎರಡೂ ದೇಶಗಳ ಕನಿಷ್ಠ ವೇತನ ನಿಯಮಗಳನ್ನು ಗಮನಿಸಿದರೆ ಸ್ಪಷ್ಟ ವ್ಯತ್ಯಾಸಗಳು ಕಾಣಿಸುತ್ತವೆ. ಅಮೆರಿಕ ಗಂಟೆಯ ಆಧಾರದ ಮೇಲೆ ಸಂಬಳ ಲೆಕ್ಕ ಹಾಕಿದರೆ, ಭಾರತ ದಿನ ಅಥವಾ ತಿಂಗಳ ಆಧಾರದಲ್ಲಿ ಲೆಕ್ಕ ಹಾಕುತ್ತದೆ. ಅಮೆರಿಕದಲ್ಲಿ ಫೆಡರಲ್ ಮೂಲ ವೇತನ ಗಂಟೆಗೆ ಸುಮಾರು ₹601.75, ಆದರೆ ಭಾರತದಲ್ಲಿ ರಾಷ್ಟ್ರೀಯ ಕನಿಷ್ಠ ವೇತನ ದಿನಕ್ಕೆ ₹178 (ಗಂಟೆಗೆ ಸುಮಾರು ₹22.41ಕ್ಕೆ ಸಮ).

ಪ್ರಮುಖ ನಗರ/ರಾಜ್ಯಗಳ ವ್ಯಾಪ್ತಿ:

ಅಮೆರಿಕದಲ್ಲಿ ಗಂಟೆಗೆ ಸುಮಾರು ₹1,245 – ₹1,660, ಭಾರತದಲ್ಲಿ ದಿನಕ್ಕೆ ₹600 – ₹1,000 (ಗಂಟೆಗೆ ಸುಮಾರು ₹83 – ₹124.50ಕ್ಕೆ ಸಮ). ಅಮೆರಿಕದಲ್ಲಿ ಸಾಮಾನ್ಯವಾಗಿ ವಾರಕ್ಕೆ 40 ಗಂಟೆಗಳು, ಭಾರತದಲ್ಲಿ ವಾರಕ್ಕೆ 48 ಗಂಟೆಗಳ ಕೆಲಸದ ನಿಯಮವಿದೆ. ಅಮೆರಿಕದ ಫೆಡರಲ್ ಮೂಲ ವೇತನದ ಪ್ರಕಾರ ಮಾಸಿಕ ಆದಾಯ (ಅಕುಶಲ) ತಿಂಗಳಿಗೆ ಸುಮಾರು ₹96,280 (ಸುಮಾರು 1,160 ಡಾಲರ್), ಭಾರತದಲ್ಲಿ ರಾಜ್ಯ ಮತ್ತು ವಲಯಗಳನ್ನು ಅವಲಂಬಿಸಿ ತಿಂಗಳಿಗೆ ಸುಮಾರು ₹10,000 ದಿಂದ ₹18,000 ವರೆಗೆ ಇರುತ್ತದೆ.

ಸಂಖ್ಯೆಗಳ ಲೆಕ್ಕದಲ್ಲಿ ನೋಡಿದರೆ, ಅಮೆರಿಕದ ಫೆಡರಲ್ ಕನಿಷ್ಠ ವೇತನವು ಭಾರತದ ಅಕುಶಲ ಕಾರ್ಮಿಕರ ಕನಿಷ್ಠ ವೇತನಕ್ಕಿಂತ 7 ರಿಂದ 15 ಪಟ್ಟು ಹೆಚ್ಚಿದೆ. ಉದಾಹರಣೆಗೆ, ಅಮೆರಿಕದ ಫೆಡರಲ್ ಕನಿಷ್ಠ ವೇತನದ ಪ್ರಕಾರ ಗಂಟೆಗೆ ಸುಮಾರು ₹601.75 ಸಿಗುತ್ತದೆ. ಗಂಟೆಗೆ ₹1,245 ರಿಂದ ₹1,411 ಪಾವತಿಸುವ ಅಮೆರಿಕದ ರಾಜ್ಯಗಳಲ್ಲಿ ವಾರಕ್ಕೆ 40 ಗಂಟೆ ಕೆಲಸ ಮಾಡಿದರೆ, ಫೆಡರಲ್ ದರದ ಪ್ರಕಾರ ತೆರಿಗೆಗೂ ಮುನ್ನ ತಿಂಗಳಿಗೆ ಸುಮಾರು ₹1.03 ಲಕ್ಷ (ಸುಮಾರು 1,250 ಡಾಲರ್) ಬರುತ್ತದೆ. ಅದೇ ಗಂಟೆಗೆ ₹1,245 ಪಾವತಿಸುವ ರಾಜ್ಯಗಳಲ್ಲಿ ತಿಂಗಳಿಗೆ ಸುಮಾರು ₹2.15 ಲಕ್ಷ (ಸುಮಾರು 2,600 ಡಾಲರ್) ವರೆಗೆ ಸಿಗುತ್ತದೆ. ಆದರೆ ಭಾರತದಲ್ಲಿ ಕನಿಷ್ಠ ವೇತನ ಪಡೆಯುವ ಕಾರ್ಮಿಕ ತಿಂಗಳಿಗೆ ಸರಾಸರಿ ₹10,000 ದಿಂದ ₹18,000 ಮಾತ್ರ ಗಳಿಸುತ್ತಾನೆ.

ಸಂಬಳ ಹೆಚ್ಚಿದ್ದರೂ ಖರ್ಚು ವೆಚ್ಚ ಹೆಚ್ಚಳ

ಅಮೆರಿಕದ ಸಂಬಳದ ಅಂಕಿಅಂಶಗಳು ದೊಡ್ಡದಾಗಿ ಕಂಡರೂ, ಜೀವನ ವೆಚ್ಚವನ್ನು ಮರೆಯುವಂತಿಲ್ಲ. ನೇರವಾಗಿ ಕರೆನ್ಸಿ ಬದಲಾವಣೆ ಮಾಡಿ ನೋಡಿದರೆ ಸ್ಥಳೀಯ ಖರೀದಿ ಸಾಮರ್ಥ್ಯ ಪೂರ್ತಿಯಾಗಿ ಅರ್ಥವಾಗುವುದಿಲ್ಲ. ಅಮೆರಿಕದಲ್ಲಿ ಹೆಚ್ಚು ಸಂಬಳವಿದ್ದರೂ, ಅಲ್ಲಿ ಮನೆ ಬಾಡಿಗೆ, ಆರೋಗ್ಯ, ವಿಮೆ, ಮತ್ತು ಮಕ್ಕಳ ಶಿಕ್ಷಣದ ಖರ್ಚುಗಳು ತುಂಬಾ ಹೆಚ್ಚು. ಕ್ಯಾಲಿಫೋರ್ನಿಯಾದಲ್ಲಿ ಗಂಟೆಗೆ ₹1,245 ಕ್ಕಿಂತ ಹೆಚ್ಚು ಸಂಪಾದಿಸುವ ವ್ಯಕ್ತಿಗೆ ಹೆಚ್ಚು ಹಣ ಬರುತ್ತಿದೆ ಎನಿಸಿದರೂ, ಅಲ್ಲಿನ ತಿಂಗಳ ಖರ್ಚುಗಳನ್ನು ನಿಭಾಯಿಸುವುದು ಕಷ್ಟವೇ. ಭಾರತದಲ್ಲಿ ದಿನಬಳಕೆ ವಸ್ತುಗಳು, ಆಹಾರ, ಮನೆ ಬಾಡಿಗೆ ಅಗ್ಗವಾಗಿರುವುದರಿಂದ, ಕಡಿಮೆ ಆದಾಯದಲ್ಲೂ ಜೀವನ ನಡೆಸಲು ಸಾಧ್ಯ. ಹೀಗಾಗಿ, ಕೇವಲ ಸಂಬಳವನ್ನು ನೋಡಿ ಜೀವನ ಮಟ್ಟವನ್ನು ಅಳೆಯಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.