ಮೂತ್ರ ಮಾಡಿದ್ದು ಉದ್ಯಮಿ: 30 ಲಕ್ಷ ದಂಡ ಏರ್ ಇಂಡಿಯಾಗೆ
ಏರ್ ಇಂಡಿಯಾ ವಿಮಾನದಲ್ಲಿ ಉದ್ಯಮಿಯೊರ್ವ ಹಿರಿಯ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವೂ 30 ಲಕ್ಷ ರೂಪಾಯಿಯ ದಂಡ ವಿಧಿಸಿದೆ.

ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ಉದ್ಯಮಿಯೊರ್ವ ಹಿರಿಯ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವೂ 30 ಲಕ್ಷ ರೂಪಾಯಿಯ ದಂಡ ವಿಧಿಸಿದೆ. ವಿಮಾನದ ಕಮಾಂಡರ್ ಅನ್ನು ಸಸ್ಪೆಂಡ್ ಮಾಡಲಾಗಿದ್ದು, ಏರ್ ಇಂಡಿಯಾಗೆ ದಂಡ ವಿಧಿಸಲಾಗಿದೆ. ಕಳೆದ ವರ್ಷ ನವಂಬರ್ 26 ರಂದು ನ್ಯೂಯಾರ್ಕ್‌ನಿಂದ ಭಾರತಕ್ಕೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಉದ್ಯಮಿ ಶಂಕರ್ ಮಿಶ್ರಾ ಸಮೀಪದಲ್ಲಿ ಕುಳಿತಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಬಗ್ಗೆ ವೃದ್ಧೆ ದೂರು ನೀಡಿದ ನಂತರ ಎಚ್ಚೆತ್ತ ಏರ್ ಇಂಡಿಯಾ ಮಿಶ್ರಾ ವಿರುದ್ಧ ವಿಮಾನದಲ್ಲಿ ಹಾರಾಡಲು 4 ತಿಂಗಳ ಕಾಲ ನಿಷೇಧ ಹೇರಿದೆ..ಇದೇ ಪ್ರಕರಣದಲ್ಲಿ ಮಿಶ್ರಾಗೆ ದೆಹಲಿಯ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಈ ಹಿಂದೆ ಒಂದು ತಿಂಗಳ ಹಾರಾಟ ನಿಷೇಧ ಹೇರಲಾಗಿತ್ತು. ಅದನ್ನು ನಾಲ್ಕು ತಿಂಗಳಿಗೆ ವಿಸ್ತರಿಸಲಾಗಿದೆ.
ಇದಕ್ಕೂ ಮೊದಲು ಪ್ರಕರಣ ದಾಖಲಾಗುತ್ತಿದ್ದಂತೆ ಶಂಕರ್ ಮಿಶ್ರಾ ತಲೆ ಮರೆಸಿಕೊಂಡಿದ್ದ. ಆದರೆ ಆತ ಬೆಂಗಳೂರಿನಲ್ಲಿ ಇರುವ ಸುಳಿವು ತಿಳಿದ ದೆಹಲಿ ಪೊಲೀಸರು ತಂಡ ರಚಿಸಿ ಬೆಂಗಳೂರಿಗೆ ಬಂದು ಆತನನ್ನು ಬಂಧಿಸಿದ್ದರು. ಇದಾದ ಬಳಿಕ ಆತ ಉದ್ಯೋಗದಲ್ಲಿದ್ದ ವೆಲ್ಸ್ ಫಾರ್ಗೋ ಕಂಪನಿ ಶಂಕರ್ ಮಿಶ್ರಾನನ್ನು ಕೆಲಸದಿಂದ ವಜಾಗೊಳಿಸಿತ್ತು. ಶಂಕರ್ ಮಿಶ್ರಾ ಅಮೆರಿಕ ಮೂಲದ ಫಿನಾನ್ಸ್ ಸರ್ವೀಸ್ ಕಂಪನಿ ವೆಲ್ಸ್ ಫಾರ್ಗೋದಲ್ಲಿ ಭಾರತದ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಕುರಿತು ಪತ್ರಿಕಾ ಪ್ರಕರಣ ಬಿಡುಗಡೆ ಮಾಡಿರುವ ವೆಲ್ಸ್ ಫಾರ್ಗೋ, ಶಿಸ್ತು ಮೀರಿದ ಹಾಗೂ ನಿಯಮ ಉಲ್ಲಂಘಿಸುವ ಸಿಬ್ಬಂದಿಯನ್ನು ಕಂಪನಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ವೆಲ್ಸ್ ಫಾರ್ಗೋ ಹೇಳಿತ್ತು.
ಮಹಿಳೆ ಮೇಲೆ ಮೂತ್ರ ಮಾಡಿದ ಉದ್ಯಮಿ ಶಂಕರ್ ಮಿಶ್ರಾಗೆ ಜಾಮೀನು ನಿರಾಕರಣೆ
ಮೂತ್ರ ವಿಸರ್ಜನೆ ಮಾಡಿದ ಶಂಕರ್ ಮಿಶ್ರಾ ಹಿರಿಯ ಮಹಿಳೆ ಜೊತೆಮಾತುಕತೆ ನಡೆಸಿ ಜಾರಿಕೊಂಡಿದ್ದ. ಆದರೆ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವನ್ನು ವಿಮಾನಯಾನ ನಿಯಂತ್ರಕ ಡಿಜಿಸಿಎ ಗಂಭೀರವಾಗಿ ಪರಿಗಣಿಸಿದ ಪರಿಣಾಮ ಶಂಕರ್ ಮಿಶ್ರಾ ಸಂಕಷ್ಟಕ್ಕೊಳಗಾಗಿದ್ದಾರೆ.
ದೆಹಲಿ ಏರ್‌ಪೋರ್ಟ್‌ನ ನಿರ್ಗಮನ ಗೇಟ್‌ನಲ್ಲಿ ಮೂತ್ರ ಮಾಡಿದವನ ಬಂಧನ
ಬಂಧನದ ನಂತರ ವಿಚಾರಣೆ ವೇಳೆ ಶಂಕರ್ ಮಿಶ್ರಾ, ಕೋರ್ಟ್ ಮುಂದೆ ಹೊಸ ಹೇಳಿಕೆ ನೀಡಿದ್ದರು. ತಾನು ಮೂತ್ರವೇ ಮಾಡಿಲ್ಲ. ಮಹಿಳೆಯೇ ಮೂತ್ರ ಮಾಡಿಕೊಂಡು ತನ್ನ ಮೇಲೆ ಆರೋಪ ಮಾಡುತ್ತಿದ್ದಾಳೆ ಎಂದಿದ್ದರು. ದೆಹಲಿ ಸೆಶನ್ ಕೋರ್ಟ್‌ನಲ್ಲಿ ಶಂಕರ್ ಮಿಶ್ರಾ ಈ ಹೇಳಿಕೆ ನೀಡಿದ್ದರು. ವಿಮಾನದಲ್ಲಿ ಮಹಿಳೆ ಸೀಟ್ ನಿರ್ಬಂಧಿಸಲಾಗಿದೆ. ಮಹಿಳೆಗೆ ಆರೋಗ್ಯ ಸಮಸ್ಯೆ ಇದೆ. ಆಕೆ ಕಥಕ್ ನೃತ್ಯಗಾರ್ತಿಯಾಗಿದ್ದಾರೆ. ಶೇಕಡಾ 80 ರಷ್ಟು ಕಥಕ್ ನೃತ್ಯಗಾರ್ತಿಯರು ಅಸಂಯಮದ ಸಮಸ್ಯೆ ಹೊಂದಿದ್ದಾರೆ ಎಂದು ಶಂಕರ್ ಮಿಶ್ರಾ ಪರ ವಕೀಲರು ವಾದಿಸಿದ್ದಾರೆ. ಈ ವಾದ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಆದರೆ ಇದೆಲ್ಲವೂ ಸುಳ್ಳು ತನ್ನನ್ನು ಸಮರ್ಥಿಸಿಕೊಳ್ಳಲು ಶಂಕರ್ ಮಿಶ್ರಾ ಸುಳ್ಳಿನ ಸುರಿಮಳೆ ಸುರಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.
ನಾನು ಮಾಡಿಲ್ಲ, ಮಹಿಳೆಯೇ ಆಕೆ ಮೇಲೆ ಮೂತ್ರ ಮಾಡಿಕೊಂಡಿದ್ದಾಳೆ, ಶಂಕರ್ ಮಿಶ್ರಾ ಟೂ ಟರ್ನ್!