ನಾನು ಮಾಡಿಲ್ಲ, ಮಹಿಳೆಯೇ ಆಕೆ ಮೇಲೆ ಮೂತ್ರ ಮಾಡಿಕೊಂಡಿದ್ದಾಳೆ, ಶಂಕರ್ ಮಿಶ್ರಾ ಟೂ ಟರ್ನ್!
ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಶಂಕರ್ ಮಿಶ್ರಾ ಕೋರ್ಟ್ ಮುಂದೆ ಹೊಸ ಹೇಳಿಕೆ ನೀಡಿದ್ದಾರೆ. ತಾನು ಮೂತ್ರವೇ ಮಾಡಿಲ್ಲ. ಆಕೆಯ ಮೂತ್ರ ಮಾಡಿಕೊಂಡು ತನ್ನ ಮೇಲೆ ಆರೋಪ ಮಾಡುತ್ತಿದ್ದಾಳೆ ಎಂದಿದ್ದಾರೆ. ಇಡೀ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ನವದೆಹಲಿ(ಜ.13): ಏರ್ ಇಂಡಿಯಾ ವಿಮಾನ ಕಳೆದ ಕೆಲದಿನಗಳಲ್ಲಿ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಿದೆ. ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ವಿಚಾರಣೆ ತೀವ್ರಗತಿಯಲ್ಲಿ ಸಾಗುತ್ತಿದೆ. ಆರೋಪಿ ಶಂಕರ್ ಮಿಶ್ರಾ ಜಾಮೀನು ಅರ್ಜಿಯನ್ನು ಕೋರ್ಟ್ ನಿರಾಕರಿಸಿದೆ. ಇದೀಗ ಮತ್ತೊಂದು ಬೆಳವಣಿಗೆಯಾಗಿದೆ. ದೆಹಲಿ ಸೆಶನ್ ಕೋರ್ಟ್‌ನಲ್ಲಿ ಶಂಕರ್ ಮಿಶ್ರಾ ಹೊಸ ಹೇಳಿಕೆ ನೀಡಿದ್ದಾರೆ. ತಾನು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ. ಆಕೆಯೇ ಮೂತ್ರ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಈ ವಾದ ಇದೀಗ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ವಿಮಾನದಲ್ಲಿ ಮಹಿಳೆ ಸೀಟ್ ನಿರ್ಬಂಧಿಸಲಾಗಿದೆ. ಹೀಗಾಗಿ ಮಹಿಳೆ ಕುಳಿತುಕೊಂಡಲ್ಲಿ ಹೋಗಿ ಮೂತ್ರ ವಿಸರ್ಜನೆ ಮಾಡುವುದು ಅಸಾಧ್ಯ. ಮಹಿಳೆಗೆ ಆರೋಗ್ಯ ಸಮಸ್ಯೆ ಇದೆ. ಆಕೆ ಕಥಕ್ ನೃತ್ಯಗಾರ್ತಿಯಾಗಿದ್ದಾರೆ. ಶೇಕಡಾ 80 ರಷ್ಟು ಕಥಕ್ ನೃತ್ಯಗಾರ್ತಿಯರು ಅಸಂಯಮದ ಸಮಸ್ಯೆ ಹೊಂದಿದ್ದಾರೆ ಎಂದು ಶಂಕರ್ ಮಿಶ್ರಾ ಪರ ವಕೀಲರು ವಾದಿಸಿದ್ದಾರೆ. ಈ ವಾದ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಮೂತ್ರ ವಿಸರ್ಜನೆ ಬಳಿಕ ಲವ್ ಪ್ರಪೋಸಲ್‌ನಿಂದ ಸುದ್ದಿಯಾದ ಏರ್ ಇಂಡಿಯಾ
ಈ ಪ್ರಕರಣದಲ್ಲಿ ಪೊಲೀಸರು ಹಾಗೂ ಮಾಧ್ಯಮ ಎಲ್ಲೆ ಮೀರಿ ನಡೆದುಕೊಂಡಿದೆ. ಘಟನೆಯನ್ನು ಹಾಸ್ಯ ಮಾಡಿದೆ. ಮಹಿಳೆ ನೀಡಿದ ದೂರಿನಲ್ಲಿ 8ಎ ಸೀಟಿನಲ್ಲಿ ಕುಳಿತ ವ್ಯಕ್ತಿ ಮೂತ್ರವಿಸರ್ಜನೆ ಮಾಡಿದ್ದಾರೆ ಎಂದಿದೆ. ಆದರೆ ಶಂಕರ್ ಮಿಶ್ರಾ 8ಎ ಸೀಟಿನಲ್ಲಿ ಕುಳಿತುಕೊಂಡಿಲ್ಲ. ಇಷ್ಟೇ ಅಲ್ಲ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿಲ್ಲ ಎಂದು ಶಂಕರ್ ಮಿಶ್ರಾ ವಕೀಲ ಗುಪ್ತಾ ಹೇಳಿದ್ದಾರೆ.
ಮೂತ್ರ ವಿಸರ್ಜನೆ ಘಟನೆ ಸಂಬಂಧ ಜ.4ರಂದು ಸಂತ್ರಸ್ತ ಮಹಿಳೆ ಶಂಕರ್ ವಿರುದ್ಧ ಏರ್ ಇಂಡಿಯಾಕ್ಕೆ ದೂರು ನೀಡಿದ್ದರು. ಇದನ್ನು ಆಧರಿಸಿ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈ ವಿಷಯ ತಿಳಿಯುತ್ತಲೇ ಶರ್ಮಾ ಮುಂಬೈನ ತನ್ನ ಮನೆಯಿಂದ ಪರಾರಿಯಾಗಿದ್ದ. ಹೀಗಾಗಿ ಆತನ ಹಿಂದಿನ ಪ್ರಯಾಣದ ಸ್ಥಳಗಳು ಮತ್ತು ಆತನ ಡಿಜಿಟಲ್ ಚಲನವಲನಗಳ ಬೆಳವಣಿಗೆ ಮೇಲೆ ದಿಲ್ಲಿ ಪೊಲೀಸರು ಕಣ್ಣಟ್ಟಿದ್ದರು. ಮೊಬೈಲ್ ಬಳಸಿದರೆ ಸಿಕ್ಕಿ ಬೀಳಬಹುದು ಎಂದು ಗೊತ್ತಿದ್ದ ಮಿಶ್ರಾ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಜಾಲತಾಣಗಳ ಮೂಲಕವೇ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಸಂಪರ್ಕದಲ್ಲಿದ್ದ. ಜೊತೆಗೆ ಒಂದು ಸ್ಥಳದಲ್ಲಿ ಆತ ತನ್ನ ಡೆಬಿಟ್/ ಕ್ರೆಡಿಟ್ ಕಾರ್ಡ್ ಅನ್ನೂ ಬಳಸಿದ್ದ.
ಮಹಿಳೆ ಮೇಲೆ ಮೂತ್ರ ಮಾಡಿದ ಉದ್ಯಮಿ ಶಂಕರ್ ಮಿಶ್ರಾಗೆ ಜಾಮೀನು ನಿರಾಕರಣೆ
ಇದರ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ಸಂಜೆ ವೇಳೆ ಆತ ಮೈಸೂರಿನಲ್ಲಿ ಇದ್ದ ಮಾಹಿತಿ ಪತ್ತೆ ಮಾಡಿದ್ದರು. ದಿಲ್ಲಿ ಪೊಲೀಸರಿಗೆ ಅಲ್ಲಿಗೆ ತೆರಳುವ ವೇಳೆಗೆ ಆತ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಮಿಶ್ರಾ ಬೆಂಗಳೂರಿಗೆ ಪ್ರಯಾಣಿಸಿದ ಕಾರು ಚಾಲಕನ ಪತ್ತೆ ಮಾಡಿದಾಗ ಆತ ಒಂದಷ್ಟುಸುಳಿವು ನೀಡಿದ್ದ. ಅದರ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿನ ಸಂಜಯ್ ನಗರದಲ್ಲಿರುವ ಮಿಶ್ರಾನ ಸೋದರಿ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು.