Asianet Suvarna News Asianet Suvarna News

ದೆಹಲಿ ಏರ್‌ಪೋರ್ಟ್‌ನ ನಿರ್ಗಮನ ಗೇಟ್‌ನಲ್ಲಿ ಮೂತ್ರ ಮಾಡಿದವನ ಬಂಧನ

ವಿಮಾನದಲ್ಲಿ ಪ್ರಯಾಣಿಸುವವರ ಕಿತಾಪತಿ ಇತ್ತೀಚೆಗೆ ಮಿತಿ ಮೀರುತ್ತಿದೆ.  ಏನಾದರೊಂದು ಘಟನೆಗಳು ದಿನವೂ ವರದಿಯಾಗುತ್ತಿವೆ. ವಿಮಾನದಲ್ಲಿ ಪ್ರಯಾಣಿಸುವ ಸುಶಿಕ್ಷಿತ ವರ್ಗದವರೆನಿಸಿದ ಕೆಲವರ ವರ್ತನೆಗಳು ಇದೇನು ವಿಮಾನವೂ ಸರ್ಕಾರಿ ಬಸ್ಸೋ ಎಂದು ಜನ ಯೋಚಿಸುವಂತೆ ಮಾಡುತ್ತಿದೆ .

Delhi police arrested Bihar man for urinating in Delhi Airport Departure Gate akb
Author
First Published Jan 11, 2023, 7:34 PM IST

ನವದೆಹಲಿ:  ವಿಮಾನದಲ್ಲಿ ಪ್ರಯಾಣಿಸುವವರ ಕಿತಾಪತಿ ಇತ್ತೀಚೆಗೆ ಮಿತಿ ಮೀರುತ್ತಿದೆ.  ಏನಾದರೊಂದು ಘಟನೆಗಳು ದಿನವೂ ವರದಿಯಾಗುತ್ತಿವೆ. ವಿಮಾನದಲ್ಲಿ ಪ್ರಯಾಣಿಸುವ ಸುಶಿಕ್ಷಿತ ವರ್ಗದವರೆನಿಸಿದ ಕೆಲವರ ವರ್ತನೆಗಳು ಇದೇನು ವಿಮಾನವೂ ಸರ್ಕಾರಿ ಬಸ್ಸೋ ಎಂದು ಜನ ಯೋಚಿಸುವಂತೆ ಮಾಡುತ್ತಿದೆ . ಅದೇ ರೀತಿ ಈಗ ವಿಮಾನದಲ್ಲಿ  ಸೌದಿ ಅರೇಬಿಯಾಗೆ ಹೊರಟ್ಟಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರೆ, ಅದಕ್ಕೆ ಕಾರಣ ಏನು ಅಂದ್ರೆ ಮತ್ತದೇ ಮೂತ್ರ ಪ್ರಕರಣ. ಆದರೆ ಈತ ಮೂತ್ರ ಮಾಡಿರುವುದು ಸಹ ಪ್ರಯಾಣಿಕರ ಮೇಲೆ ಅಲ್ಲ. ದೆಹಲಿ ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ನಲ್ಲಿ. 

ನಮ್ಮಲ್ಲಿ ಗಲ್ಲಿ ಗಲ್ಲಿಯಲ್ಲೂ ಸಾರ್‌ವಜನಿಕ ಶೌಚಾಲಯವಿದ್ದರೂ, ನಮ್ಮ ಜನರಿಗೆ ಕಂಡ ಕಂಡಲ್ಲಿ ಮೂತ್ರ ಮಾಡುವುದರಲ್ಲಿ ಅದೇನು ಖುಷಿ ಸಿಗುವುದೋ ಗೊತ್ತಿಲ್ಲ. ಅದೇನು ಖಾಯಿಲೆಯೋ ಗೊತ್ತಿಲ್ಲ. ಅಲ್ಲಲ್ಲಿ ಶೌಚಾಲಯವಿದ್ದರೂ ಜನ ಮಾತ್ರ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ನಿಲ್ಲಿಸುವುದೇ ಇಲ್ಲ. ಅದೇ ರೀತಿ ಇಲ್ಲೊಬ್ಬ ವಿದೇಶಕ್ಕೆ ಹೊರಟ ಪ್ರಯಾಣಿಕ ವಿಮಾನ ನಿಲ್ದಾಣದಲ್ಲಿ ಶೌಚಾಲಯವಿದ್ದರೂ ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ನಲ್ಲಿ ಸುಸ್ಸು ಮಾಡಲು ಹೋಗಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.  ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮೂರರ ನಿರ್ಗಮನ ಗೇಟ್ ಸಂಖ್ಯೆ ಆರರಲ್ಲಿ ಈ ಘಟನೆ ನಡೆದಿದೆ. 

Air India: ಮಹಿಳಾ ಪ್ರಯಾಣಿಕರ ಬ್ಲಾಂಕೆಟ್‌ ಮೇಲೆ ಮೂತ್ರ ವಿಸರ್ಜನೆ: ಮತ್ತೊಂದು ಘಟನೆ ಬೆಳಕಿಗೆ..!

ಹೀಗೆ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯನ್ನು ಜೌಹರ್ ಅಲಿ ಖಾನ್ (Jauhar Ali Khan) ಎಂದು ಗುರುತಿಸಲಾಗಿದೆ.  ಈತ ಮೂಲತಃ (Bihar) ಬಿಹಾರದವನಾಗಿದ್ದು, ಸೌದಿ ಅರೇಬಿಯಾಕ್ಕೆ ಹೊರಟಿದ್ದ.   (ಡಿ.8) ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಆತನನ್ನು ಪೊಲೀಸರು ಬಂಧಿಸಿ ನಂತರ ಜಾಮೀನು ಬಾಂಡ್ ಪಡೆದು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. 

ಭಾನುವಾರ ಸಂಜೆ 5.30 ರ ಸುಮಾರಿಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ  (IGI Airport) ಟರ್ಮಿನಲ್ 3ರ ನಿರ್ಗಮನ ಗೇಟ್ ಸಂಖ್ಯೆ 6 ರ ಬಳಿ  ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಾಗಿ ನಮಗೆ ನಮಗೆ ಮಾಹಿತಿ ಬಂತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.  ಪೊಲೀಸರ ಪ್ರಕಾರ ಜೌಹರ್ ಅಲಿ ಖಾನ್ ಪಾನಮತ್ತನಾಗಿದ್ದು, ಈತ ಸಾರ್ವಜನಿಕ ಸ್ಥಳದಲ್ಲಿ ಬೊಬ್ಬೆ ಹೊಡೆಯುವ ಮೂಲಕ ಗಲಾಟೆ ಶುರು ಮಾಡಿದ್ದ. ಈತ ಯೋಜಿಸಿದಂತೆ ಸೌದಿ ಅರೇಬಿಯಾದ (Saudi Arabia) ದಮನ್ ಗೆ(Dammam) ತೆರಳಬೇಕಾಗಿತ್ತು. ಇದಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆದರೆ ಹೀಗೆ ಅವಾಂತರ ಮಾಡಿಕೊಂಡ ಕಾರಣ ಬಂಧನಕ್ಕೊಳಗಾಗಿದ್ದ. 

ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರ ನಡುವೆ ಮಾರಾಮಾರಿ: ವಿಡಿಯೋ ವೈರಲ್‌

ನಂತರ ಆತನನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ (Safdarjung Hospital) ಕರೆದುಕೊಂಡು ಹೋಗಿ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿದ್ದು, ಆತ ಮದ್ಯ ಸೇವಿಸಿದ್ದು, ಖಚಿತವಾಗಿದೆ ಎಂದು ಏರ್‌ಪೋರ್ಟ್‌ನ ಡೆಪ್ಯೂಟಿ ಪೊಲೀಸ್ ಕಮೀಷನರ್ ರವಿ ಕುಮಾರ್ ಸಿಂಗ್ ಹೇಳಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂದ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಮತ್ತು 510 (ಕುಡಿತದಿಂದ ಸಾರ್ವಜನಿಕವಾಗಿ ದುರ್ವರ್ತನೆ) ಅಡಿಯಲ್ಲಿ ಪ್ರಕರಣವನ್ನು ಐಜಿಐ ವಿಮಾನ ನಿಲ್ದಾಣದಲ್ಲಿ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಏರ್ ಇಂಡಿಯಾ ವಿಮಾನದಲ್ಲಿ(Air India flight) ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ  ಸಹ ಪ್ರಯಾಣಿಕಳ ಮೇಲೆ ವಿಮಾನದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದ. ಈ ಘಟನೆ ತೀವ್ರ ವಿವಾದಕ್ಕೀಡಾಗಿತ್ತು. ಅಲ್ಲದೇ ಆತ ಕೆಲಸ ಮಾಡುತ್ತಿದ್ದ ಸಂಸ್ಥೆ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು.   ಕಳೆದ ವರ್ಷ ನವೆಂಬರ್ 26 ರಂದು ಈ ಘಟನೆ ನಡೆದಿತ್ತು. ಆದರೆ ಇತ್ತೀಚೆಗೆ ಇದು ತೀವ್ರ ಚರ್ಚೆಗೆ ಗ್ರಾಸವಾದ ಬಳಿಕ ದೆಹಲಿ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಅಲ್ಲದೇ ಜನವರಿ 4 ರಂದು ಬೆಂಗಳೂರಿನಲ್ಲಿ ಅಡಗಿದ್ದ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
 

Follow Us:
Download App:
  • android
  • ios