Asianet Suvarna News Asianet Suvarna News

Love on Hinduism:ಹಿಂದೂ ಧರ್ಮಕ್ಕೆ ಮಾತಾಂತರಗೊಂಡ ಯುಪಿ ಶಿಯಾ ಬೋರ್ಡ್‌ ಮಾಜಿ ಅಧ್ಯಕ್ಷ

ಹಿಂದೂ ಧರ್ಮಕ್ಕೆ ಮತಾಂತರಗೊಂಡ ವಸೀಮ್ ರಿಜ್ವಿ
ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ 
ಕುರಾನ್‌ ಬಗ್ಗೆ ಈ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರಿಜ್ವಿ

UP Shia Central Waqf Board Former chairman Waseem Rizvi converts to Hinduism, wants to be cremated after death akb
Author
Bangalore, First Published Dec 6, 2021, 1:17 PM IST

ಲಖ್ನೋ(ಡಿ.6): ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಕೆಲ ಮೂಲಗಳು ವರದಿ ಮಾಡಿವೆ. ಈ ಹಿಂದೆ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ರಿಜ್ವಿ, ತಮ್ಮ ಸಾವಿನ ನಂತರ ತನ್ನ ದೇಹವನ್ನು ಸಮಾಧಿ ಮಾಡಬಾರದು. ಆದರ ಬದಲು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಬೇಕೆಂದು ಘೋಷಿಸಿದ್ದಾರೆ. 

ಕೆಲವು ವರದಿಗಳ ಪ್ರಕಾರ, ಶಿಯಾ ಕೇಂದ್ರೀಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ(Waseem Rizvi) ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಗಾಜಿಯಾಬಾದ್‌(Ghaziabad)ನ ದಾಸ್ನಾ(Dasna) ದೇಗುಲದ ಮಹಂತ್‌ ನರಸಿಂಹ ಆನಂದ ಸರಸ್ವತಿ ಅವರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಲ್‌ ಬರೆದಿಟ್ಟಿರುವ ರಿಜ್ವಿ ಅದರಲ್ಲಿ, ತಮ್ಮ ಚಿತೆಗೆ ದಾಸ್ನಾ ದೇಗುಲದ ಹಿಂದೂ ಧರ್ಮದರ್ಶಿ ಮಹಂತ್‌ ನರಸಿಂಹ ಆನಂದ ಸರಸ್ವತಿ ಅವರು ಅಗ್ನಿ ಸ್ಪರ್ಶ ಮಾಡಬೇಕೆಂದು ಹೇಳಿದ್ದಾರೆ.  

ಮೋದಿ ಪ್ರಧಾನಿಯಾಗದಿದ್ದರೆ ಆತ್ಮಹತ್ಯೆ: ವಸೀಮ್ ರಿಜ್ವಿ!

ನವೆಂಬರ್ 2021 ರಲ್ಲಿ, ರಿಜ್ವಿ ಅವರು ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದರು.  ಅದರಲ್ಲಿ ಅವರು ತಮ್ಮ ಸಾವಿನ ಬಳಿಕ ದೇಹವನ್ನು ಮಹಂತ್ ನರಸಿಂಹ ಆನಂದ ಸರಸ್ವತಿ ಅವರಿಗೆ ಹಸ್ತಾಂತರಿಸಬೇಕು ಮತ್ತು ಅವರೇ ತಮ್ಮ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಬೇಕು ಎಂದು ಹೇಳಿದ್ದರು. ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥ ಕುರಾನ್‌ನ  26 'ಆಯತ್'ಗಳ ಬಗ್ಗೆ ವಸೀಮ್‌ ಈ ಹಿಂದೆ ಸವಾಲು ಹಾಕಿದ್ದರು. ಅಲ್ಲದೇ ತಾನು ಹೊಸ ಕುರಾನ್‌ ಬರೆಯುವುದಾಗಿ ಹೇಳಿದ್ದರು. ಇದರಿಂದ ವಸೀಮ್ ರಿಜ್ವಿ ತನ್ನ ಇಡೀ ಸಮುದಾಯದ ಕೋಪಕ್ಕೆ ತುತ್ತಾಗಿದ್ದರು. 

2021 ರ ಮೇ ತಿಂಗಳಲ್ಲಿ ರಿಜ್ವಿ ಅವರು, ಕುರಾನ್‌ನ  26 'ಆಯತ್‌ಗಳನ್ನು ತೆಗೆದುಹಾಕಿ ಹೊಸ ಕುರಾನ್‌ ಅನ್ನು ರಚಿಸಿರುವುದಾಗಿ ಹೇಳಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲದೇ ಭಾರತದ ಎಲ್ಲಾ ಮದರಸಾಗಳು ಮತ್ತು ಮುಸ್ಲಿಂ ಸಮುದಾಯದ ಸಂಸ್ಥೆಗಳಲ್ಲಿ ತಮ್ಮ ಹೊಸ ಕುರಾನ್ ಬಳಕೆಯನ್ನು ಅಧಿಕೃತಗೊಳಿಸುವಂತೆ ವಸೀಮ್‌ ರಿಜ್ವಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.

ಶಿಯಾ ವಕ್ಫ್ ಮಂಡಳಿ ರಿಜ್ವಿ ಶಿರಚ್ಚೇದನಕ್ಕೆ 11 ಲಕ್ಷ ರೂ ಬಹುಮಾನ ಘೋಷಿಸಿದ ವಕೀಲ ವಿರುದ್ಧ FIR!

ದೇಶದಾದ್ಯಂತ ವಿವಿಧ ಮದರಸಾಗಳು ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಪಠ್ಯಕ್ರಮದಲ್ಲಿ ಈ ಹೊಸ ಕುರಾನ್ ಅನ್ನು ಸೇರಿಸಲು ನಾನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಮನವಿ ಮಾಡುತ್ತೇನೆ. ಕುರಾನ್‌ನ ಈ ಪರಿಷ್ಕೃತ ಆವೃತ್ತಿಯು ಸರಿಯಾದ ಕುರಾನ್ ಆಗಿದೆ ಮತ್ತು ಇದು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಜನರಿಗೆ ಖರೀದಿಸಲು ಲಭ್ಯವಾಗಲಿದೆ ಎಂದು ರಿಜ್ವಿ ಹೇಳಿದ್ದರು. ಈ ಹಿಂದೆ, ಕುರಾನ್‌ನ 26  ಆಯತ್‌ಗಳು ಭಯೋತ್ಪಾದನೆ ಮತ್ತು ಜಿಹಾದ್ ಅನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿದ ರಿಜ್ವಿ ಕುರಾನ್‌ನ 26  ಆಯತ್‌ಗಳನ್ನು ತೆಗೆದುಹಾಕುವಂತೆ  ಸುಪ್ರೀಂಕೋರ್ಟ್‌(Supreme Court)ಗೆ ಮನವಿ ಮಾಡಿದ್ದರು. ಆದರೆ ಕೋರ್ಟ್‌ ಇದೊಂದು  ತಿರುಳಿಲ್ಲದ ಪ್ರಕರಣ ಎಂದು ಅರ್ಜಿಯನ್ನು ವಜಾಗೊಳಿಸಿತ್ತು. 

ಹಲವು ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ವಸೀಮ್‌ ರಿಜ್ವಿಯ ಶಿರಚ್ಛೇದ ಮಾಡಿದವರಿಗೆ  11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ವಕೀಲ ಅಮಿರುಲ್ ಹಸನ್ ಜೈದಿ ಎಂಬಾತ ಘೋಷಿಸಿದ್ದ.  ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ವೈರಲ್ ಆಗುತ್ತಿದ್ದಂತೆ ವಕೀಲನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು. ನಂತರ  ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ವೈರಲ್ ಆಗುತ್ತಿದ್ದಂತೆ ವಕೀಲನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು.

Follow Us:
Download App:
  • android
  • ios