ಲಕ್ನೋ(ಏ.30): ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗದಿದ್ದರೆ ಅಯೋಧ್ಯೆಯ ರಾಮ ಮಂದಿರ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಉತ್ತರ ಪ್ರದೇಶ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಅಧ್ಯಕ್ಷ ವಸೀಮ್‍ ರಿಜ್ವಿ ಹೇಳಿದ್ದಾರೆ.

ತಾವು ರಾಮ ಮಂದಿರ ನಿರ್ಮಾಣದ ಬೆಂಬಲಿಗರಾಗಿದ್ದು, ಒಂದು ವೇಳೆ ಮೋದಿ ಅಧಿಕಾರಕ್ಕೆ ಬರದಿದ್ದರೆ ಮತಾಂಧರು ತಮ್ಮನ್ನು ಕೊಲ್ಲಲಿದ್ದಾರೆ ಎಂದು ರಿಜ್ವಿ ಆತಂಕ ವ್ಯಕ್ತಪಡಿಸಿದ್ದಾರೆ.
  
'ತಾವು ಧರ್ಮಕ್ಕಿಂತ ರಾಷ್ಟ್ರೀಯತೆಯ ಬೆಂಬಲಿಗರಾಗಿದ್ದು, ಮೋದಿ ಬಿಟ್ಟು ಬೇರೆ ಯಾರೇ ಪ್ರಧಾನಿಯಾದರೂ ರಾಮ ಮಂದಿರದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಿಜ್ವಿ ತಿಳಿಸಿದ್ದಾರೆ.

ದೇಶ ವಿರೋಧಿ ಶಕ್ತಿಗಳಿಂದ ಮತ್ತು ಭಯೋತ್ಪಾದಕರಿಂದ ನನ್ನ ದೇಹ ಎರಡು ತುಂಡಾಗುವ ಬದಲು, ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿಯಾದ ಮಾರ್ಗ ಎಂದು ರಿಜ್ವಿ ನುಡಿದಿದ್ದಾರೆ.

ಲೋಕಸಭೆ ಚುನಾವಣೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ