ಶಿಯಾ ವಕ್ಫ್ ಮಂಡಳಿ ರಿಜ್ವಿ ಶಿರಚ್ಚೇದನಕ್ಕೆ 11 ಲಕ್ಷ ರೂ ಬಹುಮಾನ ಘೋಷಿಸಿದ ವಕೀಲ ವಿರುದ್ಧ FIR!
ಶಿಯಾ ವಕ್ಫ್ ಮಂಡಳಿಯ ವಾಸೀಮ್ ರಿಜ್ವಿ ಶಿರಚ್ಚೇದನಕ್ಕೆ ವಕೀಲ ಅಮಿರುಲ್ ಹಸನ್ ಬರೋಬ್ಬರಿ 11 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಆದರೆ ಈ ಘೋಷಣೆ ಬೆನ್ನಲ್ಲೇ ವಕೀಲನ ಮೇಲೆ FIR ದಾಖಲಾಗಿದೆ. ದಿಢೀರ್ ವಕೀಲ, ವಾಸೀಮ್ ರಿಜ್ವಿ ತಲೆಕಡಿಯಲು ಸೂಚಿಸಿದ್ದೇಕೆ? ಏನಿದು ಪ್ರಕರಣ? ಇಲ್ಲಿದೆ.
ಮೊರಾದಾಬಾದ್(ಮಾ.16): ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿ ಮಾಜಿ ಮುಖ್ಯಸ್ಥ ಮಾಸೀಮ್ ರಿಜ್ವಿ ಶಿರಚ್ಚೇದನ ಮಾಡುವವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ವಕೀಲ ಅಮಿರುಲ್ ಹಸನ್ ಜೈದಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ವೈರಲ್ ಆಗುತ್ತಿದ್ದಂತೆ ವಕೀಲನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಓವೈಸಿ ಪಾಕಿಸ್ತಾನಕ್ಕೆ ಹೋದ್ರೆ ಭಾರತೀಯ ಮುಸ್ಲಿಂರಿಗೆ ನೆಮ್ಮದಿ; ಸೈಯದ್ ವಾಸೀಮ್ ತಿರುಗೇಟು!
ಮಾಸೀಮ್ ರಿಜ್ವಿ ಇತ್ತೀಚೆಗೆ ಖುರಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಖುರಾನ್‌ನಲ್ಲಿರುವ 25 ಸೂಕ್ತಗಳು ಜಿಹಾದ್‌ಗಾಗಿ ಬಳಸಲಾಗುತ್ತಿದೆ. ಈ 26 ಸೂಕ್ತಗಳನ್ನು ಖುರಾನ್‌ನಿಂದ ತೆಗೆದು ಹಾಕುವಂತೆ ವಾಸೀಮ್ ರಿಜ್ವಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಇದು ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು.
ಪ್ರಾಣಿಯಂತೆ ಮಕ್ಕಳು ಹುಟ್ಟಿಸುವುದು ಮಾರಕ: ವಸೀಂ ರಿಜ್ವಿ
ಅಲ್ಪ ಸಮುದಾಯ ಮಂಡಳಿ ವಾಸೀಮ್ ರಿಜ್ವಿಗೆ ನೊಟೀಸ್ ನೀಡಿತ್ತು. ಇದರ ಬೆನ್ನಲ್ಲೇ ವಕೀಲ ಅಮಿರುಲ್ ಹಸನ್ ಜೈದಿ ಪವಿತ್ರ ಖುರಾನ್ ಹಾಗೂ ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ. ಹೀಗಾಗಿ ರಿಜ್ವಿ ಶಿರಚ್ಚೇದನಕ್ಕೆ 11 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ವಕೀಲ ಹಸನ್ ಮಾಡಿದ ಆಕ್ಷೇಪಾರ್ಹ ಭಾಷಣ ಆಧರಿಸಿ ಪೊಲೀಸರು ದ್ವೇಷ ಬಿತ್ತುವ ಹಾಗೂ ಉತ್ತೇಜಿಸುವ, ಕ್ರಿಮಿನಲ್ ಬೆದರಿಕೆ ಹಾಕಿದ ಆರೋಪದಡಿ ಐಪಿಸಿ ಸೆಕ್ಷನ್ 505(2) ಹಾಗೂ 506 ರ ಅಡಿ ಕೇಸ್ ದಾಖಲಿಸಿದ್ದಾರೆ.
ವಾಸೀಮ್ ರಿಜ್ವಿ ಖುರಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ ಬೆನ್ನಲ್ಲೇ ರಿಜ್ವಿ ವಿರುದ್ಧ ಪ್ರತಿಭಟನೆಗಳು, ಬಂಧನಕ್ಕೆ ಆಗ್ರಗಳು ಕೇಳಿ ಬಂದಿತ್ತು. ಇದೇ ವೇಳೆ ಮಾರ್ಚ್ 13 ರಂದು ಮೊರಾಬಾದ್‌ನಲ್ಲಿ ಆಯೋಜಿಸಿದ ಸಭೆಯಲ್ಲಿ ವಕೀಲ ಹಸನ್ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಪವಿತ್ರ ಗ್ರಂಥದಿಂದ ಸೂಕ್ತಗಳನ್ನು ತೆಗುದುಹಾಕುವಂತೆ ಆಗ್ರಹಿಸಿದ್ದಾರೆ. ಇದು ನಮ್ಮ ಭಾವನೆಗಳನ್ನು ಕೆರಳಿಸಿದೆ. ಹೀಗಾಗಿ ರಿಜ್ವಿ ತಲೆ ಕಡಿದವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭಾಷಣ ಮಾಡಿದ್ದರು.