Asianet Suvarna News Asianet Suvarna News

UP Poll : ಈ ಬಾರಿ ನೋ ಸಾರಿ... ಮತ್ತೆ ಬಂದ್ರು ಡ್ರೆಸ್ಸಿಂಗ್‌ ಸ್ಟೈಲ್‌ನಿಂದಲೇ ಫೇಮಸ್‌ ಆಗಿದ್ದ ಸ್ಟೈಲಿಸ್ಟ್‌ ಆಫೀಸರ್‌

  • ಮತ್ತೆ ಬಂದ ಹಳದಿ ಸಾರಿಯ ಬ್ಯೂಟಿಫುಲ್‌ ಆಫೀಸರ್‌
  • ಲೋಕಸಭಾ ಚುನಾವಣೆಯಲ್ಲಿ ಸೌಂದರ್ಯದಿಂದಲೇ ಸದ್ದು ಮಾಡಿದ್ದ ಅಧಿಕಾರಿ
  • ಕಪ್ಪು ಟಾಪ್‌ ಹಾಗೂ ಬೇಜ್ ಪ್ಯಾಂಟ್‌ನಲ್ಲಿ ಮಿಂಚಿಂಗ್
UP poll officer in yellow saree Reena Dwivedi is back akb
Author
Bangalore, First Published Feb 22, 2022, 6:20 PM IST | Last Updated Feb 22, 2022, 6:20 PM IST

ಲಕ್ನೋ(ಫೆ.22) 2019ರ ಲೋಕಸಭಾ ಚುನಾವಣೆ ವೇಳೆ ತಮ್ಮ ಸೌಂದರ್ಯದಿಂದಲೇ ಮಿಂಚಿದ್ದ ಉತ್ತರಪ್ರದೇಶದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ ಬಗ್ಗೆ ನೆನಪಿದೆಯೇ ಈಗ ಅವರು ಮತ್ತೆ ಆಗಮಿಸಿದ್ದಾರೆ. ಉತ್ತರಪ್ರದೇಶದಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಅಧಿಕಾರಿಯಾಗಿ ರೀನಾ ದ್ವಿವೇದಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಬಾರಿ ತಮ್ಮ ಸುಂದರ ಧಿರಿಸಿನಿಂದಲೇ ಮಿಂಚಿದ ಅವರು ಈ ಬಾರಿ ತಮ್ಮನ್ನು ಕರ್ತವ್ಯಕ್ಕೆ ನಿಯೋಜಿಸಿದ್ದ ಮತಗಟ್ಟೆಗೆ ತೆರಳುವ ವೇಳೆ ಕಪ್ಪು ಟಾಪ್‌ ಹಾಗೂ ಬೇಜ್ ಪ್ಯಾಂಟ್‌ನಲ್ಲಿ ಮಿಂಚುತ್ತಿದ್ದರು. 

ಲಕ್ನೋದ ಮತದಾನ ಕೇಂದ್ರದಲ್ಲಿ PWD ಅಧಿಕಾರಿಯಾಗಿರುವ ಅವರು ಟಾಪ್‌ ಮತ್ತು ಪ್ಯಾಂಟ್ ಧರಿಸಿರುವ ಹೊಸ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. 2019 ರಲ್ಲಿ ಹಳದಿ ಸೀರೆಯನ್ನು ಧರಿಸಿ ಮತಗಟ್ಟೆಗೆ ಆಗಮಿಸಿದ ನಂತರ ಅವರು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್‌ ಆಗಿದ್ದರು.  ರೀನಾ ದ್ವಿವೇದಿ ಪ್ರಸ್ತುತ ನಡೆಯುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗಳಲ್ಲಿ ಒಬ್ಬರಾಗಿದ್ದು ಈ ಬಾರಿ ಅವರು ತೋಳಿಲ್ಲದ ಕಪ್ಪು ಟಾಪ್ ಮತ್ತು ಬೀಜ್ ಪ್ಯಾಂಟ್ ಧರಿಸಿ ಮತಗಟ್ಟೆಗೆ ಆಗಮಿಸಿದ್ದಾರೆ.

ಹಳದಿ ಸೀರೆಯ ಅಧಿಕಾರಿಯ ‘ದೊಡ್ಡ’ ಆಸೆ.. ನಿಮ್ಮ ಮನೆಗೂ ಬರ್ತಾರೆ!

ಲಕ್ನೋದ (Lucknow) ಬಸ್ತಿಯಾ (Bastiya), ಗೋಸೈಗಂಜ್ (Gosaiganj) ಬೂತ್ ಸಂಖ್ಯೆ 114 ರಲ್ಲಿ ರೀನಾ ಅವರು ಮತಗಟ್ಟೆ ಅಧಿಕಾರಿಯಾಗಿದ್ದು, ಅವರು ಮತ ಕೇಂದ್ರಕ್ಕೆ ಆಗಮಿಸುತ್ತಿರುವಾಗ ತೆಗೆದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ರೀನಾ ದ್ವಿವೇದಿ ಮತಗಟ್ಟೆಗೆ ತೆರಳುತ್ತಿರುವುದು ಕಂಡುಬಂದಿದೆ. ಆಕೆಯ ಧಿರಿಸಿನಲ್ಲಾದ ಬದಲಾವಣೆಯ ಬಗ್ಗೆ ಕೇಳಿದಾಗ, 'ಥೋಡಾ ಚೇಂಜ್ ಹೋನಾ ಚಾಹಿಯೇ (ಸ್ವಲ್ಪ ಬದಲಾವಣೆ ಅಗತ್ಯವಿದೆ) ಎಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. 2019 ರಲ್ಲಿ ಈ ಚುನಾವಣಾ ಅಧಿಕಾರಿ ಸೊಗಸಾದ ಹಳದಿ ಸೀರೆಯನ್ನು ಧರಿಸಿ ಚುನಾವಣಾ ಕರ್ತವ್ಯದಲ್ಲಿದ್ದಾಗ ಸಹೋದ್ಯೋಗಿಯೊಬ್ಬರು ಇವರ ಫೋಟೋವನ್ನು ಕ್ಲಿಕ್ಕಿಸಿದ್ದರು. 

ಅಂದು 2019ರಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ  ಅಧಿಕಾರಿ ಹಳದಿ ಸೀರೆಯಲ್ಲಿ ಮಿಂಚಿದ್ದರು. ಇವಿಎಂ ಯಂತ್ರ ಹಿಡಿದು ಹೆಜ್ಜೆ ಹಾಕಿದ್ದ ಪೋಟೋಗಳು ವೈರಲ್ ಆಗಿತ್ತು. ಹಲವಾರು ಮಾಧ್ಯಮಗಳಲ್ಲಿ ಇವರ ಬಗ್ಗೆ ವರದಿಗಳು ಪ್ರಕಟವಾಗಿದ್ದವು. ಮಿಸ್ ಜೈಪುರ ಸ್ಪರ್ಧೆಯಲ್ಲಿಯೂ ರೀನಾ ಪ್ರಶಸ್ತಿ ಮುಡಿಗೇರಿಸಿಕೊಂಡವರು ಎಂಬ ಸಂಗತಿಯೂ ನಂತರ ಗೊತ್ತಾಯಿತು. ನಂತರ ದ್ವಿವೇದಿ ತಾವೇ ಮುಂದಾಗಿ ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಹಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದರು.

ಹಳದಿ ಸೀರೆ ಚುನಾವಣಾಧಿಕಾರಿ: ಕರ್ತವ್ಯಕ್ಕೆ ಸೌಂದರ್ಯವೇ ಮಾರಿ?

ಈಕೆಯ ಪೋಟೋ ವೈರಲ್ ಆಗುತ್ತಿದ್ದಂತೆ  ಹಳದಿ  ಸೀರೆಯಲ್ಲಿ ನಾರಿ ಎಂದು ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡಲು ಆರಂಭಿಸಿದರು.ಆಕೆಯ 9 ನೇ ತರಗತಿ ಮಗ ಸಹ ತನ್ನ ಸ್ನೇಹಿತರಿಗೆ ಅಮ್ಮನನ್ನು ಹಾಗೆ ಕರೆಯುವಂತೆಯೂ ಕೇಳಿಕೊಂಡಿದ್ದ. ಇದೆಲ್ಲದರ ನಡುವೆ ಆಕೆ 5 ತಿಂಗಳ ಹಿಂದೆ ಅಪ್ ಲೋಡ್ ಮಾಡಿದ್ದ ಪೋಟೋ 1 ಲಕ್ಕಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿತು. ಲೋಕಸಭಾ ಚುನಾವಣೆ ಸದ್ದು ಮುಗಿದ ನಂತರ ಈ ಅಧಿಕಾರಿಯ ಸುದ್ದಿಯೂ ನೇಪಥ್ಯಕ್ಕೆ ಸರಿದಿತ್ತು. ರೀನಾ ದ್ವಿವೇದಿ ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅವರು ಆಗಾಗ್ಗೆ ತಮ್ಮ ದಿನನಿತ್ಯದ ಚಿತ್ರಗಳನ್ನು ಇಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.  ನಾನು ಸದಾ ಸುಂದರವಾಗಿ ಕಾಣಲು ಇಷ್ಟಪಡುತ್ತೇನೆ. ಆಧುನಿಕ ಸಮಾಜದಲ್ಲಿ ಅದು ಅಗತ್ಯ ಸಹ ಎಂದು ರೀನಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios