ಬೆಂಗಳೂರು[ಮೇ. 16] ಗ್ಲಾಮರ್ ಲುಕ್ ನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪಿಡಬ್ಲ್ಯೂಡಿ ಅಧಿಕಾರಿ ರೀನಾ ದ್ವಿವೇದಿ ಅವರಿಗೆ ಹೊಸದೊಂದು ಆಸೆ ಚಿಗುರೊಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ನಿಮ್ಮ ಮನೆಯ ಟಿವಿ ಪರದೆಯ ಮೇಲೆ ರೀನಾ ಅವರನ್ನು ಕಾಣಬಹುದು.

ಹಳದಿ ಸೀರೆಯ ಅಧಿಕಾರಿ ಯಾರು? 

ಕೈಯಲ್ಲಿ ಇವಿಎಂ ಹಿಡಿದು ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ತೆಗೆದ ಪೋಟೋ ವೈರಲ್ ಆಗಿತ್ತು.  ಇದೀಗ ರೀನಾ ಬಿಗ್ ಬಾಸ್ ಶೋ ನಲ್ಲಿ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ನಾನು ಸದಾ ಸುಂದರವಾಗಿ ಕಾಣಲು ಇಷ್ಟಪಡುತ್ತೇನೆ. ಆಧುನಿಕ ಸಮಾಜದಲ್ಲಿ ಅದು ಅಗತ್ಯ ಸಹ ಎಂದು ರೀನಾ ಹೇಳಿದ್ದಾರೆ.