ಲಕ್ನೋ(ಮೇ.11): ದೇಶದೆಲ್ಲೆಡೆ ಈಗ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಬಿರು ಬೇಸಿಗೆಯಲ್ಲೇ ಮತದಾರ ತನ್ನ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾನೆ. ಈ ಮಧ್ಯೆ ಹಳದಿ ಸೀರೆಯುಟ್ಟ ಮಹಿಳಾ ಚುನಾವಣಾಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಫೇಮಸ್ ಆಗಿದ್ದಾರೆ.

ಮೇ.6ರಂದು ನಡೆದ ಐದನೇ ಹಂತದ ಚುನಾವಣೆ ವೇಳೆ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲಕ್ನೋ ಮೂಲದ ಚುನಾವಣಾಧಿಕಾರಿ ರೀನಾ ದ್ವಿವೇದಿ, ಇದೀಗ ಇಂಟರ್‌ನೆಟ್ ಸೆನ್ಸೆಶನ್ ಆಗಿದ್ದಾರೆ. ಜನ ಅದರಲ್ಲೂ ಹೆಚ್ಚಾಗಿ ಯುವಕರು ಈಕೆಯ ಕುರಿತು ಮಾಹಿತಿಗಾಗಿ ಇಂಟರ್‌ನೆಟ್ ತಡಕಾಡುತ್ತಿದ್ದಾರೆ.

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ರೀನಾ, ತಾವು ತಮ್ಮ ಚುನಾವಣಾ ಕರ್ತವ್ಯ ನಿಭಾಯಿಸಿದ್ದು ಕರ್ತವ್ಯದಲ್ಲಿ ಸೌಂದರ್ಯ ನೋಡುವ ಮನೋಭಾವನೆ ಸಲ್ಲದು ಎಂದು ಸೂಕ್ಷ್ಮವಾಗಿ ನೀತಿ ಪಾಠ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ