Asianet Suvarna News Asianet Suvarna News

ಯುಪಿ ಚುನಾವಣೆಗೆ ಬಿಜೆಪಿ ನಾಯಕರ ಪಟ್ಟಿ ರಿಲೀಸ್, ಜ.23ರಿಂದ ಗಣರಾಜ್ಯೋತ್ಸವ; ಜ.15ರ Top 10 News!

ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ 21 ನಾಯಕ ಪಟ್ಟಿ ರಿಲೀಸ್ ಮಾಡಿದೆ. ಸಿಎಂ ಯೋಗಿ ಆದಿತ್ಯನಾಥ್ ತವರು ಕ್ಷೇತ್ರದಿಂದಲೇ ಕಣಕ್ಕಿಳಿಯುವುದು ಖಚಿತವಾಗಿದೆ. ಗಣರಾಜ್ಯೋತ್ಸವಕ್ಕೆ ಕೇಂದ್ರ ನಾರಾಯಣಗುರು ಸ್ತಬ್ಧ ಚಿತ್ರ ತಿರಸ್ಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಕೊರೋನಾ ಸಮಯದಲ್ಲಿ ಡೋಲೋ ಕಂಪನಿಗೆ ಭರ್ಜರಿ ಲಾಭ, ಜನವರಿ 23ರಿಂದಲೇ ಗಣರಾಜ್ಯೋತ್ಸವ ಆರಂಭ ಸೇರಿದಂತೆ ಜನವರಿ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

UP election BJP candidate list to Republic day celebration top 10 news of January 15 ckm
Author
Bengaluru, First Published Jan 15, 2022, 4:42 PM IST
  • Facebook
  • Twitter
  • Whatsapp

Narayana Guru Tableau ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ, ಎಚ್‌ಡಿಕೆ ಕಿಡಿ

UP election BJP candidate list to Republic day celebration top 10 news of January 15 ckm

 ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು (Narayana Guru Tableau ) ಕೇಂದ್ರದ ಗಣರಾಜ್ಯೋತ್ಸವ (Republic Day Parade) ಸಮಿತಿ ತಿರಸ್ಕರಿಸಿರುವುದು ಅತ್ಯಂತ ಖಂಡನೀಯ ಹಾಗೂ ನಮ್ಮ ನೆಲದ ನಂಬಿಕೆಗಳಿಗೆ ಮಾಡಿರುವ ಅಪಮಾನ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.

UP Elections: ಬಿಜೆಪಿ ಮೊದಲ ಲಿಸ್ಟ್‌ ಔಟ್, 21 ನಾಯಕರಿಗೆ ಗೇಟ್‌ಪಾಸ್, ಗೋರಖ್‌ಪುರದಿಂದ ಯೋಗಿ ಸ್ಪರ್ಧೆ!

UP election BJP candidate list to Republic day celebration top 10 news of January 15 ckm

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಮತ್ತು ಎರಡನೇ ಹಂತದ ಚುನಾವಣೆಗೆ ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಗೋರಖ್‌ಪುರ ನಗರದಿಂದ ಮತ್ತು ಕೇಶವ್ ಪ್ರಸಾದ್ ಮೌರ್ಯ ಸಿರತುದಿಂದ ಸ್ಪರ್ಧಿಸಲಿದ್ದಾರೆ. ಈ ಹಿಂದೆ ಯೋಗಿ ಅಯೋಧ್ಯೆಯಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿತ್ತು ಆದರೆ ಪಕ್ಷವು ಅವರನ್ನು ಗೋರಖ್‌ಪುರ ನಗರದಿಂದ ಅಭ್ಯರ್ಥಿಯನ್ನಾಗಿ ಮಾಡಿದೆ.

ಇನ್ಮುಂದೆ ಜನವರಿ 23 ರಿಂದ Republic Day Celebrations!

UP election BJP candidate list to Republic day celebration top 10 news of January 15 ckm

ಗಣರಾಜ್ಯೋತ್ಸವದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಗಣರಾಜ್ಯೋತ್ಸವದ ಆಚರಣೆ ಈಗ ಜನವರಿ 23 ರಿಂದ ಪ್ರಾರಂಭವಾಗಲಿದೆ ಎಂದಿದೆ. ಈ ಹಿಂದೆ ಇದು ಜನವರಿ 24 ರಿಂದ ಪ್ರಾರಂಭವಾಗುತ್ತಿತ್ತು. ಗಣರಾಜ್ಯೋತ್ಸವದ ಆಚರಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನೂ ಸೇರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಮೋದಿ ಸರ್ಕಾರವು ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲು ಪ್ರಾರಂಭಿಸಿತ್ತು ಎಂಬುವುದು ಉಲ್ಲೇಖನೀಯ. 

Ind vs SA ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ; ಟೆಸ್ಟ್ ಸರಣಿ ಸೋತಿದ್ದೆಲ್ಲಿ ಟೀಂ ಇಂಡಿಯಾ..?

UP election BJP candidate list to Republic day celebration top 10 news of January 15 ckm

 ಭಾರತ ಕ್ರಿಕೆಟ್ ತಂಡವು, ದಕ್ಷಿಣ ಆಫ್ರಿಕಾ ನೆಲದಲ್ಲಿ ಮತ್ತೊಮ್ಮೆ ಫ್ರೀಡಂ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಭಾರತ ತಂಡವು 29 ವರ್ಷಗಳಿಂದ ದಕ್ಷಿಣ ಆಫ್ರಿಕಾ ಪ್ರವಾಸ ಮಾಡುತ್ತಿದ್ದು, ಇದುವರೆಗೂ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ಅಷ್ಟಕ್ಕೂ ಟೀಂ ಇಂಡಿಯಾ ಎಡವಿದ್ದೆಲ್ಲಿ..?

Pushpa Success: ಸಕ್ಸಸ್ ನಂತ್ರ 3 ಕೋಟಿ ಕೇಳಿದ ರಶ್ಮಿಕಾ, ಕೆಲವು ಸೀನ್ ರೀಶೂಟ್

UP election BJP candidate list to Republic day celebration top 10 news of January 15 ckm

ದಿ ರೈಸ್ ಸಿನಿಮಾ ಸಖತ್ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲು ಅರ್ಜುನ್ ಹಾಗೂ ರಶ್ಮಿಕಾಗೆ ಹೊಸ ಸಕ್ಸಸ್ ತಂದುಕೊಟ್ಟಿದೆ. ಈ ಸಿನಿಮಾ ನಿರೀಕ್ಷೆಯನ್ನೂ ಮೀರಿ ಹಿಟ್ ಆಗಿದ್ದು, ಇದರ ಪಾರ್ಟ್ ಟೂ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾ ಸಕ್ಸಸ್ ರಶ್ಮಿಕಾರ ಡಿಮ್ಯಾಂಡ್ ಹೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ ಅಲ್ಲು ಅರ್ಜುನ್ ಕೂಡಾ ಬಾಲಿವುಡ್‌ನಲ್ಲಿ ಸಿನಿಮಾ ಆಫರ್‌ಗಳನ್ನು ಪಡೆಯುತ್ತಿದ್ದಾರೆ. 

Google London Office ಫೋಟೊಸ್‌ ಹಂಚಿಕೊಂಡ ಸಿಇಓ ಸುಂದರ್‌ ಪಿಚೈ: ಹೇಗಿರಲಿದೆ ನೋಡಿ ಹೊಸ ಕಚೇರಿ!

UP election BJP candidate list to Republic day celebration top 10 news of January 15 ckm

ಸಿಲಿಕಾನ್ ವ್ಯಾಲಿ ದೈತ್ಯ ಗೂಗಲ್  ಇತ್ತೀಚೆಗೆ 1 ಬಿಲಿಯನ್‌ ಡಾಲರ್‌ ಮೊತ್ತದ ಹೊಸ ಕಚೇರಿಯನ್ನು ಖರೀದಿಸಿರುವುದಾಗಿ ಸಿಇಓ ಸುಂದರ್‌ ಪಿಚೈ ತಳಿಸಿದ್ದಾರೆ.

Covid-19 : ಡೋಲೋ ಇದ್ರೆ ಚಿಂತೆಯ ಮಾತೆಲ್ಲಿ, ಕೋವಿಡ್ ಟೈಮ್ ಅಲ್ಲಿ ಕಂಪನಿಗೆ ಆದ ಲಾಭ ಇಷ್ಟು!

UP election BJP candidate list to Republic day celebration top 10 news of January 15 ckm

 ಕೋವಿಡ್-19 (Covid-19) ಸಾಂಕ್ರಾಮಿಕ ವೈರಸ್ ನಿಂದ ಇಡೀ ಜಗತ್ತಿಗೆ ನಷ್ಟವಾಗಿದ್ದರೂ, ಇದರಲ್ಲೂ ಲಾಭ ಕಂಡಿದ್ದು ಫಾರ್ಮಾ ಕಂಪನಿಗಳು. ಇದು ಸಹಜ ಕೂಡ. ಆದರೆ, ಭಾರತದಲ್ಲಿ ಕೋವಿಡ್ ಸಮಯದಲ್ಲಿ ಎಲ್ಲಾ ಔಷಧಿಗಳಿಗಿಂತ ಹೆಚ್ಚಾಗಿ ಮಾರಾಟವಾಗಿದ್ದು ಡೋಲೋ 650 (Dolo 650) ಟ್ಯಾಬ್ಲೆಟ್.

Airbags Mandatory : ಸಣ್ಣ ಕಾರುಗಳಲ್ಲಿ ಕೂಡ 6 ಏರ್‌ಬ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

UP election BJP candidate list to Republic day celebration top 10 news of January 15 ckm

ವಾಹನಗಳ ಪ್ರಯಾಣಿಕರ ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ, ಕಳೆದ ಕೆಲ ವರ್ಷಗಳಲ್ಲಿ ಹಲವು ಹೊಸ ರಸ್ತೆ ಸುರಕ್ಷತಾ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಸರ್ಕಾರ ಮತ್ತೊಂದು ನಿಯಮ ಜಾರಿಗೊಳಿಸಲು ಮುಂದಾಗಿದ್ದು, 8 ಪ್ರಯಾಣಿಕರನ್ನು ಸಾಗಿಸುವ ಎಲ್ಲಾ ವಾಹನಗಳಲ್ಲಿ ಏರ್ಬ್ಯಾಗ್ ಅಳವಡಿಕೆ ಕಡ್ಡಾಯ ಸೇರಿದಂತೆ ಹಲವು ನಿಯಮಗಳನ್ನು ಜಾರಿಗೊಳಿಸಿದೆ.
 
Follow Us:
Download App:
  • android
  • ios