Asianet Suvarna News Asianet Suvarna News

Covid-19 : ಡೋಲೋ ಇದ್ರೆ ಚಿಂತೆಯ ಮಾತೆಲ್ಲಿ, ಕೋವಿಡ್ ಟೈಮ್ ಅಲ್ಲಿ ಕಂಪನಿಗೆ ಆದ ಲಾಭ ಇಷ್ಟು!

ಕೋವಿಡ್ ಟೈಮ್ ಅಲ್ಲಿ ಭರ್ಜರಿ ಲಾಭ ಗಳಿಸಿದ ಬೆಂಗಳೂರು ಮೂಲದ ಕಂಪನಿ
2020ರ ಮಾರ್ಚ್ ನಿಂದ ಈವರೆಗೂ 567 ಕೋಟಿ ರೂಪಾಯಿಯ ಡೋಲೋ ಮಾರಾಟ
ಸೋಷಿಯಲ್ ಮೀಡಿಯಾದಲ್ಲೂ ಡೋಲೋ 650 ಮೀಮ್ಸ್ ಗಳು ಸಖತ್ ಫೇಮಸ್
 

India favourite paracetamol Tablet Dolo 650 which has clocked sales of Rs 567 crore during the pandemic from March 2020 san
Author
Bengaluru, First Published Jan 15, 2022, 4:17 PM IST

ನವದೆಹಲಿ (ಜ. 15): ಕೋವಿಡ್-19 (Covid-19) ಸಾಂಕ್ರಾಮಿಕ ವೈರಸ್ ನಿಂದ ಇಡೀ ಜಗತ್ತಿಗೆ ನಷ್ಟವಾಗಿದ್ದರೂ, ಇದರಲ್ಲೂ ಲಾಭ ಕಂಡಿದ್ದು ಫಾರ್ಮಾ ಕಂಪನಿಗಳು. ಇದು ಸಹಜ ಕೂಡ. ಆದರೆ, ಭಾರತದಲ್ಲಿ ಕೋವಿಡ್ ಸಮಯದಲ್ಲಿ ಎಲ್ಲಾ ಔಷಧಿಗಳಿಗಿಂತ ಹೆಚ್ಚಾಗಿ ಮಾರಾಟವಾಗಿದ್ದು ಡೋಲೋ 650 (Dolo 650) ಟ್ಯಾಬ್ಲೆಟ್. ಎಲ್ಲಿಯವರೆಗೆ ಡೋಲೋ 650 ಟ್ಯಾಬ್ಲೆಟ್ ಫೇಮಸ್ ಆಗಿದ್ದವೆಂದರೆ, ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ಟ್ರೋಲ್ ಗಳು ಮಾಡುವಷ್ಟು ಟ್ರೆಂಡ್ ಆಗಿದ್ದವು. ಹಾಗಿದ್ದರೆ ಕೋವಿಡ್-19 ಅವಧಿಯಲ್ಲಿ ಡೋಲೋ 650 ಮಾರಾಟ ಮಾಡುವ ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ (Micro Labs Limited) ಮಾಡಿದ ಲಾಭವೆಷ್ಟು? ಮಾರುಕಟ್ಟೆಯಲ್ಲಿ ತಲೆನೋವು, ಮೈಕೈನೋವು ಹಾಗೂ ಜ್ವರಕ್ಕೆ ಅಂದಾಜು 37 ವಿವಿಧ ಮಾತ್ರೆಗಳು ಲಭ್ಯವಿದೆ ಹಾಗಿದ್ದರೂ, ಡೋಲೋ 650 ಮಾತ್ರಯೇ ಯಶಸ್ವಿಯಾಗಿದ್ದೇಗೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಅದರಲ್ಲೂ ಇಂಗ್ಲೆಂಡ್ ಮೂಲದ ಜಿಎಸ್ ಕೆ (GSK) ಕಂಪನಿಯ ತಯಾರಿಸುವ ಕ್ರೋಸಿನ್  (Crocin) ಮಾತ್ರೆಗಳನ್ನೇ ಈ ಹಾದಿಯಲ್ಲಿ ಡೋಲೋ 650 ಸೋಲಿಸಿದ್ದೇಗೆ ಎನ್ನುವ ಯೋಚನೆಗಳ ಆರಂಭವಾಗಿದೆ.

ಮಾರ್ಚ್ 2020ರಿಂದ ಇಲ್ಲಿಯವರೆಗೂ ಮೈಕ್ರೋ ಲ್ಯಾಬ್ಸ್ ಕಂಪನಿ ಅಂದಾಜು 567 ಕೋಟಿ ರೂಪಾಯಿಯಷ್ಟು ಡೋಲೋ 650 ಮಾತ್ರೆಗಳನ್ನು ಮಾರಾಟ ಮಾಡಿದೆ. ಈಗ ಕೋವಿಡ್ ಮೂರನೇ ಅಲೆ ಇರುವ ಹೊತ್ತಿನಲ್ಲಿ ದೇಶದ ಪ್ರತಿಯೊಬ್ಬರ ಮನೆಯಲ್ಲೂ ಇರುವ ಟ್ಯಾಬ್ಲೆಟ್ ಗಳ ಪಟ್ಟಿಯಲ್ಲಿ ಡೋಲೋ 650 ಇರುವುದು ಕೂಡ ಖಂಡಿತ. ಕೊರೋನಾ ಪ್ರಕರಣಗಳು ದೇಶದಲ್ಲಿ ಏರಿಕೆ ಆಗುತ್ತಿರುವ ಹೊತ್ತಿನಲ್ಲಿ ಡೋಲೋ 650 ಹ್ಯಾಶ್ ಟ್ಯಾಗ್ ನಲ್ಲಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆರಂಭವಾಗಿದೆ. ಜನವರಿ 2020 ರಿಂದ ಪ್ಯಾರಾಸಿಟಮಾಲ್ ಮಾತ್ರೆಗಳ ಮಾರಾಟದ ಡೇಟಾವನ್ನು ನೋಡಿದಾಗ, ಡೋಲೋ 650 ಅಗ್ರಸ್ಥಾನವನ್ನು ಪಡೆದುಕೊಂಡಿದ್ದರೆ, ನಂತರದ ಸ್ಥಾನದಲ್ಲಿ ಕ್ಯಾಲ್ಪೋಲ್ ಮತ್ತು ಸುಮೋ ಎಲ್ ಮಾತ್ರೆಗಳಿವೆ. ಪ್ರಸ್ತುತ ಭಾರತದಲ್ಲಿ ವಿವಿಧ ಬ್ರ್ಯಾಂಡ್ ಗಳ 37 ಪ್ಯಾರಾಸಿಟಮಾಲ್ ಮಾತ್ರೆಗಳು ಮಾರುಕಟ್ಟೆಯಲ್ಲಿವೆ.

ಮಾನವ ದತ್ತಾಂಶ ವಿಜ್ಞಾನ ಮತ್ತು ಹೆಲ್ತ್‌ಕೇರ್‌ನಲ್ಲಿ ಮುಂದುವರಿದ ವಿಶ್ಲೇಷಣಾ ಸಂಸ್ಥೆ ಇಕ್ಯೂವಿಯಾ, ಪ್ರಸ್ತುತ ದೇಶದ ವೈದ್ಯರು ವ್ಯಾಪಕವಾಗಿ ಶಿಫಾರಸು ಮಾಡುವ ಪ್ಯಾರಾಸಿಟಮಾಲ್ (paracetamol ) ಮಾತ್ರೆಗಳ ಪೈಕಿ ಡೋಲೋ 650 ಹಾಗೂ ಜಿಎಸ್ ಕೆ ಕಂಪನಿಯ ಕ್ಯಾಲ್ಪೋಲ್ (Calpol) ಅಗ್ರಸ್ಥಾನದಲ್ಲಿದೆ. 

Raichur: ಮುಂದುವರೆದ ಕೊರೊನಾ ರೂಲ್ಸ್ ಬ್ರೇಕ್, ತಪಾಸಣೆ ಇಲ್ಲದೇ ಬರ್ತಿದ್ದಾರೆ ನೆರೆ ರಾಜ್ಯದ ಪ್ರಯಾಣಿಕರು
ಡಿಸೆಂಬರ್ 2021ರಲ್ಲಿ ಡೋಲೋ 650 ಟ್ಯಾಬ್ಲೆಟ್ 28.9 ಕೋಟಿ ರೂಪಾಯಿಷ್ಟು ಮಾರಾಟವಾಗಿದ್ದರೆ, ನವೆಂಬರ್ ತಿಂಗಳಲ್ಲೂ ಇಷ್ಟೇ ಮೌಲ್ಯದ ಮಾತ್ರೆಗಳು ಮಾರಾಟಗೊಂಡಿದ್ದವು. 2021ರ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೋವಿಡ್-19 2ನೇ ಅಲೆ ಉತ್ತುಂಗದಲ್ಲಿದ್ದ ಸಮಯದಲ್ಲಿ ಕ್ರಮವಾಗು 48.9 ಕೋಟಿ ಹಾಗೂ 44.2 ಕೋಟಿ ರೂ. ಮೌಲ್ಯದ ಮಾತ್ರೆಗಳು ಮಾರಾಟವಾಗಿದೆ. ಇದಕ್ಕೆ ಪ್ರತಿಯಾಗಿ ಕ್ಯಾಲ್ಪೋಲ್ 2021ರ ಡಿಸೆಂಬರ್ ನಲ್ಲಿ28 ಕೋಟಿ ರೂ.ನಷ್ಟು ಮಾರಾಟವಾಗಿದ್ದರೆ, 2021ರ ಏಪ್ರಿಲ್ ನಲ್ಲಿ ದಾಖಲೆಯ 71.6 ಕೋಟಿಯಷ್ಟು ಮೌಲ್ಯದ ಮಾತ್ರೆಗಳು ಮಾರಾಟವಾಗಿದ್ದವು. ಇವುಗಳ ಹೊರತಾಗಿ ಇತರ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಫೆಪಾನಿಲ್, ಪಿ-250, ಪ್ಯಾಸಿಮೋಲ್ ಮತ್ತು ಕ್ರೋಸಿನ್ ಕೂಡ ಸೇರಿವೆ.

Covid 3rd Wave: ನಗರಗಳ ಜೊತೆ ಹಳ್ಳಿಗಳಲ್ಲೂ ಹೆಚ್ಚಿದ ಕೊರೊನಾ ಸೋಂಕು, ಮೂಡಿದೆ ಆತಂಕ
ಸೈಡ್ ಎಫೆಕ್ಟ್ ಇಲ್ಲ: ವೈದ್ಯರು ಡೋಲೋ 650 ಮಾತ್ರೆಗಳನ್ನು ಶಿಫಾರಸು ಮಾಡಲು ಬಹುಮುಖ್ಯ ಕಾರಣ, ಎಲ್ಲಾ ವಯೋಮಾನದವರಿಗೂ ಇದನ್ನು ನೀಡಬಹುದು ಮಾತ್ರವಲ್ಲದೆ ಅತ್ಯಂತ ಕಡಿಮೆ ಪ್ರಮಾಣದ ಸೈಡ್ ಎಫೆಕ್ಟ್ ಗಳು ಇದರಲ್ಲಿವೆ. ಜ್ವರಕ್ಕೆ ಅತ್ಯಂತ ಸರಳವಾಗಿ ಉಪಯೋಗಿಸಬಹುದಾದ ಮಾತ್ರೆ ಡೋಲೋ 650. ಹೃದಯ ಸಮಸ್ಯೆ, ಕಿಡ್ನಿ ಸಮಸ್ಯೆ ಹಾಗೂ ಮಧುಮೇಹ ಇದ್ದವರೂ ಯಾವ ಆತಂಕವಿಲ್ಲದೆ ಇದನ್ನು ಸೇವಿಸಬಹುದಾಗಿದೆ ಎನ್ನುವುದು ಪೋರ್ಟೀಸ್ ಆಸ್ಪತ್ರೆಯ ವೈದ್ಯ ಡಾ. ರಿತೇಶ್ ಗುಪ್ತಾ ಅವರ ಮಾತು.
ಬೆಂಗಳೂರು ಮೂಲದ ಕಂಪನಿ: ನೀರು ಅಂದ್ರೆ ಬಿಸ್ಲೆರಿ ನೆನಪಿಗೆ ಬರೋ ಹಾಗೆ, ಪ್ಯಾರಾಸಿಟಮಾಲ್ ಅಂದಾಗ ಡೋಲೋ ಅನ್ನೋದೆ ಒಂದು ಬ್ರ್ಯಾಂಡ್ ಆಗಿದೆ. ಡೋಲೋ 650 ಉತ್ಪಾದನೆ ಮಾಡುವುದು ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಕಂಪನಿ. 1973ರಲ್ಲಿ ಫಾರ್ಮಾ ವಿತರಕರಾಗಿದ್ದ ಜಿಸಿ ಸುರಾನಾ ಇದನ್ನು ಆರಂಭಿಸಿದ್ದರು. ಈಗ ಅವರ ಪುತ್ರ ದಿಲೀಪ್ ಸುರಾನಾ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕಂಪನಿಯ ಮಾಹಿತಿಯ ಪ್ರಕಾರ, ವಾರ್ಷಿಕ ಟರ್ನ್ ಓವರ್ 2700 ಕೋಟಿ ರೂಪಾಯಿ ಆಗಿದ್ದು. ವಿದೇಶಕ್ಕೆ 920 ಕೋಟಿ ರೂಪಾಯಿ ಮೌಲ್ಯದ ಔಷಧಿಗಳನ್ನು ರಫ್ತು ಮಾಡುತ್ತದೆ.

Follow Us:
Download App:
  • android
  • ios