Asianet Suvarna News Asianet Suvarna News

Google London Office ಫೋಟೊಸ್‌ ಹಂಚಿಕೊಂಡ ಸಿಇಓ ಸುಂದರ್‌ ಪಿಚೈ: ಹೇಗಿರಲಿದೆ ನೋಡಿ ಹೊಸ ಕಚೇರಿ!

ಸಿಲಿಕಾನ್ ವ್ಯಾಲಿ ದೈತ್ಯ ಗೂಗಲ್  ಇತ್ತೀಚೆಗೆ 1 ಬಿಲಿಯನ್‌ ಡಾಲರ್‌ ಮೊತ್ತದ ಹೊಸ ಕಚೇರಿಯನ್ನು ಖರೀದಿಸಿರುವುದಾಗಿ ಸಿಇಓ ಸುಂದರ್‌ ಪಿಚೈ ತಳಿಸಿದ್ದಾರೆ.

Google Ceo sundar Pichai Shares photos of new london office on Instagram mnj
Author
Bengaluru, First Published Jan 15, 2022, 10:37 AM IST

ಲಂಡನ್ (ಜ. 15): ಸಿಲಿಕಾನ್ ವ್ಯಾಲಿ ದೈತ್ಯ ಗೂಗಲ್ (Google) ಇತ್ತೀಚೆಗೆ 1 ಬಿಲಿಯನ್‌ ಡಾಲರ್‌ ಮೊತ್ತದೆ ಹೊಸ ಕಚೇರಿಯನ್ನು ಖರೀದಿಸಿರುವುದಾಗಿ ಸಿಇಓ ಸುಂದರ್‌ ಪಿಚೈ ಹೇಳಿದ್ದಾರೆ. ಶುಕ್ರವಾರದಂದು ಸಿಇಒ ಸುಂದರ್ ಪಿಚೈ (Sundar Pichai) ಲಂಡನ್ ಹೊಸ ಕಚೇರಿಗ ಒಪ್ಪಂದದ ಕುರಿತು ಪ್ರಕಟಣೆಯನ್ನು ಮಾಡಿದ್ದು ಕಚೇರಿಯ ಚಿತ್ರಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, ಇದು ಸುಮಾರು 10,000 ಉದ್ಯೋಗಿಗಳ ಸಾಮರ್ಥ್ಯವನ್ನು ಹೊಂದಿದೆ ಎಂದು ಪಿಚೈ ತಿಳಿಸಿದ್ದಾರೆ.

ಹೀಗಾಗಿ ಗೂಗಲ್ ಉದ್ಯೋಗಿಗಳು ಶೀಘ್ರದಲ್ಲೇ ಕೆಲಸಕ್ಕಾಗಿ ಲಂಡನ್‌ನಲ್ಲಿನ ಸೆಂಟ್ರಲ್ ಸೇಂಟ್ ಗೈಲ್ಸ್‌ಗೆ (Central Saint Giles) ಹೋಗಲಿದ್ದಾರೆ. ಕಟ್ಟಡವನ್ನು ಖರೀದಿಸುವ ಮೊದಲು, ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ವಸತಿ ಅಪಾರ್ಟ್ಮೆಂಟ್ಗಳನ್ನು ಹೊಂದಿರುವ ಸೆಂಟ್ರಲ್ ಸೇಂಟ್ ಗೈಲ್ಸ್‌ನಲ್ಲಿನ ಜಾಗವನ್ನು ಗೂಗಲ್‌ ಬಾಡಿಗೆಗೆ ಪಡೆದು ಬಳಸುತ್ತಿತ್ತು. ಕಟ್ಟಡದಲ್ಲಿನ ಕಚೇರಿ ಸ್ಥಳವು ಸುಮಾರು 408,000 ಚದರ ಅಡಿಗಳಲ್ಲಿ ಹರಡಿದೆ.  ಪ್ರಸ್ತುತ ಯುಕೆಯಲ್ಲಿ ಗೂಗಲ್ ಕನಿಷ್ಠ 7,000 ಉದ್ಯೋಗಿಗಳನ್ನು ಹೊಂದಿದೆ.  ಗೂಗಲ್ ಕಳೆದ ವರ್ಷ 700ಕ್ಕೂ ಹೆಚ್ಚು  ಉದ್ಯೋಗಿಗಳನ್ನು ತನ್ನ ತಂಡಕ್ಕೆ ಸೇರಿಸಿತ್ತು. ಲಂಡನ್‌ನ ಮಧ್ಯಭಾಗದಲ್ಲಿ ನೆಲೆಗೊಂಡಿರುವ ಸೆಂಟ್ರಲ್ ಸೇಂಟ್ ಗೈಲ್ಸ್ ಆಕ್ಸ್‌ಫರ್ಡ್ ರಸ್ತೆಯ ಬಳಿ ವಿನ್ಯಾಸಗೊಳಿಸಲಾದ ರೋಮಾಂಚಕ ಬಣ್ಣಗಳಿಂದ ಕೂಡಿದ ಕಟ್ಟವಾಗಿದೆ. 

Google Ceo sundar Pichai Shares photos of new london office on Instagram mnj

ಶೀಘ್ರದಲ್ಲೇ ಕಚೇರಿಗೆ ತೆರಳಲಿರವ ಗೂಗ್ಲರ್ಸ್: ಪ್ರಕಾಶಮಾನವಾದ ಹಳದಿ, ಕಿತ್ತಳೆ, ಕೆಂಪು ಮತ್ತು ಹಸಿರು ಹೊರಭಾಗಗಳಿಗೆ ಹೆಸರುವಾಸಿಯಾದ ಸೆಂಟ್ರಲ್ ಸೇಂಟ್ ಗೈಲ್ಸ್‌ನಲ್ಲಿ ಹೊಸದಾಗಿ ನವೀಕರಿಸಲಾದ ಗೂಗಲ್ ಕಚೇರಿಯ ಫೋಟೋಗಳನ್ನು ಹಂಚಿಕೊಂಡ ಸುಂದರ್ ಪಿಚೈ  ಹಂಚಿಕೊಂಡಿದ್ದಾರೆ.  "ನಾವು ಲಂಡನ್‌ನಲ್ಲಿರುವ ನಮ್ಮ ಸೆಂಟ್ರಲ್ ಸೇಂಟ್ ಗೈಲ್ಸ್ ಕಚೇರಿಯನ್ನು ಖರೀದಿಸುತ್ತಿದ್ದೇವೆ. ಹೆಚ್ಚು ಫ್ಲೇಕ್ಸಿಬಲ್‌ ಆಗಿರುವ ಭವಿಷ್ಯದ ಕೆಲಸದ ಸ್ಥಳ (ಒಂದು ಸ್ನೀಕ್ ಪೀಕ್‌ಗಾಗಿ ಚಿತ್ರಗಳನ್ನು ನೋಡಿ:) ನಮ್ಮ UK ಕಚೇರಿಗಳಲ್ಲಿ 10,000 ಗೂಗ್ಲರ್‌ಗಳಿಗೆ ಸ್ಥಳಾವಕಾಶವನ್ನು ಹೊಂದಲು ಎದುರುನೋಡುತ್ತಿದ್ದೇವೆ!" ಎಂದು ಪಿಚೈ ಹೇಳಿದ್ದಾರೆ.

Google Ceo sundar Pichai Shares photos of new london office on Instagram mnj

ಸೆಂಟ್ರಲ್ ಸೇಂಟ್ ಗೈಲ್ಸ್ ಖರೀದಿಯೊಂದಿಗೆ, ಕರೋನವೈರಸ್ ಸಾಂಕ್ರಾಮಿಕ (Covid 19) ರೋಗದಿಂದಾಗಿ ಮನೆಯಿಂದ ಕೆಲಸ ಮಾಡುತ್ತಿರುವ (WFH) ತನ್ನ ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆಯಲು ಗೂಗಲ್ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಕಂಪನಿಯು ಈಗಾಗಲೇ ಲಂಡನ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ (Manchester) ಒಂದೆರಡು ಕಚೇರಿಗಳನ್ನು ಹೊಂದಿದೆ ಮತ್ತು ಕಿಂಗ್ಸ್ ಕ್ರಾಸ್ ರೈಲು ನಿಲ್ದಾಣದ ( King’s Cross railway station) ಬಳಿ ಅದರ ಹೊಸ ಪ್ರಧಾನ ಕಛೇರಿಯ ನಿರ್ಮಾಣ - 'ಲ್ಯಾಂಡ್‌ಸ್ಕ್ರೇಪರ್' ಎಂದು ಕರೆಯಲ್ಪಡುವ ಸಮತಲವಾದ ಗಗನಚುಂಬಿ ಕಟ್ಟಡವು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: Search Engine ವ್ಯವಹಾರದಿಂದ Apple ದೂರವಿಡಲು Googleನಿಂದ ಬಿಲಿಯನ್‌ಗಟ್ಟಲೆ ಹಣ ಸಂದಾಯ!

ಸೆಂಟ್ರಲ್ ಸೇಂಟ್ ಗೈಲ್ಸ್‌ನ ಒಪ್ಪಂದವನ್ನು ಅಂತಿಮಗೊಳಿಸುವ ಕುರಿತು ಮಾತನಾಡುತ್ತಾ, ಗೂಗಲ್‌ನ ಮುಖ್ಯ ಹಣಕಾಸು ಅಧಿಕಾರಿ ರುತ್ ಪೊರಾಟ್ (Ruth Porat)ಮಾತನಾಡಿದ್ದಾರೆ. "ಸುಮಾರು 20 ವರ್ಷಗಳಿಂದ ಯುಕೆಯಲ್ಲಿ ಕಾರ್ಯನಿರ್ವಹಿಸಲು ನಾವು ಸವಲತ್ತು ಪಡೆದಿದ್ದೇವೆ ಮತ್ತು ಸೆಂಟ್ರಲ್ ಸೇಂಟ್ ಗೈಲ್ಸ್ ಅಭಿವೃದ್ಧಿಯ ನಮ್ಮ ಖರೀದಿಯು ದೇಶದ ಬೆಳವಣಿಗೆ ಮತ್ತು ಯಶಸ್ಸಿನಲ್ಲಿ ನಮ್ಮ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ." ಎಂದು ರುತ್  ಹೇಳಿದ್ದಾರೆ.  ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ನ್ಯೂಯಾರ್ಕ್‌ನಲ್ಲಿ ವ್ಯಾಪಾರವನ್ನು ವಿಸ್ತರಿಸುವ ತಮ್ಮ ಯೋಜನೆಯ ಭಾಗವಾಗಿ ಗೂಗಲ್ ಮ್ಯಾನ್‌ಹ್ಯಾಟನ್‌ನಲ್ಲಿರುವ ಸೇಂಟ್ ಜಾನ್ಸ್ ಟರ್ಮಿನಲ್ (St. John’s Terminal) ಅನ್ನು ಖರೀದಿಸಿತ್ತು. 

 

 

Follow Us:
Download App:
  • android
  • ios