ಭಾರತದಲ್ಲಿ ಎಲ್ಲಿ ನೋಡಿದ್ರೂ ಕಸ. ಸ್ವಚ್ಛತೆ ಸದ್ಯ ಸವಾಲಾಗಿರುವಾಗ್ಲೇ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಇದ್ರಲ್ಲಿ ಭಾರತದ ರೈಲುಗಳ ಕ್ಲೀನಿಂಗ್ ಹೇಗೆ ನಡೆಯುತ್ತೆ ಅನ್ನೋದನ್ನು ತೋರಿಸಲಾಗಿದೆ.

ಸ್ವಚ್ಛತೆ (Clean) ಅಂದ್ರೆ ಒಂದು ಜಾಗದ ಕಸ (garbage)ವನ್ನು ತೆಗೆದು ಇನ್ನೊಂದು ಜಾಗಕ್ಕೆ ಹಾಕೋದಲ್ಲ. ಭಾರತೀಯರು ಅದೇ ಕೆಲ್ಸ ಮಾಡ್ತಿದ್ದಾರೆ. ಮನೆಯಲ್ಲಿರುವ ಕಸ ತೆಗೆದು ಬೀದಿಗೆ ಹಾಕ್ತಿದ್ದಾರೆ. ಮನೆ ಪಕ್ಕದ ರಸ್ತೆ ಕಸದಿಂದ ತುಂಬಿದ್ರೂ ಚಿಂತೆ ಇಲ್ಲ, ಮನೆಯಲ್ಲಿ ಕಸ ಇರ್ಬಾರದು ಎನ್ನುವ ಪಾಲಿಸಿ ಅವರದ್ದು. ಇದ್ರ ವಿರುದ್ಧ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ತಿದೆ. ಕಸ ವಿಲೇವಾರಿ ಜಾಗೃತಿ ಅಭಿಯಾನ, ದಂಡ ಸೇರಿದಂತೆ ಏನೇ ರೂಲ್ಸ್ ಜಾರಿಗೆ ತಂದ್ರೂ ಜನ ಬಗ್ಗುತ್ತಿಲ್ಲ. ಈ ಂಧ್ಯೆ ಇದು ಬರೀ ಮನೆಗೆ ಸೀಮಿತವಾಗಿಲ್ಲ. ಒಂದ್ಕಡೆ ಕಸ ತೆಗೆದು ಇನ್ನೊಂದು ಕಡೆ ಎಸೆಯೋದ್ರಲ್ಲಿ ರೈಲ್ವೆ ಸಿಬ್ಬಂದಿ ಪರಿಣಿತರು ಎಂಬುದಕ್ಕೆ ಈಗ ಸಾಕ್ಷ್ಯ ಸಿಕ್ಕಿದೆ. ಭಾರತೀಯ ರೈಲ್ವೆಯ ಕ್ಲೀನಿಂಗ್ ವಿಡಿಯೋ ಒಂದು ಈಗ ವೈರಲ್ ಆಗಿದೆ. ಫಾರೆನ್ ಟೂರಿಸ್ಟ್ ಸೆರೆ ಹಿಡಿದಿರುವ ಈ ವಿಡಿಯೋ ನೋಡಿದ ಭಾರತೀಯರು ತಲೆ ತಗ್ಗಿಸುವಂತಾಗಿದೆ.

ರೈಲಿನ ಕ್ಲೀನಿಂಗ್ ಹೇಗಿರುತ್ತೆ ಗೊತ್ತಾ? :

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಫಾರೆನ್ ಟೂರಿಸ್ಟ್ ಸೆರೆ ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ರೈಲನ್ನು ಕ್ಲೀನ್ ಮಾಡ್ತಿರುವ ಸಿಬ್ಬಂದಿಯನ್ನು ನೀವು ಕಾಣಬಹುದು. ಪ್ರಯಾಣದ ವೇಳೆ ತಿಂದು ತೇಗುವ ಪ್ರಯಾಣಿಕರು, ಕವರ್ ಗಳನ್ನು ಸೀಟಿನ ಕೆಳಗೆ ತಳ್ತಾರೆ. ಇದನ್ನು ಕ್ಲೀನ್ ಮಾಡಲು ರೈಲ್ವೆ ಇಲಾಖೆ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಆದ್ರೆ ಕ್ಲೀನ್ ಮಾಡುವ ಸಿಬ್ಬಂದಿ ಕೆಲ್ಸ ಮಾತ್ರ ಮೆಚ್ಚುವಂತಿದೆ. ರೈಲಿನಲ್ಲಿ ಕಸ ಇರ್ಬಾರದು, ಇದು ಅವರ ಗುರಿ. ಪ್ಲಾಸ್ಟಿಕ್ ಸೇರಿದಂತೆ ಅನೇಕ ವಸ್ತು ಪರಿಸರ ನಾಶಕ್ಕೆ ಕಾರಣ ಆಗ್ತಿದೆ. ಇಂಥ ವಸ್ತುಗಳನ್ನು ಬೇರ್ಪಡಿಸಿ, ಅದನ್ನು ಸರಿಯಾಗಿ ವಿಲೇವಾರಿ ಮಾಡ್ಬೇಕು ಎನ್ನುವ ಜ್ಞಾನ ಸಿಬ್ಬಂದಿಗೆ ಇಲ್ಲ. ರೈಲು ಕ್ಲೀನ್ ಆದ್ರೆ ಸಾಕು ಎನ್ನುವ ಒಂದೇ ಗುರಿಯಲ್ಲಿ, ಎಲ್ಲ ಸೀಟ್ ಕೆಳಗೆ ಬಿದ್ದಿರುವ ಕಸವನ್ನು ರೈಲ್ವೆ ಹಳಿ ಪಕ್ಕ ಎಸೆದಿದ್ದಾರೆ. ರೈಲು ಹೋಗ್ತಿರುವಾಗ್ಲೇ ಕ್ಲೀನಿಂಗ್ ಕೆಲಸ ನಡೆಯುತ್ತಿದ್ದು, ಎಲ್ಲ ಕಸವನ್ನು ರೈಲು ಹಳಿ ಪಕ್ಕ ಎಸೆಯಲಾಗಿದೆ.

ರೈಲಿನಲ್ಲಿ ತಿನಿಸು ಮಾರುತ್ತಿದ್ದ ಯುವಕ ಪರದಾಡುವಂತೆ ಮಾಡಿದ ಪ್ರಯಾಣಿಕ: ವೀಡಿಯೋ ನೋಡಿ ನೆಟ್ಟಿಗರ ಆಕ್ರೋಶ

ಭಾರತದಲ್ಲಿ ರೈಲುಗಳನ್ನು ಹೇಗೆ ಸ್ವಚ್ಛಗೊಳಿಸುತ್ತಾರೆ ಎಂಬ ಶೀರ್ಷಿಕೆಯಲ್ಲಿ, ಬ್ಯಾಕ್ಪ್ಯಾಕರ್ ಬೆನ್ ಎಂಬ ಬಳಕೆದಾರ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊ 2.6 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಕಮೆಂಟ್ ಸುರಿಮಳೆಯಾಗಿದೆ. ನಾನು ವಿಡಿಯೋ ಮಾಡೋದನ್ನು ಕ್ಲೀನಿಂಗ್ ಸಿಬ್ಬಂದಿ ನೋಡಿದ್ದಾರೆ. ಆದ್ರೆ ಅದಕ್ಕೆ ಪ್ರಾಮುಖ್ಯತೆ ನೀಡಲಿಲ್ಲ. ಮಹಿಳೆಯೇ ಮತ್ತು ಮಹನೀಯರೇ ವೆಲ್ ಕಂ ಟು ಇಂಡಿಯನ್ ರೈಲ್ವೆ ಅಂತ ವಿದೇಶಿ ವ್ಯಕ್ತಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಮುಸ್ಲಿಮರು: ಕ್ಷೇತ್ರದ ಅಪಪ್ರಚಾರ ಮಾಡ್ತಿರೋರಿಗೆ ತನ್ವೀರ್​ ಹೇಳಿದ್ದೇನು?

ಬಳಕೆದಾರರು ರೈಲ್ವೆ ಇಲಾಖೆ ಈ ಕೆಲ್ಸವನ್ನು ಖಂಡಿಸಿದ್ದಾರೆ. ರೈಲ್ವೆ ಸಚಿವರು ಹಾಗೂ ಆಡಳಿತಕ್ಕೆ ವಿಡಿಯೋ ಟ್ಯಾಗ್ ಮಾಡುವಂತೆ ಸೂಚಿಸಿದ್ದಾರೆ. ಇದು ನಾಚಿಕೆಗೇಡಿ ಕೆಲಸ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಪ್ರಿಯ ಭಾರತೀಯ ರೈಲ್ವೆ, ಇದೇನು ನಡವಳಿಕೆ? ವಿದೇಶಿ ಪ್ರವಾಸಿಗರ ಮುಂದೆ ಇಡೀ ಬೋಗಿಯನ್ನು ಸ್ವಚ್ಛಗೊಳಿಸಿ ಎಲ್ಲಾ ತ್ಯಾಜ್ಯವನ್ನು ಹಳಿಗಳ ಮೇಲೆ ಎಸೆಯುವುದು ಸ್ವಚ್ಛತೆಯಲ್ಲ, ಇದು ಶುದ್ಧ ಬೂಟಾಟಿಕೆ. ಇದು ನಿಮ್ಮ ಸ್ವಚ್ಛ ಭಾರತದ ಕಲ್ಪನೆಯಾಗಿದ್ದರೆ, ಇದು ನಾಚಿಕೆಗೇಡು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ರೈಲ್ವೆ ಸೇವಾ ಕ್ಷಮೆ ಕೇಳಿದ್ದು, ಪಿಎನ್ ಆರ್ ಹಾಗೂ ಮೊಬೈಲ್ ಸಂಖ್ಯೆಯನ್ನು ಕೇಳಿದೆ. ಇದ್ರ ಬಗ್ಗೆ ಹೆಚ್ಚಿನ ತನಿಖೆ ನಡೆಯಲಿದೆ ಎನ್ನುವ ಭರವಸೆ ನೀಡಿದೆ. ಇದೊಂದೇ ವಿಡಿಯೋ ಅಲ್ಲ. ಕೆಲ ದಿನಗಳ ಹಿಂದೆ ಪಾಲಿಥೀನ್ ಬ್ಯಾಗಿನಲ್ಲಿ ತುಂಬಿದ್ದ ಕಸವನ್ನು ರೈಲ್ವೆ ಸಿಬ್ಬಂದಿ ಬೋಗಿಯಿಂದ ಹಳಿಗೆ ಎಸೆಯುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.

View post on Instagram