ಜನವರಿ 22ರಂದು ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆಯಲಿದೆ. ಸಂಪೂರ್ಣ ಆಯೋಧ್ಯೆ ಸಿಂಗಾರಗೊಂಡಿದೆ. ಇದೀಗ ಉತ್ತರ ಪ್ರದೇಶ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಆಯೋಧ್ಯೆ ಸಂಪೂರ್ಣ ಮದ್ಯ-ಮಾಂಸ ಮಾರಾಟ ನಿಷೇಧಿಸಲಾಗಿದೆ. 

ಆಯೋಧ್ಯೆ(ಡಿ.28) ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಜನವರಿ 22ರಂದು ಪ್ರಾಣಪ್ರತಿಷ್ಠೆ ಮೂಲಕ ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಸಂಪೂರ್ಣ ಆಯೋಧ್ಯೆ ಸಿಂಗಾರಗೊಂಡಿದೆ. ಉದ್ಘಾಟನೆ, ಗಣ್ಯರ ಆಗಮನ, ಭದ್ರತೆ ಸೇರಿದಂತೆ ಸಂಪೂರ್ಣ ವಿಚಾರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಅತೀವ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ. ಇದೀಗ ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ಆಯೋಧ್ಯೆಯಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಬಕಾರಿ ಸಚಿವ ನಿತಿನ್ ಅಗರ್ವಾಲ್, ಇದು ಮುಖ್ಯಮಂತ್ರಿ ಆದೇಶವಾಗಿದ್ದು, ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದಿದ್ದಾರೆ.

500 ವರ್ಷಗಳ ಸತತ ಹೋರಾಟದ ಬಳಿಕ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಆಯೋಧ್ಯೆ ರಾಮನಗರಿ ಎಂದೇ ಜನಪ್ರಿಯವಾಗಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಆಯೋಧ್ಯೆಯಲ್ಲಿ ಮದ್ಯ ಮಾಂಸ ಮಾರಾಟ ನಿಷೇಧಿಸಲಾಗಿದೆ. ಆಯೋಧ್ಯೆ ಮಾತ್ರವಲ್ಲ, ರಾಮ ಮಂದಿರಕ್ಕೆ ತೆರಳು ಮಾರ್ಗ 84 ಕೋಸಿ ಪರಿಕ್ರಮ ಮಾರ್ಗ್‌ದಲ್ಲಿರುವ ಮದ್ಯದ ಅಂಗಡಿ ಹಾಗೂ ಮಾಂಸ ಮಾರಾಟ ಅಂಗಡಿಗಳನ್ನೂ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ರಾಮಮಂದಿರ ಉದ್ಘಾಟನೆಗೆ ಸಿಎಂ ಪೈಕಿ ಯೋಗಿಗೆ ಮಾತ್ರ ಆಹ್ವಾನ, ರಾಜ್ಯಪಾಲರಿಗೂ ಇಲ್ಲ ಆಮಂತ್ರಣ!

150 ರಿಂದ 175 ಕಿಲೋಮೀಟರ್ ದೂರದ ಈ ಕೋಸಿ ಪರಿಕ್ರಮ ಮಾರ್ಗ್‌ನಲ್ಲಿರುವ ಎಲ್ಲಾ ಮದ್ಯದ ಅಂಗಡಿ ಹಾಗೂ ಮಾಂಸ ಮಾರಾಟ ಅಂಗಡಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರಣದಿಂದ ಯಾವುದೇ ರೀತಿಯಲ್ಲಿ ಚ್ಯುತಿ ಬರದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ. ರಾಮಾಯಾಣ ಭವ್ಯ ಪರಂಪರೆ, ಗತವೈಭವ ಮರುಕಳಿಸುತ್ತಿದೆ. ಶ್ರೀರಾಮ ಮತ್ತೆ ತನ್ನ ಅರಮನೆಯಲ್ಲಿ ವಿರಾಜಮಾನವಾಗುತ್ತಿದ್ದಾನೆ. ಹೀಗಾಗಿ ಅತೀವ ಮುತುವರ್ಜಿ ವಹಿಸುವಂತೆ ಯೋಗಿ ಆದೇಶ ನೀಡಿದ್ದಾರೆ.

Scroll to load tweet…

ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆಯೇ ನಗರವನ್ನು ಸುಂದರೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈ ನಡುವೆ ಅಯೋಧ್ಯೆಯ ಧರ್ಮಪಥದ ಉಭಯ ಬದಿಗಳಲ್ಲಿ ತಲಾ 10 ಬೀದಿದೀಪಗಳ ಸ್ತಂಭಗಳು ನಿರ್ಮಾಣವಾಗುತ್ತಿದ್ದು, ಅವುಗಳಲ್ಲಿ ಜ್ಯೋತಿ ಬೆಳಗಿಸಿದಾಗ ಸೂರ್ಯನ ಆಕಾರದಲ್ಲಿ ಕಂಗೊಳಿಸುವಂತೆ ವಿನ್ಯಾಸ ಮಾಡಲಾಗಿದೆ.

ಆಯೋಧ್ಯ ಜಂಕ್ಷನ್ ಅಲ್ಲ, ರೈಲು ನಿಲ್ದಾಣಕ್ಕೆ ಹೆಸರು ಸೂಚಿಸಿದ ಸಿಎಂ ಯೋಗಿ ಆದಿತ್ಯನಾಥ್!

ಈ ಕುರಿತು ಮಾಹಿತಿ ನೀಡಿದ ಅಯೋಧ್ಯೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಎ.ಪಿ. ಸಿಂಗ್‌, ‘30 ಅಡಿ ಎತ್ತರದ ತಲಾ 10 ಸ್ತಂಭಗಳನ್ನು ಲತಾ ಮಂಗೇಷ್ಕರ್‌ ವೃತ್ತದಿಂದ ಅಯೋಧ್ಯೆ ಬೈಪಾಸ್‌ವರೆಗೆ ಉಭಯ ಬದಿಗಳಲ್ಲಿ ಸ್ಥಾಪಿಸಲಾಗುತ್ತಿದೆ. ಉಳಿದ 20 ಸೂರ್ಯಸ್ತಂಭಗಳನ್ನು ಧರ್ಮ ಪಥದ ಸತ್ರಂಗಿ ಪೂಲ್‌ ಬಳಿ ಸ್ಥಾಪಿಸಲಾಗುತ್ತಿದೆ. ಇದರ ಕಾಮಗಾರಿ ಡಿ.29ರೊಳಗೆ ಮುಗಿಯಲಿದ್ದು, ಡಿ.30ರಂದು ನರೇಂದ್ರ ಮೋದಿಯವರನ್ನು ಈ ಸೂರ್ಯಸ್ತಂಭಗಳು ಅಯೋಧ್ಯೆಗೆ ಸ್ವಾಗತಿಸಲಿವೆ’ ಎಂದು ತಿಳಿಸಿದ್ದಾರೆ.