ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಜ.22ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ. ಇದರ ಜೊತೆಗೆ ಆಯೋಧ್ಯೆ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣ ಕಾಮಗಾರಿಯೂ ನಡೆಯುತ್ತಿದೆ. ಇದೀಗ ರೈಲು ನಿಲ್ದಾಣವನ್ನು ಆಯೋಧ್ಯೆ ಜಂಕ್ಷನ್ ಎಂದೇ ಕರೆಯಲಾಗುತ್ತಿದೆ. ಆದರೆ ಜಂಕ್ಷನ್ ಬದಲು ಹೊಸ ಹೆಸರನ್ನು ಸಿಎಂ ಸೂಚಿಸಿದ್ದಾರೆ.
ಆಯೋಧ್ಯೆ(ಡಿ.22) ಆಯೋಧ್ಯೆಯ ಭವ್ಯಮಂದಿರದಲ್ಲಿ ಶ್ರೀರಾಮನ ದರ್ಶನಕ್ಕೆ ಭಕ್ತರು ಕಾತರಗೊಂಡಿದ್ದಾರೆ. 500 ವರ್ಷಗಳ ಸತತ ಹೋರಾಟದ ಬಳಿಕ ಇದೀಗ ಶ್ರೀರಾಮ ಗುಡಿಸಲಿನಿಂದ ಮತ್ತೆ ತನ್ನ ವೈಭವೋಪೇತ ಮಂದಿರಕ್ಕೆ ಮರಳುತ್ತಿದ್ದಾನೆ. ಜನವರಿ 22 ರಂದು ಶ್ರೀ ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಇತ್ತ ಆಯೋಧ್ಯೆ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣದ ಕಾಮಗಾರಿಯೂ ನಡೆಯುತ್ತಿದೆ. ಆಯೋಧ್ಯೆ ಜಂಕ್ಷನ್ ರೈಲು ನಿಲ್ದಾಣ ಎಂದೇ ದಾಖಲಾಗಿದೆ . ಆದರೆ ಸಿಎಂ ಯೋಗಿ ಆದಿತ್ಯನಾಥ್, ಇದು ಅಯೋಧ್ಯೆ ಜಂಕ್ಷನ್ ಅಲ್ಲ, ಆಯೋಧ್ಯೆ ಧಾಮ ಎಂದಿದ್ದಾರೆ.
ಆಯೋಧ್ಯೆಯ ರೈಲು ನಿಲ್ದಾಣಕ್ಕೆ ಆಯೋಧ್ಯೆ ಜಂಕ್ಷನ್ ಎಂದೇ ಕರೆಯಲಾಗುತ್ತಿದೆ. ಈ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ಇಲ್ಲಿನ ರೈಲು ನಿಲ್ದಾಣ ಆಯೋಧ್ಯೆ ಧಾಮ ಎಂದು ಹೆಸರು ಸೂಚಿಸಿದ್ದಾರೆ. ಕೇಂದ್ರ ಸರ್ಕಾರಕ್ಕೂ ಇದೇ ಹೆಸರು ಶಿಫಾರಸು ಮಾಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಆಯೋಧ್ಯೆಯಲ್ಲಿನ ರೈಲು ನಿಲ್ದಾಣವನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಲಾಗಿದೆ. ಹೀಗಾಗಿ ಇದೀಗ ಆಯೋಧ್ಯೆ ಜಂಕ್ಷನ್ ಹೆಸರಿನ ಬದಲು ಆಯೋಧ್ಯೆ ಧಾಮ ಎಂದೇ ಈ ರೈಲು ನಿಲ್ದಾಣ ಕರೆಯಲ್ಪಡಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಹೆಸರಲ್ಲಿ ದೇಣಿಗೆ ಸಂಗ್ರಹ, ವಂಚಕರಿಂದ ದೂರವಿರಲು VHP ಎಚ್ಚರಿಕೆ!
2021ರಲ್ಲಿ ಫೈಜಾಬಾದ್ ರೈಲು ನಿಲ್ದಾಣವನ್ನು ಆಯೋಧ್ಯೆ ಕಂಟೋನ್ಮೆಂಟ್ ರೈಲು ನಿಲ್ದಾಣ ಎಂದು 2021ರ ಅಕ್ಟೋಬರ್ ತಿಂಗಳಲ್ಲಿ ಬದಲಿಸಲಾಗಿದೆ. ಡಿಸೆಂಬರ್ 30 ರಂದು ಆಯೋಧ್ಯೆ ರೈಲು ನಿಲ್ದಾಣದಲ್ಲಿನ ಹೊಸ ಕಟ್ಟಡ ಹಾಗೂ ವಂದೇ ಭಾರತ್ ರೈಲಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಆಯೋಧ್ಯೆಗೆ ಆಗಮಿಸುತ್ತಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ವಯಸ್ಸಿನ ದೃಷ್ಟಿಯಿಂದ ಬರಬೇಡಿ ಎಂದು ರಾಮಮಂದಿರ ಟ್ರಸ್ಟ್, ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೆ ಹೇಳಿದ ಬೆನ್ನಲ್ಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿರುವ ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಕುಮಾರ್, ‘ಅಡ್ವಾಣಿ ಮತ್ತು ಜೋಶಿ ಅವರನ್ನು ಆಹ್ವಾನಿಸಲಾಗಿದೆ. ಇಬ್ಬರೂ ಹಿರಿಯರು ಕಾರ್ಯಕ್ರಮಕ್ಕೆ ಬರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ. ಅಡ್ವಾಣಿ ಹಾಗೂ ಜೋಶಿ ಮಂದಿರ ನಿರ್ಮಾಣ ಕುರಿತ ಮೂಲ ಹೋರಾಟಗಾರರು ಎಂಬುದು ಇಲ್ಲಿ ಗಮನಾರ್ಹ.
ಆಯೋಧ್ಯೆ ರಾಮ ಮಂದಿರ ಆಹ್ವಾನ ಕುರಿತು ಅಚ್ಚರಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ!
