Covid XE variant ಕೋವಿಡ್ ಓಮಿಕ್ರಾನ್ XE ಹೊಸ ತಳಿ ಪತ್ತೆ ವರದಿ ನಿರಾಕರಿಸಿದ ಕೇಂದ್ರ!

  • ಮುಂಬೈನಲ್ಲಿ ಮೊದಲ ಓಮಿಕ್ರಾನ್ ವೇರಿಯೆಂಟ್ XE ತಳಿ ಪತ್ತೆ ಪ್ರಕರಣ
  • INSACOG ವರದಿಯಲ್ಲಿ ಹೊಸ ತಳಿ ಪತ್ತೆ ಇಲ್ಲ, ಆತಂಕ ಬೇಡ
  • ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ
Union health ministry denied reports  of new XE coronavirus variant detected in Mumbai genome sequencing does not match ckm

ನವದೆಹಲಿ(ಏ.06): ಭಾರತದಲ್ಲಿ ಮೊದಲ ಓಮಿಕ್ರಾನ್ ಹೊಸ ತಳಿ XE ಪ್ರಕರಣ ಪತ್ತೆಯಾಗಿದೆ ಅನ್ನೋ ವರದಿ ದೇಶದಲ್ಲಿ ಆತಂಕ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸಮಾಧಾನಕ ಸುದ್ದಿ ನೀಡಿದೆ. ಮುಂಬೈನಲ್ಲಿ ಪತ್ತೆಯಾಗಿರುವು ಸಾಮಾನ್ಯ ಓಮಿಕ್ರಾನ್ ಕೇಸ್. ಇದು ಹೊಸ ತಳಿ XE ವೇರಿಯೆಂಟ್ ಅಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಮುಂಬೈ ಪಾಲಿಕೆ ವರದಿ ನೀಡಿದ ಒಂದು ಗಂಟೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಈ ವರದಿಯನ್ನು ನಿರಾಕರಿಸಿದೆ. ಇಷ್ಟೇ ಅಲ್ಲ ಭಾರತದಲ್ಲಿ ಓಮಿಕ್ರಾನ್ ಉಪತಳಿ XE ಪತ್ತೆಯಾಗಿಲ್ಲ. INSACOG ವರದಿ ಪ್ರಕಾರ ಸಂಗ್ರಹಿಸಿದ ಮಾದರಿಗಳಲ್ಲಿ XE ವೇರಿಯೆಂಟ್ ಕುರಿತು ಪರೀಕ್ಷೆ ಮಾಡಲಾಗಿದೆ. ಆದರೆ ಯಾವ ಮಾದರಿಯಲ್ಲೂ XE ವೇರಿಯೆಂಟ್ ಕೋವಿಡ್ ಕಾಣಿಸಿಕೊಂಡಿಲ್ಲ ಎಂದು INSACOG  ವರದಿ ನೀಡಿದೆ.

ಭಾರತದಲ್ಲಿ ಮೊದಲ ಕೊರೋನಾ XE ರೂಪಾಂತರಿ ತಳಿ ಪತ್ತೆ

ಓಮಿಕ್ರಾನ್ ಉಪತಳಿಯಲ್ಲಿ  BA.1 ಹಾಗೂ BA.2 ಎರಡು ಸಂಯೋಜಕಗಳಿವೆ. ಇನ್ನು ಚೀನಾ, ಯೂರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿರುವ BA.2 ಹೆಚ್ಚು ಪರಿಣಾಮಕಾರಿಯಾಗಿ ಹರಡಬಲ್ಲದು. ಆದರೆ BA.1 ವೈರಸ್ ಕೂಡ BA.2 ಕೆಲ ಜೀನೋಮ್ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಆತಂಕ ಬೇಡ. ಭಾರತದಲ್ಲಿ BA.1 ಯಾವುದೇ ಪರಿಣಾಮ ಬೀರಿಲ್ಲ. ಹಲವರಲ್ಲಿ BA.1 ವೈರಸ್ ಕಾಣಿಸಿಕೊಂಡಿದೆ. ಯಾರೂ ಕೂಡ ಆಸ್ಪತ್ರೆ ದಾಖಲಾದ ಉದಾಹರಣೆಗಳಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

ಅನಗತ್ಯ ಗೊಂದಲ ಬೇಡ. ದೇಶದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಓಮಿಕ್ರಾನ್ ಉಪತಳಿ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನಚ್ಚರಿಕೆ ಅಗತ್ಯ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಓಮಿಕ್ರಾನ್ XE ತಳಿ ಮೊದಲು ಯುಕೆಯಲ್ಲಿ ಪತ್ತೆಯಾಗಿತ್ತು. ಜನವರಿ 19 ರಂದು ಹೊಸ ತಳಿ ಪತ್ತೆಯಾಗಿ ಮಿಂಚಿನಂತೆ ಹರಡಿತ್ತು. ಬಳಿಕ ಚೀನಾ, ಯೂರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ XE ವೇರಿಯೆಂಟ್ ಕಾಣಿಸಿಕೊಂಡಿದೆ. ಚೀನಾದ ಕೆಲ ಭಾಗದಲ್ಲಿ ಮುನ್ನಚ್ಚೆರಿಕಾ ಕ್ರಮವಾಗಿ ಲಾಕ್‌ಡೌನ್ ಘೋಷಿಸಲಾಗಿದೆ.

ಕೋವಿಡ್‌ನಿಂದ ಚೀನಾದ ಶಾಂಘೈ ಲಾಕ್‌ಡೌನ್: ಆಹಾರವಿಲ್ಲದೇ ಕಂಗೆಟ್ಟ ಜನ

XE ತಳಿ ಕುರಿತು WHO ಎಚ್ಚರಿಕೆ
ವಿಶ್ವದ ಬಹುತೇಕ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತಿರುವ ಹೊತ್ತಿನಲ್ಲೇ, ಬ್ರಿಟನ್‌ನಲ್ಲಿ ಕೋವಿಡ್‌ ವೈರಸ್‌ನ ಹೊಸ ರೂಪಾಂತರಿಯೊಂದು ಪತ್ತೆಯಾಗಿದೆ. ಒಮಿಕ್ರೋನ್‌ ರೂಪಾಂತರಿಗಳಾದ ‘ಬಿಎ.1’ ಹಾಗೂ ‘ಬಿಎ.2’ ತಳಿಯ ಸಂಗಮವಾದ ‘ಎಕ್ಸ್‌ಇ’ ಎಂಬ ಹೊಸ ರೂಪಾಂತರಿ ಇದೀಗ ಕಾಣಿಸಿಕೊಂಡಿದ್ದು, ಇದು ಒಮಿಕ್ರೋನ್‌ಗಿಂತ ಶೇ.10ರಷ್ಟುಹೆಚ್ಚು ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ. ಅಲ್ಲದೆ, ಕೊರೋನಾ ಮಾರ್ಗಸೂಚಿಗಳನ್ನು ಸಡಿಲಗೊಳಿಸುವಾಗ ದೇಶಗಳು ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ಕ್ರಮಗಳನ್ನು ಜರುಗಿಸಬೇಕು. ಎಚ್ಚರಿಕೆಯಿಂದ ಇರಬೇಕು ಎಂದೂ ಅದು ಸೂಚಿಸಿದೆ.

ಅಮೆರಿಕ, ಬ್ರಿಟನ್‌ನಲ್ಲಿ ಮಿಶ್ರತಳಿ ಪತ್ತೆ
ಒಮಿಕ್ರೋನ್‌ ಹಾವಳಿ ಕಡಿಮೆಯಾಯ್ತು, ಇನ್ನೇನು 4ನೇ ಅಲೆ ಭೀತಿ ಇಲ್ಲ ಅನ್ನುವ ಹಂತದಲ್ಲೇ, ಹೊಸ ರೀತಿಯ ಕೋವಿಡ್‌ ರೂಪಾಂತರಿ ತಳಿಗಳ ಮಿಶ್ರಣದಿಂದ 4ನೇ ಅಲೆ ಬರುವ ಸಾಧ್ಯತೆಯಿದೆಯೇ ಹೊರತು ಒಮಿಕ್ರೋನ್‌ನಿಂದ ಹೊಸ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೂಡ ಕೊರೋನಾ ವೈರಸ್‌ನ ಬೇರೆ ಬೇರೆ ರೂಪಾಂತರಿಗಳ ಮಿಶ್ರ ತಳಿಯ ಮೇಲೆ ನಿಗಾ ವಹಿಸಿದೆ. ಜಗತ್ತಿನಾದ್ಯಂತ ಈಗ ಕೋವಿಡ್‌ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆ ಪೈಕಿ ಅಮೆರಿಕ ಮತ್ತು ಇಸ್ರೇಲ್‌ನಲ್ಲಿ ಡೆಲ್ಟಾಹಾಗೂ ಒಮಿಕ್ರೋನ್‌ ರೂಪಾಂತರಿಗಳ ಮಿಶ್ರ ತಳಿ ಪತ್ತೆಯಾಗಿದೆ. ಇದು ಈ ಹಿಂದೆಯೇ ಪತ್ತೆಯಾಗಿ, ನಂತರ ಹೆಚ್ಚೇನೂ ಸುದ್ದಿ ಮಾಡದೆ ತೆರೆಯ ಮರೆಗೆ ಸರಿದ ರೂಪಾಂತರಿಯಾಗಿತ್ತು. ಇದೀಗ ಮತ್ತೆ ಹರಡತೊಡಗಿದೆ. ಹೀಗಾಗಿ ವಿಜ್ಞಾನಿಗಳು ಕೊರೋನಾದ ಹೊಸ ಹೊಸ ರೂಪಾಂತರಿಗಳು ಸೇರಿಕೊಂಡು ಹೊಸ ಮಿಶ್ರ ತಳಿಯೊಂದು ಮುಂದಿನ ಅಲೆಗಳನ್ನು ಸೃಷ್ಟಿಸಬಹುದು ಎಂದು ನಿರೀಕ್ಷಿಸಿದ್ದಾರೆ.

Latest Videos
Follow Us:
Download App:
  • android
  • ios