ಕೋವಿಡ್‌ನಿಂದ ಚೀನಾದ ಶಾಂಘೈ ಲಾಕ್‌ಡೌನ್: ಆಹಾರವಿಲ್ಲದೇ ಕಂಗೆಟ್ಟ ಜನ

  • ಲಾಕ್‌ಡೌನ್‌ನಿಂದ ಇಡೀ ನಗರವೇ ಸಂಪೂರ್ಣ ಸ್ತಬ್ಧ
  • ಆಹಾರವಿಲ್ಲದೇ ಕಂಗೆಟ್ಟ ಶಾಂಘೈ ಜನ
  • ಕೋವಿಡ್‌ನಿಂದ ಚೀನಾದ ಶಾಂಘೈ ಲಾಕ್‌ಡೌನ್
People are starving for food after a lockdown announcement in Shanghai, China akb

ಶಾಂಘೈ: ಚೀನಾದ(China) ಶಾಂಘೈ (Shanghai) ನಗರದಲ್ಲಿ ಲಾಕ್‌ಡೌನ್‌ ಘೋಷಣೆಯ ಹಿನ್ನೆಲೆಯಲ್ಲಿ ಜನರು ಆಹಾರ ಸಿಗದೇ ಹಸಿವಿನಿಂದ ಕಂಗೆಟ್ಟಿದ್ದಾರೆ. ಸರ್ಕಾರದ (government) ಆದೇಶದ ಮೇರೆಗೆ ನಗರದಲ್ಲಿರುವ ಎಲ್ಲ 2.5 ಕೋಟಿ ಜನರು ಮನೆಯಲ್ಲೇ ಕ್ವಾರಂಟೈನ್‌ (quarantine) ಆಗಿದ್ದಾರೆ. ಇವರು ಆಹಾರ ಸಾಮಗ್ರಿಗಳನ್ನು ತರಲು ಕೂಡಾ ಮನೆಯಿಂದ ಆಚೆ ಹೋಗುವಂತಿಲ್ಲ. ನಗರದಲ್ಲಿ ಆಹಾರವನ್ನು ಮನೆ ಬಾಗಿಲಿಗೆ ತಂದು ಕೊಡುವ ಡಿಲಿವರಿ ಬಾಯ್‌ಗಳ (delivery boys) ತೀವ್ರ ಕೊರತೆಯಿದೆ. ಹೀಗಾಗಿ ಸರ್ಕಾರವೇ ಆನ್ಲೈನ್‌ನಲ್ಲಿ ಆರ್ಡರ್‌ (online order) ಮಾಡಿದ ವಸ್ತುಗಳನ್ನು ಮನೆಯ ಬಳಿ ತಲುಪಿಸುವುದಾಗಿ ಹೇಳಿದರೂ ಅಗತ್ಯ ಪ್ರಮಾಣದಲ್ಲಿ, ನಿಗದಿತ ಸಮಯದಲ್ಲಿ ಆಹಾರ ಒದಗಿಸುತ್ತಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇವಲ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಮನೆಯಿಂದ ಆಚೆ ಬರಬಹುದಾಗಿದೆ. ಪರೀಕ್ಷೆ ಮಾಡಿಸಿಕೊಳ್ಳಲು ಉದ್ದುದ್ದ ಸಾಲುಗಳಲ್ಲಿ ನಿಂತ ಜನರನ್ನು ನಿಲ್ಲಿಸಿದ್ದು, ಈ ವೇಳೆಯೇ ಸೋಂಕು ಹರಡುವ ಭೀತಿ ಹೆಚ್ಚಿದೆ. ಸೋಂಕಿತರನ್ನು ಸರ್ಕಾರ ಐಸೋಲೇಶನ್‌ ರೂಮಿಗೆ ಬಲವಂತವಾಗಿ ಕಳುಹಿಸುತ್ತಿದ್ದು ಅಲ್ಲಿನ ಪರಿಸ್ಥಿತಿ ಇನ್ನಷ್ಟುಭೀಕರವಾಗಿದೆ. ಆಹಾರ, ಬಿಸಿನೀರಿನ ವ್ಯವಸ್ಥೆಯೂ ಇಲ್ಲ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.

Covid Crisis: ಶಾಂಘೈ ಲಾಕ್‌ಡೌನ್‌: ನಾಯಿ ಜತೆಗೂ ಹೊರಬರುವಂತಿಲ್ಲ..!

ಚೀನಾದಲ್ಲಿ ಮಂಗಳವಾರ ಒಂದೇ ದಿನ 6,886 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಶಾಂಘೈಯಲ್ಲೇ 4,477 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಸೋಂಕಿನ ಹರಡುವಿಕೆ ತಡೆಗಟ್ಟಲು ಎಲ್ಲ ನಾಗರಿಕರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಅಲ್ಲದೇ ಸಾಕುನಾಯಿಯನ್ನು(Dog) ಹೊರಗಡೆ ಕರೆದೊಯ್ಯುವುದರ ಮೇಲೂ ನಿರ್ಬಂಧ ವಿಧಿಸಲಾಗಿದೆ.

ಸುಮಾರು 2.6 ಕೋಟಿ ಜನಸಂಖ್ಯೆಯಿರುವ ಚೀನಾದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾದ ಶಾಂಘೈನಲ್ಲಿ(Shanghai) ಎರಡು ಹಂತದಲ್ಲಿ ಲಾಕ್‌ಡೌನ್‌(Lockdown) ಘೋಷಿಸಲಾಗಿದೆ. ಮೊದಲನೇ ಹಂತದಲ್ಲಿ 4 ದಿನಗಳ ಕಾಲ ನಗರದ ಒಂದು ಭಾಗವನ್ನು ಲಾಕ್‌ಡೌನ್‌ ಮಾಡಿದರೆ, ಎರಡನೇ ಹಂತದಲ್ಲಿ ಇನ್ನರ್ಧ ನಗರದಲ್ಲಿ ಲಾಕ್‌ಡೌನ್‌ ಘೋಷಿಸಲಾಗುವುದು. ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಕಡ್ಡಾಯವಾಗಿ ಕ್ವಾರಂಟೈನ್‌(Quarantine) ಆಗಬೇಕು. ನಾಗರಿಕರು ಕೇವಲ ಕೋವಿಡ್‌ ಪರೀಕ್ಷೆಯನ್ನು(Covid Test) ಮಾಡಿಸಿಕೊಳ್ಳಲು ಮನೆಯಿಂದ ಹೊರಗಡೆ ಹೋಗಬಹುದಾಗಿದೆ. ತಮ್ಮ ಮನೆಯ ಆವರಣ, ತೆರೆದ ಬಯಲುಗಳಲ್ಲೂ ಜನರ ಓಡಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಈ ವೇಳೆ ಸಾಕುನಾಯಿಯನ್ನು ಹೊರಗಡೆ ಸಂಚಾರಕ್ಕೆ ಕರೆದೊಯ್ಯುವಂತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Covid Crisis: ಚೀನಾದ ಶಾಂಘೈ ಸಂಪೂರ್ಣ ಲಾಕ್‌ಡೌನ್‌: ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್‌ ಟೆಸ್ಟ್‌

ವಾಣಿಜ್ಯ ನಗರಿಯಾದ ಶಾಂಘೈನಲ್ಲಿ ಲಾಕ್‌ಡೌನ್‌ ಹೇರಿಕೆಯಿಂದಾಗಿ ಉದ್ಯಮಕ್ಕೆ ತೀವ್ರ ಪೆಟ್ಟಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ, ಬಾಡಿಗೆಯಲ್ಲಿ ಕಡಿತ, ಹಾಗೂ ಉದ್ಯಮಿಗಳಿಗೆ ಸಾಲದ ನೆರವನ್ನು ಘೋಷಿಸಲು ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶಾಂಘೈ: ವಾಣಿಜ್ಯ ನಗರಿಯಾದ ಶಾಂಘೈನಲ್ಲಿ ಸೋಮವಾರ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ 20,000ಕ್ಕೂ ಹೆಚ್ಚಿನ ಬ್ಯಾಂಕರ್‌ಗಳು, ವ್ಯಾಪಾರಿ ಹಾಗೂ ಇನ್ನಿತರ ಸಿಬ್ಬಂದಿ ಕಚೇರಿಯಲ್ಲೇ ತಂಗಿದ್ದಾರೆ ಎಂದು ಸ್ಥಳೀಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. 

ಶಾಂಘೈ ಷೇರು ಪೇಟೆ, 285 ಇನ್ನಿತರ ಪ್ರಮುಖ ವಾಣಿಜ್ಯ ಸಂಸ್ಥೆಗಳ ಕಚೇರಿಗಳು ಶಾಂಘೈನ ಲುಜಿಯಾಝುಯಿ ಆರ್ಥಿಕ ನಗರದಲ್ಲಿವೆ. ಈ ಕಚೇರಿಗಳಲ್ಲಿ 20,000ಕ್ಕೂ ಹೆಚ್ಚಿನ ಸಿಬ್ಬಂದಿ, ಮ್ಯಾನೇಜರ್‌, ಬ್ಯಾಂಕರ್‌ಗಳು ನೆಲೆಸಿದ್ದಾರೆ. ಇವರಿಗೆ ಕಚೇರಿಯಲ್ಲೇ ಮಲಗುವ ವ್ಯವಸ್ಥೆ ಮಾಡಲಾಗಿದೆ. ವ್ಯಾಪಾರ- ವಹಿವಾಟಿನಲ್ಲಿ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲು 2 ಪಾಳಿಯಲ್ಲಿ ಕೆಲಸ ನಡೆಸಲಾಗುತ್ತಿದೆ. 

Latest Videos
Follow Us:
Download App:
  • android
  • ios