Covid Variant XE ಭಾರತದಲ್ಲಿ ಮೊದಲ ಕೊರೋನಾ XE ರೂಪಾಂತರಿ ತಳಿ ಪತ್ತೆ, ಆತಂಕ ಶುರು!
- ಚೀನಾ, ಯೂರೋಪ್‌ನಲ್ಲಿ ಕಾಣಿಸಿಕೊಂಡ XE ಕೋವಿಡ್ ತಳಿ
- ಮುಂಬೈನಲ್ಲಿ ಮೊದಲ ಪ್ರಕರಣ ವರದಿ, ನಗರದಲ್ಲಿ ಕಟ್ಟೆಚ್ಚರ
- ಅತೀ ವೇಗವಾಗಿ ಹರಡಬಲ್ಲ ಸಾಮರ್ಥ್ಯ ಹೊಂದಿರುವ ವೈರಸ್
ಮುಂಬೈ(ಏ.06): ಚೀನಾದಲ್ಲಿ ಲಾಕ್‌ಡೌನ್, ಯುಕೆನಲ್ಲಿ ವಿಪರೀತ ಕೇಸ್, ಯುರೋಪ್ ರಾಷ್ಟ್ರಗಳಲ್ಲಿ ಆತಂಕ ಹೆ್ಚ್ಚಿಸಿರುವ ಕೋವಿಡ್ ಓಮಿಕ್ರಾನ್ ಹೊಸ ತಳಿ XE ಇದೀಗ ಬಾರತಕ್ಕೂ ಕಾಲಿಟ್ಟಿದೆ. ವಿಶ್ವದ ಹಲವು ರಾಷ್ಟ್ರಗಳಿಗೆ ಹರಡಿ ಕೋವಿದ್ ಮಾರ್ಗಸೂಚಿಗಳನ್ನು ಮತ್ತೆ ಜಾರಿಗೊಳಿಸುವಂತೆ ಮಾಡಿದ ಹೊಸ ತಳಿ ಇದೇ ಮೊದಲ ಬಾರಿಗೆ ಭಾರತದ ಮುಂಬೈನಲ್ಲಿ ಪತ್ತೆಯಾಗಿದೆ.
ಮುಂಬೈ ಮುನ್ಸಿಪಲ್ ಕಾರ್ಪೋರೇಶನ್(BMC) ಹೆಲ್ತ್ ಬುಲೆಟಿನ್‌ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ನಿನ್ನೆ(ಏ.05) ಮುಂಬೈನಲ್ಲಿ 376 ಮಾದಿರಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 230 ಮಂದಿ ಮುಂಬೈ ನಿವಾಸಿಗಳಾಗಿದ್ದಾರೆ. 230 ಮುಂಬೈ ನಿವಾಸಿಗಳ ಪೈಕಿ 228 ಒಮಿಕ್ರಾನ್ ಕೇಸ್ ಪತ್ತೆಯಾಗಿದೆ. ಇನ್ನು ಒಂದು ಕೇಸ್ ಒಮಿಕ್ರಾನ್ ಉಪತಳಿ XE ಹಾಗೂ ಒಂದು ಕಪ್ಪಾ ವೇರಿಯೆಂಟ್ ಪತ್ತೆಯಾಗಿದೆ ಎಂದು BMC ಹೇಳಿದೆ.
XE ವೈರಸ್ ಬಗ್ಗೆ ತಜ್ಞರ ವಾರ್ನಿಂಗ್, 4ನೇ ಅಲೆ ಮುನ್ನ ಈ ಶಾಕಿಂಗ್ ವಿಚಾರ ತಿಳಿದುಕೊಳ್ಳಿ!
ಇತರ ದೇಶಗಳಲ್ಲಿ ಪತ್ತೆಯಾಗಿ ಆತಂಕ ಸೃಷ್ಟಿಸಿರುವ XE ವೇರಿಯೆಂಟ್ ಭಾರತದಲ್ಲೂ ಕಾಣಿಸಿಕೊಂಡಿದೆ. ಆದರೆ ಮುಂಬೈನಲ್ಲಿ XE ವೇರಿಯೆಂಟ್ ಸೋಂಕಿತ ವ್ಯಕ್ತಿ ಆರೋಗ್ಯವಾಗಿದ್ದಾರೆ, ಸಣ್ಣ ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದಾರೆ. ಆದರೆ ಎಲ್ಲಾ ಮುನ್ನಚ್ಚೆರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು BMC ಹೇಳಿದೆ.
ಚೀನಾದಲ್ಲಿ ಲಾಕ್‌ಡೌನ್
ಚೀನಾ, ಯೂರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉಪತಳಿ XE ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಸಿದೆ. ಚೀನಾದ ಅತಿ ದೊಡ್ಡ ನಗರ ಶಾಂಘೈನಲ್ಲಿ ವೇಗವಾಗಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು ನಿಗ್ರಹಕ್ಕೆ ಕಠಿಣ ಕ್ರಮಗಳನ್ನು ಜಾರಿ ಮಾಡುತ್ತಿರುವ ಚೀನಾ ಸರ್ಕಾರ ಸೋಮವಾರ 2000 ಸೇನಾ ವೈದ್ಯಕೀಯ ಸಿಬ್ಬಂದಿ ಸೇರಿ 10,000ಕ್ಕೂ ಹೆಚ್ಚು ಆರೋಗ್ಯ ಕಾರ‍್ಯಕರ್ತರನ್ನು ರವಾನಿಸಿದೆ.
ಕೊರೋನಾ ಹೊಸ ತಳಿ XE ಎಂಟ್ರಿ, ಒಮಿಕ್ರಾನ್‌ಗಿಂತ ಹತ್ತು ಪಟ್ಟು ಹೆಚ್ಚು ವೇಗ, WHO ವಾರ್ನಿಂಗ್!
ಕೋವಿಡ್ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವ ಚೀನಾದಲ್ಲಿ ಬಿಎ.2 ಕೊರೋನಾ ರೂಪಾಂತರಿ ದಿನೇ ದಿನೇ ಆತಂಕ ಸೃಷ್ಟಿಸುತ್ತಿದೆ. ಸೋಮವಾರ ದೇಶದಲ್ಲಿ 13,000 ಪ್ರಕರಣಗಳು ದೃಢಪಟ್ಟಿದ್ದು, ಶಾಂಘೈ ನಗರವೊಂದರಲ್ಲೇ 9000 ಕೇಸ್ ಪತ್ತೆಯಾಗಿವೆ. ಸೋಂಕು ನಿಗ್ರಹಕ್ಕೆ ಶಾಂಘೈ ನಗರದಲ್ಲಿ ಕಳೆದ 2 ವಾರಗಳಿಂದ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ನಡುವೆ ಸೋಮವಾರ ಬರೋಬ್ಬರಿ 2.5 ಕೋಟಿ ಮಂದಿಗೆ ಸಾಮೂಹಿಕ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಇನ್ನು ಶಾಂಘೈನಲ್ಲಿ ಅನೇಕ ಕಾರ್ಖಾನೆಗಳು ಮತ್ತು ಹಣಕಾಸು ಸಂಸ್ಥೆಗಳು ಸೀಮಿತ ಉದ್ಯೋಗಿಗಳನ್ನು ಬಳಸಿಕೊಂಡು ಕಾರ‍್ಯ ನಿರ್ವಹಿಸುತ್ತಿದ್ದರೂ ಲಾಕ್‌ಡೌನ್ ವಿಸ್ತರಣೆಯಿಂದ ಚೀನಾ ರಾಜಧಾನಿಯ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಚೀನಾದಲ್ಲಿ ಒಂದೇ ದಿನ 13,146 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಎರಡು ವರ್ಷಗಳ ಹಿಂದೆ ವುಹಾನ್‌ನಲ್ಲಿ ಆರಂಭವಾದ ಕೋವಿಡ್ ಮೊದಲನೇ ಅಲೆಯ ಉತ್ತುಂಗದ ನಂತರ ದಾಖಲಾದ ಅತೀ ಹೆಚ್ಚು ಪ್ರಕರಣವಾಗಿದೆ. ಈ ಪ್ರಕರಣಗಳಲ್ಲಿ ಶೇ.70ರಷ್ಟುಪ್ರಕರಣಗಳು ಚೀನಾದ ಪ್ರಮುಖ ವಾಣಿಜ್ಯ ನಗರಿಯಾದ ಶಾಂಘೈನಲ್ಲಿಯೇ ವರದಿಯಾಗಿವೆ. ಚೀನಾದ ಕೋವಿಡ್ ವಿರುದ್ಧ ಶೂನ್ಯ ಸಹನೆಯ ನೀತಿಯಡಿ ಶಾಂಘೈನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ವಿಧಿಸಿದ್ದರೂ ಭಾನುವಾರ 438 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 7788 ರೋಗ ಲಕ್ಷಣಗಳಿರದ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಬೀಜಿಂಗ್‌ನ ಡಬಲ್ ಟೆಸ್ಟ್‌ಗೆ ಅದೇಶ ಹೊರಡಿಸಲಾಗಿದೆ. ಭಾನುವಾರ ಆ್ಯಂಟಿಜೆನ್ ಮತ್ತು ಸೋಮವಾರ ನ್ಯೂಕ್ಲಿಯಕ್ ಆ್ಯಸಿಡ್ ಟೆಸ್ಟ್‌ಗೆ ಸೂಚಿಸಲಾಗಿದೆ.