ಬುಲ್ಡೋಜರ್ ಯೋಗಿ ಆದಿತ್ಯನಾಥ್ ಕಡೆ ತಿರುಗಲಿದೆ, SP ನಾಯಕ ಶಫೀಖುರ್ ಎಚ್ಚರಿಕೆ!
ಸಮಾಜವಾದಿ ಪಾರ್ಟಿ ಮುಖಂಡನ ಆಪ್ತ, ಕೊಲೆಗೆ ನೆರವು ನೀಡಿದ ವ್ಯಕ್ತಿಯ ಮನೆ ಮೇಲೆ ಬುಲ್ಡೋಜರ್ ಹತ್ತಿಸಿದ ಘಟನೆ ಇದೀಗ ಉತ್ತರ ಪ್ರದೇಶದಲ್ಲಿ ಭಾರಿ ಗದ್ದಲಕ್ಕೆ ಕಾರಣಾಗಿದೆ. ಒಬ್ಬೊಬ್ಬ ಹಂತಕರನ್ನು ಟಾರ್ಗೆಟ್ ಮಾಡಿರುವ ಯೋಗಿ ಆದಿತ್ಯನಾಥ್ ಕಠಿಣ ಶಿಕ್ಷೆ ನೀಡುತ್ತಿದ್ದಾರೆ. ಇದು ಸಮಾಜವಾದಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಯೋಗಿ ಆದಿತ್ಯನಾಥ್ ವಿರುದ್ಧವೇ ಬುಲ್ಡೋಜರ್ ತಿರುಗಲಿದೆ ಎಂದು ಎಚ್ಚರಿಕೆ ನೀಡಿದ್ದರೆ.
ಲಖನೌ(ಮಾ.02): ಬಿಎಸ್‌ಪಿಯ ಶಾಸಕ ರಾಜು ಪಾಲ್ ಹತ್ಯೆ ಕೇಸಿನ ಪ್ರಮುಖ ಸಾಕ್ಷಿ ಉಮೇಶ್ ಪಾಲ್‌ನ ಕೊಲೆ ಪ್ರಕರಣ ಉತ್ತರ ಪ್ರದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಹಾಡಹಗಲೇ ನಡೆದ ಈ ಹತ್ಯೆಗೆ ಪ್ರತಿಕಾರ ತೀರಿಸಿ ಗೂಂಡಾಗಳನ್ನ ಹೂತು ಹಾಕುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಗುಡುಗಿದ್ದರು. ಅದರಂತೆ ಯೋಗಿ ಆದಿತ್ಯನಾಥ್ ಉಮೇಶ್ ಪಾಲ್ ಹಂತಕರನ್ನು ಟಾರ್ಗೆಟ್ ಮಾಡಿ ಅತ್ಯಂತ ಕಠಿಣ ಶಿಕ್ಷೆ ನೀಡುತ್ತಿದ್ದಾರೆ. ಪಾಲ್ ಹತ್ಯೆಯ ಪ್ರಮುಖ ಆರೋಪಿಯನ್ನು ಎನ್‌ಕೌಂಟರ್ ಮಾಡಿದರೆ, ಮರುದಿನ ಹತ್ಯೆ ಆರೋಪಿ, ಗ್ಯಾಂಗ್‌ಸ್ಟರ್ ಅತೀಕ್ ಸಹಚರನ ಮನೆ ಮೇಲೆ ಯೋಗಿ ಆದಿತ್ಯನಾಥ್ ಬುಲ್ಡೋಜರ್ ಹತ್ತಿಸಿ ಧ್ವಂಸ ಮಾಡಿದ್ದಾರೆ. ಇದು ಸಮಾಜವಾದಿ ಪಾರ್ಟಿಯನ್ನು ಮತ್ತಷ್ಟು ಕೆರಳಿಸಿದೆ. ಇದೀಗ ಸಮಾಜವಾದಿ ಪಾರ್ಟಿ ನಾಯಕ ಶಫೀಖುರ್ ರೆಹಮಾನ್ ಬರ್ಖ್ ಎಚ್ಚರಿಕೆ ನೀಡಿದ್ದಾರೆ. ಬುಲ್ಡೋಜರ್ ಯೋಗಿ ಆದಿತ್ಯನಾಥ್ ಕಡೆ ತಿರುಗಲಿದೆ ಎಂದಿದ್ದಾರೆ.
ಯೋಗಿ ಆದಿತ್ಯನಾಥ್ ಅಧಿಕಾರದಿಂದ ಇಳಿದ ಮೇಲೆ ಬುಲ್ಡೋಜರ್ ಅವರತ್ತ ತಿರುಗಲಿದೆ ಎಂದು ಶಫೀಖುರ್ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಮಣಿಸಿ ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬರಲಿದೆ. ಬಳಿಕ ಯೋಗಿ ಆದಿತ್ಯನಾಥ್ ವಿರುದ್ಧ ಬುಲ್ಡೋಜರ್ ಕಾರ್ಯನಿರ್ವಹಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಪ್ರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ ಎಂದು ಬರ್ಖ್ ಪ್ರಶ್ನಿಸಿದ್ದಾರೆ.
Suvarna Focus: ಅಲ್ಲಿ ಎನ್ಕೌಂಟರ್.. ಇಲ್ಲಿ ಬುಲ್ಡೋಜರ್.. ಮಾಫಿಯಾ ಕ್ರಿಮಿಗಳಿಗೆ ಯೋಗಿಯೇ ಡೇಂಜರ್..!
ಯೋಗಿ ಆದಿತ್ಯನಾಥ್ ಅಧಿಕಾರ ಬಳಸಿ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಶಫೀಖುರ್ ಆರೋಪಿಸಿದ್ದಾರೆ. ಉಮೇಶ್ ಪಾಲ್ ಹತ್ಯೆಯ ಪ್ರಮುಖ ಆರೋಪಿಗಳ ವಿರುದ್ಧ ಯೋಗಿ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಉಮೇಶ್ ಪಾಲ್ ಹತ್ಯೆ ಹಿಂದೆ ಸಮಾಜವಾದಿ ಪಾರ್ಟಿ ನಾಯಕನ ಕೈವಾಡ ಬಯಲಾಗುತ್ತಿದೆ. ಇದು ಸಮಾಜವಾದಿ ಪಾರ್ಟಿ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಕೇಸಿನ ಸಾಕ್ಷಿ ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿ, ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ ನಿಕಟ ಸಹಚರ ಜಾಫರ್ ಅಹ್ಮದ್ ಎಂಬಾತನ ಪ್ರಯಾಗರಾಜ್‌ದಲ್ಲಿದ್ದ ಮನೆಯನ್ನು ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದ್ದಾರೆ.ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ರಿಮಿನಲ್‌ಗಳನ್ನು ಮಣ್ಣಿನಲ್ಲಿ ಮಣ್ಣು ಮಾಡಲಾಗುವುದು ಎಂದಿದ್ದರು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ. ಇದೇ ಮನೆಯಲ್ಲೇ ಉಮೇಶ್ ಹತ್ಯೆಗೆ ಸಂಚು ನಡೆದಿತ್ತು ಎನ್ನಲಾಗಿದೆ.
ಉಮೇಶ್ ಪಾಲ್ ಹತ್ಯೆ ಮಾಡಿದದ್ದ ಆರೋಪಿ ಆಪ್ತನ ಮನೆ ಮೇಲೆ ಬುಲ್ಡೋಡರ್ ಹತ್ತಿಸಿದ ಯೋಗಿ ಸರ್ಕಾರ!
ಉಮೇಶ್ ಪಾಲ್‌ನ ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಸೋಮವಾರ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.ಸಾಕ್ಷಿಯಾದ ಉಮೇಶ್ ಮೇಲೆ ದಾಳಿ ಮಾಡಲು ಬಳಕೆ ಮಾಡಿದ ಎಸ್‌ಯುವಿಯನ್ನು ಚಾಲನೆ ಮಾಡುತ್ತಿದ್ದ ಆರೋಪಿ ಅರ್ಬಾಜ್‌ನನ್ನು ಬಂಧಿಸಲು ಪೊಲೀಸರು ಸುತ್ತುವರೆದ ಸಮಯದಲ್ಲಿ ಆತನ ಗುಂಡಿನ ದಾಳಿ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆರೋಪಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು ಸಹ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅರ್ಬಾಜ್ ಜೊತೆಗ ಇನ್ನೂ ಇಬ್ಬರಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಡಿಸಿಪಿ ನವೇಂದು ಕುಮಾರ್ ಹೇಳಿದ್ದಾರೆ.