Asianet Suvarna News Asianet Suvarna News

Human Sacrifice In Kerala: ಸುಶಿಕ್ಷಿತ ಕೇರಳದ ದೇವಸ್ಥಾನದಲ್ಲಿ ಎರಡು ಮಹಿಳೆಯರ ಬಲಿ!

ಶಿಕ್ಷಿತರ ನಾಡು ಕೇರಳದಲ್ಲಿ ಮೂಢನಂಬಿಕೆ ಪ್ರಕರಣ ವರದಿಯಾಗಿದೆ. ಕೇರಳದ ದೇವಸ್ಥಾನದಲ್ಲಿ ಇಬ್ಬರು ಮಹಿಳೆಯರ ನರಬಲಿ ಮಾಡಲಾಗಿದೆ. ಎರ್ನಾಕುಲಂ ಜಿಲ್ಲೆಯ ಇಬ್ಬರು ಮಹಿಳೆಯರ ನರಬಲಿ ನಡೆಸಲಾಗಿದೆ ಎಂದು ವರದಿಯಾಗಿದೆ.
 

Two women sacrificed for superstitious rituals for a couple in kerala san
Author
First Published Oct 11, 2022, 10:57 AM IST

ತಿರುವನಂತಪುರ (ಅ.11): ಸುಶಿಕ್ಷಿತರ ರಾಜ್ಯ ಕೇರಳದಲ್ಲಿ ಮೂಡನಂಬಿಕೆಯ ಪ್ರಕರಣ ವರದಿಯಾಗಿದ್ದು, ಇಬ್ಬರು ಮಹಿಳೆಯರ ನರಬಲಿ ಮಾಡಲಾಗಿದೆ ಎಂದು ವರದಿಯಾಗಿದೆ. ಎರ್ನಾಕುಲಂ ಜಿಲ್ಲೆಯ ಇಬ್ಬರು ಮಹಿಳೆಯರನ್ನು ಮೂಢನಂಬಿಕೆಯ ಕಾರಣಕ್ಕಾಗಿ ತಿರುವಳ್ಳದಲ್ಲಿ ಬಲಿ ನೀಡಲಾಗಿದೆ. ಯಾವ ಕಾರಣಕ್ಕಾಗಿ ನರಬಲಿ ಮಾಡಲಾಗಿದೆ ಎನ್ನುವ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪ್ರಕರಣದಲ್ಲಿ ದಂಪತಿಗಳು ಹಾಗೂ ಏಜೆಂಟ್‌ರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಏಜೆಂಟ್‌ ಪೆರುಂಬವೂರು ಮೂಲದವನಾಗಿದ್ದು, ಕಾಲಡಿ ಹಾಗೂ ಕಡವಂತರದಿಂದ ಮಹಿಳೆಯರನ್ನು ನರಬಲಿಗಾಗಿ ಕಳ್ಳಸಾಗಣೆ ಮಾಡಿದ್ದ ಎನ್ನಲಾಗಿದೆ. ಸದ್ಯ ಈ ಮೂವರು ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.ತಿರುವಳ್ಳ ಮೂಲದ ಭಗವಾಲ್‌ ಸಿಂಗ್‌, ಆತನ ಪತ್ನಿ ಲೈಲಾ ಹಾಗೂ ಪೆರುಂಬವೂರು ಮೂಲಕ ಏಜೆಂಟ್‌ ಶಫೀ ಅಲಿಯಾಸ್‌ ರಶೀದ್‌ನನ್ನು ನರಬಲಿ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಏಜೆಂಟ್‌ನ ಸಹಾಯದಿಂದ ನರಬಲಿಗಾಗಿ ಇಬ್ಬರು ಮಹಿಳೆಯರನ್ನು ಕರೆತಂದಿದ್ದ ಭಗವಾಲ್‌ ಹಾಗೂ ಲೈಲಾ, ಅವರನ್ನು ಮೌಢ್ಯದ ಆಚರಣೆಯಲ್ಲಿ ಬಲಿ ನೀಡಿದ್ದಾರೆ ಎನ್ನಾಗಿದೆ. ಧನ ಸಂಪತ್ತು ಹಾಗೂ ನೆಮ್ಮದಿ ಬೇಕು ಎನ್ನುವ ಸಲುವಾಗಿ ದಂಪತಿಗಳು ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.

ಕಡವಂತರದಲ್ಲಿ(Kadavantara) ನಾಪತ್ತೆಯಾಗಿದ್ದ ಮಹಿಳೆಯ ತನಿಖೆಯ ದಾರಿ ತಿರುವಳ್ಳಕ್ಕೆ (Tiruvalla) ತಲುಪುತ್ತಿದ್ದಂತೆ, ಕಾಲಡಿ(Kaladi) ಮೂಲದ ಮತ್ತೊಬ್ಬ ಮಹಿಳೆಯೂ (women) ಸಾವನ್ನಪ್ಪಿರುವುದು ಪತ್ತೆಯಾಗಿದೆ.ಇಬ್ಬರೂ ಮಹಿಳೆಯರ ಶವಗಳನ್ನು ಸಮಾಧಿ ಮಾಡಲಾಗಿದೆ. ಇದರಲ್ಲಿ ಒಬ್ಬರ ಶವ ಪತ್ತೆಯಾಗಿದೆ. ಆರ್ಥಿಕ ಲಾಭ ಮತ್ತು ಸಮೃದ್ಧಿಗಾಗಿ ಕೇರಳದಲ್ಲಿ ನರಬಲಿ ಮಾಡಿದ ಘಟನೆ ಈ ಹಿಂದೆ ವರದಿಯಾಗಿಲ್ಲ. ಆದರೆ ಈ ಹಿಂದೆ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವರದಿಯಾಗಿತ್ತು. ನಾಗರಿಕ ಸಮಾಜ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕೇರಳದಲ್ಲಿ ನರಬಲಿ ವರದಿ ಆಘಾತ ತಂದಿದೆ.

ಭಗವಾಲ್‌ ಸಿಂಗ್‌ (Bhagawal singh) ಹಾಗೂ ಅವರ ಪತ್ನಿ ಲೈಲಾ (Laila) ಸೂಚನೆಯ ಅನ್ವಯ ಈ ಕೊಲೆಗಳನ್ನು ಮಾಡಲಾಗಿದೆ. ಕಾಲಡಿಯಿಂದ ಮೊದಲಿಗೆ ಯುವತಿಯೊಬ್ಬಳನ್ನು ಕರೆತರಲಾಗಿದ್ದರೆ, ಪೆರುಂಬವೂರ್‌ನಲ್ಲಿರುವ ಏಜೆಂಟ್ ನರಬಲಿ ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ಭಗವಾಲ್‌ ಹಾಗೂ ಆತನ ಪತ್ನಿ ಲೈಲಾ ನಂಬುವಂತೆ ಮಾಡಿದ್ದಾನೆ ಎಂದು ವರದಿಯಾಗಿದೆ. ಮಹಿಳೆಯರ ವಿಶ್ವಾಸವನ್ನು ಪಡೆದುಕೊಂಡು ಅವರನ್ನು ತಿರುವಳ್ಳಕ್ಕೆ ಕರೆತಂದಿದ್ದ ಎನ್ನಲಾಗಿದೆ.

ಸಂಜೆ ದೀಪ ಹಚ್ಚಿದ ಮೇಲೆ ಉಗುರು ತೆಗೀಬಾರ್ದು ಅನ್ನೋದೇಕೆ?

ಕಾಲಡಿ ಮೂಲದ ಮಹಿಳೆಯನ್ನು ಬೇರೊಂದು ಕಾರಣಕ್ಕೆ ಪತ್ತನಂತಿಟ್ಟಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇಲ್ಲಿ ಪೂಜೆ ಸಲ್ಲಿಸಿ ಬಲಿ ನೀಡಲಾಯಿತು ಎಂದು ವರದಿಯಾಗಿದೆ. ಪೆರುಂಬವೂರು ಮೂಲದ ಏಜೆಂಟ್ ಇದರ ಪ್ರಮುಖ ಯೋಜಕ ಎಂದು ವರದಿಯಾಗಿದೆ. ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ, ಮೊದಲು ತಿರುವಳ್ಳದ ಭಗವಾಲ್‌ ಸಿಂಗ್‌ನನ್ನು ಭೇಟಿಯಾಗಿದ್ದ. ಪೆರುಂಬವೂರು ಮೂಲದವರನ್ನು ಸಂತುಷ್ಟಗೊಳಿಸಿದರೆ ಜೀವನದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ಸ್ವತಃ ಅವರೇ ಫೇಸ್ ಬುಕ್ ಮೂಲಕ ಭಗವಾಲ್‌ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದಾದ ಬಳಿಕ ಮಹಿಳೆಯನ್ನು ಕಾಲಡಿಯಿಂದ ತಿರುವಳ್ಳಕ್ಕೆ ಕರೆದೊಯ್ಯಲಾಯಿತು.

ಬೆಳಗಾವಿ: ಗೋರಿ ಮೇಲೆ ಕಾಗೆಗೆ ಇಟ್ಟಿದ್ದ ಪಿಂಡ ತಿಂದ ಯುವಕರು!

ಕಾಲಡಿ ಮೂಲದವರ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಸೆಪ್ಟೆಂಬರ್ 27 ರಂದು ಪೊನ್ನುರುನ್ನಿ ಮೂಲದ ಮಹಿಳೆಯನ್ನು ಕಡವಂತರದಿಂದ ತಿರುವಳ್ಳಗೆ ಕರೆದೊಯ್ಯಲಾಗಿತ್ತು. ಈ ಮಹಿಳೆಯ ಮೊಬೈಲ್ ಟವರ್ ಲೊಕೇಶನ್ ಜಾಡು ಹಿಡಿದ ಪೊಲೀಸರಿಗೆ ಇವರು ತಿರುವಳ್ಳದಲ್ಲಿ ಕೊಲೆಯಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

 

Follow Us:
Download App:
  • android
  • ios