ಬೆಳಗಾವಿ[ಡಿ.14]: ಕಾಗೆಗೆ ಇಟ್ಟಿದ್ದ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಯುವಕರು ಸಮರ ಸಾರಿದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. 

"

ಜಲಾಲಪುರ ಗ್ರಾಮದಲ್ಲಿ ಕಳೆದ ಮೂರು  ದಿನಗಳ ಹಿಂದೆ ಸೇವಂತಿ ಕರುಣೆ ಎಂಬ ಮಹಿಳೆ ಮೃತಪಟ್ಟಿದ್ದರು. ಇಂದು  ಮೃತ ಮಹಿಳೆಯ ಗೋರಿ ಮೇಲೆ ಕಾಗೆಗೆ ಅಂತ ಪಿಂಡವನ್ನು ಇಟ್ಟಿದ್ದರು. ಕಾಗೆಗೋಸ್ಕರ ಸತತ ಒಂದು ಗಂಟೆ ಕಾದರೂ ಸಹ ಕಾಗೆ ಬಂದಿರಲಿಲ್ಲ. ಹೀಗಾಗಿ  ಕಾಗೆ ಬರದಿದ್ದನ್ನು ಗಮನಿಸಿದ ಯುವಕರು ತಾವೇ ಮುಂದಾಗಿ ಆಹಾರ ಸೇವಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದಲಿತ ಸಂಘರ್ಷ ಸಮೀತಿ ಭೀಮವಾದ ಯುವ ಸೇನೆಯ ಯುವಕರು ಗೋರಿಯ ಮೇಲಿದ್ದ ಆಹಾರ ಸೇವಿಸುವ ಮೂಲಕ ಮೂಢನಂಬಿಕೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿದ್ದಾರೆ.