Asianet Suvarna News Asianet Suvarna News

ಹಿಂದೂ ಅಲ್ಲದ ಕಲಾವಿದರಿಗೆ ನಿಷೇಧ: ದೇಗುಲದ ಕಾರ್ಯಕ್ರಮದಿಂದ ಹಿಂದೆ ಸರಿದ ಮತ್ತಿಬ್ಬರು

  • ಹಿಂದೂ ಅಲ್ಲದ ಕಾರಣಕ್ಕೆ ದೇಗುಲದಲ್ಲಿ ಪ್ರದರ್ಶನಕ್ಕೆ ನಿಷೇಧ
  • ಕೇರಳದ ಕೂಡಲ್ಮಾಣಿಕಾಯಂ ದೇವಸ್ಥಾನದ ಉತ್ಸವದಲ್ಲಿ ನಿಷೇಧ
  • ದೇಗುಲದ ಕಾರ್ಯಕ್ರಮದಿಂದ ಹಿಂದೆ ಸರಿದ ಮತ್ತಿಬ್ಬರು
Two dancers withdraw from Kerala temple festival after it rejects non-Hindu Bharatanatyam artist akb
Author
Bangalore, First Published Apr 1, 2022, 9:04 PM IST

ತಿರುವನಂತಪುರಂ: ಹಿಂದೂ ಅಲ್ಲದ ಕಾರಣ ದೇಗುಲದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅವಕಾಶವಿಲ್ಲವೆಂದು ಕೇರಳದ ಕೂಡಲ್ಮಾಣಿಕ್ಯಂ ದೇವಸ್ಥಾನ ಮತ್ತೊಬ್ಬ ಭರತನಾಟ್ಯ ಕಲಾವಿದೆಗೂ ನಿಷೇಧ ಹೇರಿದೆ. ಅನ್ಯ ಧರ್ಮದ ಭರತನಾಟ್ಯ ಕಲಾವಿದರಿಗೆ ನಿಷೇಧ ಹೇರಿದ ಬೆನ್ನಲ್ಲೇ ಇನ್ನಿಬ್ಬರು ಕಲಾವಿದರು ತಾವೂ ಕೂಡ ದೇಗುಲದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೇರಳದ ಮುಸ್ಲಿಂ ಭರತನಾಟ್ಯ ಕಲಾವಿದೆ ಮನ್ಸಿಯಾ ಅವರಿಗೆ ದೇಗುಲದ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸೂಚಿಸಿತ್ತು. ಇದಾದ ಬಳಿಕ ಇನ್ನೊರ್ವ ಭರತನಾಟ್ಯ ಕಲಾವಿದೆ ಮೂಲತಃ ಕ್ರಿಶ್ಚಿಯನ್‌ ಆಗಿರುವ ಸೌಮ್ಯ ಸುಕುಮಾರನ್ ಅವರಿಗೂ ಕೇರಳದ ಕೂಡಲ್ಮಾಣಿಕ್ಯಂ ದೇವಸ್ಥಾನ ನಿಷೇಧ ಹೇರಿದೆ. ಇದಾದ ಬಳಿಕ ಇಬ್ಬರು ಭರತನಾಟ್ಯ ಕಲಾವಿದರಾದ ಅಂಜು ಅರವಿಂದ್ (Anju Aravind) ಹಾಗೂ ದೇವಿಕಾ ಸಂಜೀವನ್‌ (Devika Sajeevan)ಅವರು ಸ್ವತಃ ತಾವೇ ಈ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದು, ತನ್ನ ಕಲೆಗೆ 'ಹಿಂದೂ' ಎಂದು ಬರೆದುಕೊಂಡು ಆ ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸಲು ಸಾಧ್ಯವಿಲ್ಲ’ ಎಂದು ಫೇಸ್‌ಬುಕ್‌ನಲ್ಲಿ ಇವರಲ್ಲೊಬ್ಬರು ಕಲಾವಿದೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಅನ್ಯಧರ್ಮದ ನೃತ್ಯಗಾರ್ತಿಗೆ ವೇದಿಕೆ ನಿರಾಕರಿಸಿದ ಕೇರಳದ ದೇಗುಲ

ಕೇರಳದ ತ್ರಿಶ್ಶೂರ್ ಜಿಲ್ಲೆಯ ಕೂಡಲ್ಮಾಣಿಕಾಯಂನಲ್ಲಿರುವ ದೇಗುಲದ 10 ದಿನಗಳ ಉತ್ಸವದಲ್ಲಿ ಸುಮಾರು 800 ಕಲಾವಿದರು ಪ್ರದರ್ಶನ ನೀಡುತ್ತಾರೆ. ಹಿಂದೂ ಎಂದು ಗುರುತಿಸಿಲ್ಪಟ್ಟವರಿಗೆ ಮಾತ್ರ  ಅವಕಾಶ ನೀಡಲಾಗುತ್ತದೆ. ಹೈದರಾಬಾದ್‌ನ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಸಂಶೋಧನಾ ವಿದ್ವಾಂಸೆಯಾಗಿರುವ ಅಂಜು ಅರವಿಂದ್ ಅವರು ತಮ್ಮ ಧರ್ಮದ ಆಧಾರದ ಮೇಲೆ ಸಹ ಕಲಾವಿದರನ್ನು ತಾರತಮ್ಯ ಮಾಡುವುದನ್ನು ಖಂಡಿಸಿದರು. ನರ್ತಕರು ಪ್ರದರ್ಶನ ನೀಡಲೂ ಆಯ್ಕೆಯಾದರೂ ಕೂಡ ಕೊನೆಯ ಘಳಿಗೆಯಲ್ಲಿ ಅವರಿಗೆ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಯಿತು ಎಂದು ಅವರು ಹೇಳಿದರು.

ಹಿಂದಿನ ವರ್ಷಗಳ ಉತ್ಸವಗಳಲ್ಲಿ ಧಾರ್ಮಿಕ ಷರತ್ತುಗಳನ್ನು ವಿಧಿಸಿರಲಿಲ್ಲ ಎಂದು ಅಂಜು ಅರವಿಂದ್ ಹೇಳಿದ್ದಾರೆ 'ಕಲಾವಿದನಾಗಿ, ಕಲೆಗೆ ಜಾತಿ ಅಥವಾ ಧರ್ಮವಿಲ್ಲ ಎಂಬ ಸಂಪೂರ್ಣ ಅರಿವಿನೊಂದಿಗೆ, ನನ್ನ ಕಲೆಗೆ 'ಹಿಂದು' ಎಂದು ಬರೆದು ಆ ವೇದಿಕೆಯಲ್ಲಿ ನೃತ್ಯ ಮಾಡಲು ಸಾಧ್ಯವಿಲ್ಲ' ಆದ್ದರಿಂದ ನಾನು ಈ ಅವಕಾಶವನ್ನು ಬಹಿಷ್ಕರಿಸುತ್ತೇನೆ ಎಂದು ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Boycott of Muslim Traders: ಪುತ್ತೂರು ಮಹಾಲಿಂಗೇಶ್ವರ ಜಾತ್ರೆಗೂ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ

40 ವರ್ಷ ವಯಸ್ಸಿನ ಭರತನಾಟ್ಯ ನರ್ತಕಿ ಸೌಮ್ಯಾ ಸುಕುಮಾರನ್ (Soumya Sukumaran) ಅವರನ್ನು ಕೂಡ ಹಿಂದೂ ಅಲ್ಲದ ಕಾರಣಕ್ಕಾಗಿ ಕೂಡಲ್ಮಾಣಿಕ್ಯಂ ದೇವಸ್ಥಾನದ ಉತ್ಸವದಲ್ಲಿ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಕೇರಳದ ಮತ್ತೊಂದು ಪ್ರಸಿದ್ಧ ದೇವಾಲಯವಾದ ತಿರುವನಂತಪುರಂನ ಶ್ರೀ ಪದ್ಮನಾಭ ಸ್ವಾಮಿ ದೇಗುಲವೂ (Sree Padmanabha Swamy Kshetram, Thiruvananthapuram) ಕೂಡ ತನ್ನನ್ನು ತಾನು ಹಿಂದೂ ಎಂದು ಪ್ರಮಾಣೀಕರಿಸಿ  ಅಥವಾ ಏಪ್ರಿಲ್ 13 ರಂದು ನಿಗದಿಯಾಗಿದ್ದ ತನ್ನ ಪ್ರದರ್ಶನದಿಂದ ದೂರವಿರಿ ಎಂದು ಹೇಳಿದೆ ಎಂದು ಅವರು ದೂರಿದ್ದಾರೆ. ತಾನು ಹಿಂದೂ ಎಂದು ಪ್ರಮಾಣೀಕರಿಸಲು ಸಾಧ್ಯವಿಲ್ಲದ ಕಾರಣ ದೇವಸ್ಥಾನದಲ್ಲಿ ಪ್ರದರ್ಶನ ನೀಡುವುದಿಲ್ಲ ಎಂದು ಸುಕುಮಾರನ್ ಹೇಳಿದ್ದಾರೆ. ತಾನು ಕ್ರಿಶ್ಚಿಯನ್ (Christian) ಎಂದು ಅವರು ಹೇಳಿದ್ದಾರೆ. 

ನಾನು ಈ ಹಿಂದೆ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಪ್ರದರ್ಶನ ನೀಡಿದ್ದೇನೆ. ಆಗ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಈಗ ಕೂಡಲ್ಮಾಣಿಕ್ಯಂ ದೇವಸ್ಥಾನದ ಅಧಿಕಾರಿಗಳು ಹಿಂದೂ ಅಲ್ಲ ಎಂಬ ಕಾರಣಕ್ಕೆ ನನ್ನನ್ನು ತಡೆದ ನಂತರ, ಪದ್ಮನಾಭ ಸ್ವಾಮಿ ದೇಗುಲವೂ ಕೂಡ ನನ್ನ ನಿಗದಿತ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ನನ್ನನ್ನು ಕೇಳಿದೆ ಎಂದು ಅವರು ಹೇಳಿದ್ದಾರೆ. ಸುಕುಮಾರನ್ ಅವರು ತಿರುವನಂತಪುರದಲ್ಲಿ ಕಲಾಂಜಲಿ ಫಾರ್ ಆರ್ಟ್ಸ್ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ಆದಾಗ್ಯೂ, ಇವರಿಗೆ ಬಹಿಷ್ಕಾರ ಇದೇ ಮೊದಲಲ್ಲ. ರೋಮನ್ ಕ್ಯಾಥೋಲಿಕ್ ಪಂಗಡವಾದ ಮಲಂಕರ ಆರ್ಥೊಡಾಕ್ಸ್ ಚರ್ಚ್‌ನ ಧಾರ್ಮಿಕ ಸಂಸ್ಕಾರಗಳನ್ನು ಸ್ವೀಕರಿಸಲು ಆಕೆಗೆ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲು ಕೂಡಲ್ಮಾಣಿಕಾಯಂ ದೇವಸ್ಥಾನವೂ ತನಗೆ ಹಿಂದೂ ಅಲ್ಲದ ಕಾರಣಕ್ಕೆ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿದೆ ಎಂದು ಮುಸಲ್ಮಾನನಾಗಿ ಜನಿಸಿದ ಮಾನ್ಸಿಯಾ ಆರೋಪಿಸಿದ್ದರು. 
 

Follow Us:
Download App:
  • android
  • ios