Asianet Suvarna News Asianet Suvarna News

ಅನ್ಯಧರ್ಮದ ನೃತ್ಯಗಾರ್ತಿಗೆ ವೇದಿಕೆ ನಿರಾಕರಿಸಿದ ಕೇರಳದ ದೇಗುಲ

  • ದೇಗುಲದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನ್ಯಧರ್ಮಿಯರಿಗೆ ಅವಕಾಶ ನಿರಾಕರಣೆ
  • ನೃತ್ಯಗಾರ್ತಿ ಮನ್ಸಿಯಾಗೆ ನಿರಾಕರಿಸಿದ ಕೇರಳದ ದೇಗುಲ
  • ಭರತನಾಟ್ಯದಲ್ಲಿ ಸಂಶೋಧನಾ ವಿದ್ವಾಂಸೆಯಾಗಿರುವ ಮನ್ಸಿಯಾ
     
Kerala temple denies non Hindu classical dancer stage akb
Author
Bangalore, First Published Mar 29, 2022, 2:02 PM IST

ಕೊಚ್ಚಿ: ಕೇರಳದ ದೇವಸ್ಥಾನವೊಂದು ಹಿಂದೂ ಸಮುದಾಯಕ್ಕೆ ಸೇರದ ನೃತ್ಯಗಾರ್ತಿಗೆ ವೇದಿಕೆ ನಿರಾಕರಿಸಿದೆ. ಆಕೆ ಶಾಸ್ತ್ರೀಯ ನೃತ್ಯಗಾರ್ತಿಯಾಗುವ ಕನಸನ್ನು ನನಸಾಗಿಸಿಕೊಂಡಿದ್ದಕ್ಕಾಗಿ ಸಮುದಾಯವೊಂದು ಆಕೆಯನ್ನು ಬಹಿಷ್ಕರಿಸಿತ್ತು. ಇತ್ತ ಇನ್ನೊಂದು ಧರ್ಮ, ಆ ಧರ್ಮದ ಸದಸ್ಯರಾಗಿಲ್ಲ ಎಂಬ ಕಾರಣಕ್ಕಾಗಿ ಆಕೆಗೆ ವೇದಿಕೆಯನ್ನು ನಿರಾಕರಿಸಿದೆ. 

ಭರತನಾಟ್ಯದಲ್ಲಿ ಸಂಶೋಧನಾ ವಿದ್ವಾಂಸರಾದ 27 ವರ್ಷದ ಮಾನ್ಸಿಯಾ ವಿ ಪಿ ಅವರೇ ಹೀಗೆ ಧಾರ್ಮಿಕ ತಾರತಮ್ಯ ನೀತಿಗೆ ಬಲಿಯಾದವರು. ಮಲಪ್ಪುರಂನ ಸಾಂಪ್ರದಾಯಿಕ ಮುಸ್ಲಿಂ (Muslim) ಕುಟುಂಬದಲ್ಲಿ ಮಾನ್ಸಿಯಾ (Mansia) ಜನಿಸಿದ್ದರು. ಮಕ್ಕಳು ನೃತ್ಯಗಾರ್ತಿಯರು ಎಂಬ ಕಾರಣಕ್ಕೆ ಮನ್ಸಿಯಾ ಅವರ ತಾಯಿ ಅಮಿನಾ ಅವರನ್ನು ಸಮಾಧಿ ಮಾಡಲು ಮುಸ್ಲಿ ಧರ್ಮಗುರುಗಳು ನಿರಾಕರಿಸಿದ್ದರಿಂದ ಅವರು ತಮ್ಮ ಧರ್ಮವನ್ನು ತ್ಯಜಿಸಬೇಕಾಯಿತು.

Muslim Traders Boycott ಕೊಲ್ಲೂರು ಮೂಕಾಂಬಿಕಾ ಉತ್ಸವದಲ್ಲೂ ಮುಸ್ಲಿಂಮರಿಗೆ ನಿರ್ಬಂಧ

ಈ ನಡುವೆ ಭಾನುವಾರ(ಮಾ.27) ದಂದು ಇರಿಂಜಲಕುಡದ (Irinjalakuda) ಕೂಡಲ್ಮಾಣಿಕ್ಯಂ (Koodalmanikyam) ದೇವಸ್ಥಾನದ ಅಧಿಕಾರಿಯೊಬ್ಬರು ಅವರು ಹಿಂದೂ ಅಲ್ಲದ ಕಾರಣ ದೇವಸ್ಥಾನವು ಏಪ್ರಿಲ್ 15 ರಿಂದ 25 ರವರೆಗೆ ಆಯೋಜಿಸಿರುವ ನೃತ್ಯ ಮತ್ತು ಸಂಗೀತದ ರಾಷ್ಟ್ರೀಯ ಉತ್ಸವದಲ್ಲಿ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಮಾನ್ಸಿಯಾಗೆ ಮತ್ತೊಂದು ಆಘಾತ ಎದುರಾಗಿದೆ.

ನನಗೆ ದೇವಸ್ಥಾನದಲ್ಲಿ ನಡೆಯುವ ಹಬ್ಬದ ಬಗ್ಗೆ ಇಮೇಲ್ ಮೂಲಕ ತಿಳಿಸಲಾಯಿತು ಮತ್ತು ನಾನು ವಿವರವಾದ ಬಯೋಡೇಟಾದೊಂದಿಗೆ ಅರ್ಜಿ ಸಲ್ಲಿಸಿದೆ. ದೇವಸ್ಥಾನದ ಅಧಿಕಾರಿಯೊಬ್ಬರು ನನ್ನ ಭಾಗವಹಿಸುವಿಕೆಯನ್ನು ಖಚಿತಪಡಿಸಲು ನನಗೆ ಫೋನ್‌ ಕರೆ ಮಾಡಿದ್ದರು. ಏಪ್ರಿಲ್ 21 ರಂದು  ಸಂಜೆ 4 ರಿಂದ 5 ರವರೆಗೆ ನಡೆಯಲಿದ್ದ ನನ್ನ ಕಾರ್ಯಕ್ರಮವನ್ನು ನಿಗದಿಪಡಿಸುವ ಮೊದಲು ಯಾರೂ ನನ್ನ ಧರ್ಮದ ಬಗ್ಗೆ ಕೇಳಲಿಲ್ಲ ಎಂದು ಅವರು ಹೇಳಿದರು.

Boycott of Muslim Traders: ಪುತ್ತೂರು ಮಹಾಲಿಂಗೇಶ್ವರ ಜಾತ್ರೆಗೂ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ

ಈ ಮಧ್ಯೆ ದೇವಸ್ಥಾನದ ಅಧಿಕಾರಿಯೊಬ್ಬರು ಭಾನುವಾರ ನನಗೆ ಕರೆ ಮಾಡಿ, ತಾವು ಹಿಂದೂ ಧರ್ಮವನ್ನು ಅನುಸರಿಸದ ಕಾರಣ ದೇವಸ್ಥಾನದಲ್ಲಿ ತಾವು ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಮಾನ್ಸಿಯಾಗೆ ಹೇಳಿದ್ದಾರೆ. 'ನನಗೆ ಕರೆ ಮಾಡಿದ ವ್ಯಕ್ತಿ, ದೇವಸ್ಥಾನವು ಹಿಂದೂಯೇತರರಿಗೆ ನೃತ್ಯ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಹಿಂದೂವನ್ನು (ಶ್ಯಾಮ್ ಕಲ್ಯಾಣ್) ಮದುವೆಯಾದ ನಂತರ ನಾನು ಏಕೆ ಧರ್ಮವನ್ನು ಬದಲಾಯಿಸಲಿಲ್ಲ ಎಂದು ಅವರು ಕೇಳಿದರು ಎಂದು ಮಾನ್ಸಿಯಾ ಹೇಳಿದ್ದಾರೆ.

ನನ್ನ ಗಂಡನ ಕುಟುಂಬದ ಸದಸ್ಯರು ಹಿಂದೂಗಳು ಆದರೆ ಅವರು ಎಂದಿಗೂ ತಮ್ಮ ಧರ್ಮವನ್ನು ನನ್ನ ಮೇಲೆ ಹೇರಿಲ್ಲ. ನಾನು ಹಿಂದುವೂ ಅಲ್ಲ, ಮುಸಲ್ಮಾನಳೂ ಅಲ್ಲ. ಈ ಸಮಾಜದಲ್ಲಿ ನಾಸ್ತಿಕನಿಗೆ ಜಾಗವಿಲ್ಲವೇ ಎಂದು ಆಕೆ ಮಾನ್ಸಿಯಾ ಕೇಳಿದ್ದಾರೆ. ದೇವಸ್ಥಾನದ ಆವರಣದಲ್ಲಿ ಹಿಂದೂಯೇತರರನ್ನು ಅನುಮತಿಸುವುದಿಲ್ಲ ಎಂಬ ದೇವಸ್ಥಾನದ ಸಂಪ್ರದಾಯವನ್ನು ಮಾತ್ರ ಅನುಸರಿಸುತ್ತಿರುವುದಾಗಿ ಕೂಡಲಮಾಣಿಕ್ಯಂ ದೇವಸ್ವಂ ಅಧ್ಯಕ್ಷ ಪ್ರದೀಪ್ ಮೆನನ್ (Pradeep Menon) ಅವರು ಹೇಳಿದ್ದಾರೆ.

ಹಿಂದೂ ಕಲಾವಿದರಿಂದ ಅರ್ಜಿ ಆಹ್ವಾನಿಸಿದ್ದೆವು. ಅರ್ಜಿಯಲ್ಲಿ ಮನ್ಸಿಯಾ ತನ್ನ ಧರ್ಮವನ್ನು ನಮೂದಿಸಿಲ್ಲ, ಆದರೆ ನಾವು ಅವಳನ್ನು ಪ್ರದರ್ಶಕರ ಪಟ್ಟಿಯಲ್ಲಿ ಸೇರಿಸಿದ್ದೇವೆ. ಒಪ್ಪಂದಕ್ಕೆ ಸಹಿ ಮಾಡುವಾಗ, ಅವಳು ತನ್ನ ಧರ್ಮಕ್ಕೆ ಸಂಬಂಧಿಸಿದ ಷರತ್ತಿಗೆ ಉತ್ತರಿಸಲಿಲ್ಲ. ಅವಳು ಹಿಂದೂವೇ ಎಂದು ನಾವು ಕೇಳಿದ್ದೇವೆ, ಆದರೆ ಮಾನ್ಸಿಯಾ ಅವರು ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ ಎಂದು ಹೇಳಿದರು. ಆಕೆ ಹಿಂದೂವನ್ನು ಮದುವೆಯಾಗಿರುವ ಕಾರಣ, ಮದುವೆಯ ನಂತರ ಆಕೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರಾ ಎಂದು ನಾವು ಕೇಳಿದ್ದೇವೆ ಮತ್ತು ಆಕೆಯ ಪ್ರತಿಕ್ರಿಯೆಯು ನಕಾರಾತ್ಮಕವಾಗಿದೆ ಆಕೆಗೆ ಅವಕಾಶ ನಿರಾಕರಿಸಿದ್ದಕ್ಕೆ ವಿಷಾದಿಸುತ್ತೇವೆ ಆದರೆ ನಾವು ದೇವಾಲಯದ ಅನಾದಿ ಕಾಲದ ಸಂಪ್ರದಾಯವನ್ನು ಅನುಸರಿಸಬೇಕು ಎಂದು ಮೆನನ್‌ ಹೇಳಿದ್ದಾರೆ.

ಮಾನ್ಸಿಯಾ ಅವರ ತಾಯಿ ಅಮೀನಾ ಅವರು ಶಾಸ್ತ್ರೀಯ ಕಲಾ ಪ್ರಕಾರಗಳ ಪ್ರೇಮಿಯಾಗಿದ್ದರು ಮತ್ತು ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ಶಾಸ್ತ್ರೀಯ ನೃತ್ಯದ ತರಬೇತಿ ಪಡೆಯಲು ಪ್ರೋತ್ಸಾಹಿಸಿದ್ದರು. ಮನ್ಸಿಯಾ ಅವರ ಸಹೋದರಿ ರೂಬಿಯಾ ಕೂಡ ಭರತನಾಟ್ಯ, ಮೋಹಿನಿಯಾಟ್ಟಂ, ಕಥಕ್ಕಳಿ ಮತ್ತು ಕೇರಳ ನಾದನಂ ಕಲಾ ಪ್ರಕಾರಗಳ ತರಬೇತಿ ಪಡೆದಿದ್ದು, ಈಗಾಗಲೇ ಹಲವು ವೇದಿಕೆಗಳಲ್ಲಿ ಮಿಂಚಿದ್ದಾರೆ.

ಮನ್ಸಿಯಾ ತಾಯಿ ಅಮಿನಾ (Amina) ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾಗ, ಆಕೆಯ ಚಿಕಿತ್ಸೆಗಾಗಿ ವಿದೇಶದಿಂದ ಹಣಕಾಸಿನ ನೆರವು ನೀಡುವಂತೆ ಮಹಲ್ ಸಮಿತಿಯ ಶಿಫಾರಸನ್ನು ಧಾರ್ಮಿಕ ಮೌಲ್ವಿಗಳು ತಿರಸ್ಕರಿಸಿದರು. ಅಮಿನಾ ಅವರಿಗೆ ಸ್ಥಳೀಯ ಸ್ಮಶಾನದಲ್ಲಿಯೂ ಜಾಗವನ್ನು ನಿರಾಕರಿಸಲಾಗಿತ್ತು. ನಂತರ ಅವರ ತವರೂರಿನಲ್ಲಿ ಅವರ ಸಮಾಧಿ ಮಾಡಲಾಯಿತು. ಆದರೆ ಮಾನ್ಸಿಯಾಳ ತಂದೆ ಅಲವಿಕುಟ್ಟಿ (Alavikutty)ಇವೆಲ್ಲದರ ವಿರುದ್ಧ ಧೃಡವಾಗಿ ನಿಂತಿದ್ದರು ಮತ್ತು ತಮ್ಮ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಿದ್ದರು.

ಕಲಾಂಜಲಿ ಫೌಂಡೇಶನ್ ಆಫ್ ಪರ್ಫಾರ್ಮರ್ಸ್ ಆರ್ಟ್ಸ್ ಸಂಸ್ಥಾಪಕ ನಿರ್ದೇಶಕಿ ಸೌಮ್ಯಾ ಸುಕುಮಾರನ್ ಅವರಿಗೂ ಕೂಡಲಮಾಣಿಕ್ಯಂ ದೇವಸ್ಥಾನದ ಅಧಿಕಾರಿಗಳು ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿದ್ದಾರೆ ಎಂದು ಸೌಮ್ಯ ಆರೋಪಿಸಿದ್ದಾರೆ. ಈ ಸೌಮ್ಯ ಕೂಡ ಹಿಂದೂವಲ್ಲ.
 

Follow Us:
Download App:
  • android
  • ios