ಟಿಆರ್‌ಎಸ್ ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಪ್ರಯತ್ನಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿ.ಎಲ್.ಸಂತೋಷ್‌ಗೆ ಹೊಸ ನೋಟಿಸ್ ಜಾರಿ ಮಾಡುವಂತೆ ತೆಲಂಗಾಣ ಹೈಕೋರ್ಟ್ (Telangana High Court) ವಿಶೇಷ ತನಿಖಾ ತಂಡಕ್ಕೆ ಬುಧವಾರ ಸೂಚನೆ ನೀಡಿದೆ.
ಹೈದರಾಬಾದ್: ಟಿಆರ್‌ಎಸ್ ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಪ್ರಯತ್ನಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿ.ಎಲ್.ಸಂತೋಷ್‌ಗೆ ಹೊಸ ನೋಟಿಸ್ ಜಾರಿ ಮಾಡುವಂತೆ ತೆಲಂಗಾಣ ಹೈಕೋರ್ಟ್ (Telangana High Court) ವಿಶೇಷ ತನಿಖಾ ತಂಡಕ್ಕೆ ಬುಧವಾರ ಸೂಚನೆ ನೀಡಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂತೋಷ್ ಸೇರಿದಂತೆ ಇತರರಿಗೆ ನ.21ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ನೋಟಿಸ್ ನೀಡಿದ್ದರೂ ಸಹ ಸಂತೋಷ್ ವಿಚಾರಣೆಗೆ ಹಾಜರಾಗಿಲ್ಲ. ಅಲ್ಲದೇ ಪ್ರವಾಸಗಳು ನಿಗದಿಯಾಗಿರುವ ಕಾರಣ ಸಮಯಾವಕಾಶ ಕೋರಿದ್ದಾರೆ. ಆದರೆ ಯಾವಾಗ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅವರು ಹೇಳಿಲ್ಲ ಎಂದು ಎಸ್‌ಐಟಿ ಪರ ವಕೀಲರು ಹೈಕೋರ್ಟ್‌ಗೆ (High Court) ಮಾಹಿತಿ ನೀಡಿದರು. ಆಗ ಪ್ರತಿಕ್ರಿಯಿಸಿದ ಕೋರ್ಟ್, ಸಂತೋಷ್‌ಗೆ ಮತ್ತೊಮ್ಮೆ ನೋಟಿಸ್ ಕೊಟ್ಟು ಅಗತ್ಯ ಸಮಯಾವಕಾಶ ನೀಡಿ ಎಂದು ಸೂಚಿಸಿ ನ.29ಕ್ಕೆ ವಿಚಾರಣೆ ಮುಂದೂಡಿತು.
Telangana ಶಾಸಕರ ಖರೀದಿ ಯತ್ನ ಆರೋಪ: ಅಮಿತ್ ಶಾ ಬಂಧಿಸಿ ಎಂದ Manish Sisodia
ಟಿಆರ್‌ಎಸ್‌ಗೆ ತಿರುಗುಬಾಣವಾದ ಅಪರೇಷನ್ ಕಮಲ ಆರೋಪ: ಮೂವರ ಬಿಡುಗಡೆಗೆ ಕೋರ್ಟ್ ಸೂಚನೆ
ಕೆಸಿಆರ್ ಪಕ್ಷದ ನಾಲ್ವರು ಶಾಸಕರಿಗೆ BJPಯಿಂದ ತಲಾ 50 ಕೋಟಿ ಆಫರ್..?
ಮೋದಿ ವಿರುದ್ಧ ರಣಕಹಳೆ ಊದಿದ TRSಗೆ ಹಿನ್ನಡೆ, ಪ್ರಮುಖ ನಾಯಕ ರಾಜೀನಾಮೆ!
