ಟಿಆರ್‌ಎಸ್‌ಗೆ ತಿರುಗುಬಾಣವಾದ ಅಪರೇಷನ್ ಕಮಲ ಆರೋಪ: ಮೂವರ ಬಿಡುಗಡೆಗೆ ಕೋರ್ಟ್ ಸೂಚನೆ

ತೆಲಂಗಾಣದಲ್ಲಿ ಬಿಜೆಪಿ ‘ಆಪರೇಶನ್‌ ಕಮಲ’ ನಡೆಸುತ್ತಿದೆ ಎಂದು ಆರೋಪಿಸಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌)ಗೆ ಹಿನ್ನಡೆ ಆಗಿದೆ. 

setback to TRs, Court asked to release of Operation Kamala accused in telangana akb

ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ‘ಆಪರೇಶನ್‌ ಕಮಲ’ ನಡೆಸುತ್ತಿದೆ ಎಂದು ಆರೋಪಿಸಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌)ಗೆ ಹಿನ್ನಡೆ ಆಗಿದೆ.  ಟಿಆರ್‌ಎಸ್‌ ದೂರಿನ ಮೇರೆಗೆ ಬಂಧಿತರಾಗಿದ್ದ ಬಿಜೆಪಿ ಏಜೆಂಟರು ಎನ್ನಲಾದ ಮೂವರನ್ನು ಪೊಲೀಸರ ವಶಕ್ಕೆ ಅಥವಾ ನ್ಯಾಯಾಂಗ ವಶಕ್ಕೆ ಒಪ್ಪಿಸಲು ಸ್ಥಳೀಯ ನ್ಯಾಯಾಲಯ ನಿರಾಕರಿಸಿದೆ. ಇದರ ಬದಲು ನೋಟಿಸ್‌ ಜಾರಿ ಮಾಡಿ ಬಿಡುಗಡೆ ಮಾಡಲು ಸೂಚಿಸಿದೆ.

ಗುರುವಾರ ತಡರಾತ್ರಿ ಮೂವರನ್ನೂ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು, ‘ಬಂಧನಕ್ಕೆ ಮುನ್ನ ನೋಟಿಸ್‌ ನೀಡದೇ ನಿಯಮ ಪಾಲಿಸಿಲ್ಲ’ ಎಂದು ಸೈಬರಾಬಾದ್‌ ಪೊಲೀಸರಿಗೆ (Cyberabad police) ಚಾಟಿ ಬೀಸಿತು. ಬಂಧಿತರಿಗೆ ನೋಟಿಸ್‌ ನೀಡಬೇಕು ಹಾಗೂ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತು.

ರಾಮಚಂದ್ರ ಭಾರತಿ (Ramachandra Bharti), ನಂದಕುಮಾರ (Nandakumar), ಸಿಂಹಯ್ಯಾಜಿ (Sinhayaji)ಅವರನ್ನು ತೆಲಂಗಾಣ ಪೊಲೀಸರು, ‘ಆಪರೇಶನ್‌ ಕಮಲಕ್ಕೆ ಯತ್ನಿಸಿದ ಬಿಜೆಪಿ ಏಜೆಂಟರು’ ಎಂಬ ದೂರಿನ ಮೇರೆಗೆ ಬಂಧಿಸಿದ್ದರು. ಈ ಮೂವರೂ ಟಿಆರ್‌ಎಸ್‌ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿಗೆ 100 ಕೋಟಿ ಸೇರಿ ನಾಲ್ವರು ಟಿಆರ್‌ಎಸ್‌ (TRS MLAs) ಶಾಸಕರಿಗೆ ಬಿಜೆಪಿ ಸೇರಲು 250 ಕೋಟಿ ರು. ಆಮಿಷ ಒಡ್ಡಿದ್ದರು ಎಂದು ದೂರಲಾಗಿತ್ತು.

ಮೋದಿ ವಿರುದ್ಧ ರಣಕಹಳೆ ಊದಿದ TRSಗೆ ಹಿನ್ನಡೆ, ಪ್ರಮುಖ ನಾಯಕ ರಾಜೀನಾಮೆ!

ಕೆಸಿಆರ್‌ ಪಕ್ಷದ ನಾಲ್ವರು ಶಾಸಕರಿಗೆ BJPಯಿಂದ ತಲಾ 50 ಕೋಟಿ ಆಫರ್‌..?

Latest Videos
Follow Us:
Download App:
  • android
  • ios