ಕೆಸಿಆರ್ ಪಕ್ಷದ ನಾಲ್ವರು ಶಾಸಕರಿಗೆ BJPಯಿಂದ ತಲಾ 50 ಕೋಟಿ ಆಫರ್..?
ಕುದುರೆ ವ್ಯಾಪಾರ ಆರೋಪ ತಳ್ಳಿಹಾಕಿದ ತೆಲಂಗಾಣ ಬಿಜೆಪಿ ನಾಯಕರಾದ ಡಿ.ಕೆ ಅರುಣಾ ಮತ್ತು ನಿಜಾಮಾಬಾದ್‌ನ ಬಿಜೆಪಿ ಸಂಸದ ಡಿ. ಅರವಿಂದ್, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಪಕ್ಷವು ಮುನುಗೋಡೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಗಮನವನ್ನು ಬೇರೆಡೆ ಸೆಳೆಯಲು "ಕುದುರೆ ವ್ಯಾಪಾರ" ನಾಟಕವನ್ನು ಆಯೋಜಿಸಿದೆ ಎಂದು ಹೇಳಿದ್ದಾರೆ.
ತೆಲಂಗಾಣದ (Telangana) ಆಡಳಿತ ಪಕ್ಷದ ಶಾಸಕರನ್ನು (Ruling Party MLAs) ಬಿಜೆಪಿಗೆ (BJP) ಸೇರಿಸಿಕೊಳ್ಳಲು ಕುದುರೆ ವ್ಯಾಪಾರ (Horse Trading) ನಡೆಸಲು ಯತ್ನಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಫಾರ್ಮ್‌ಹೌಸ್‌ನಿಂದ (Farm House) ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು (Telangana Police) ತಿಳಿಸಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರು ಈ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಸ್ಟೀಫನ್ ರವೀಂದ್ರ ಮಾಧ್ಯಮಗಳಿಗೆ ಹೇಳಿದ್ದಾರೆ. ₹ 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಡೀಲ್‌ಗಳು ನಡೆದಿರಬಹುದು ಎಂದು ಮೂಲಗಳು ತಿಳಿಸಿವೆ. ಪ್ರಮುಖ ವ್ಯಕ್ತಿಗೆ ₹ 100 ಕೋಟಿ, ಜೊತೆಗೆ ಪ್ರತಿ ಶಾಸಕರಿಗೆ ₹ 50 ಕೋಟಿ ನೀಡುವುದಾಗಿ ಹೇಳಿದ್ದರು ಎಂದೂ ಪೊಲೀಸರು ಆರೋಪಿಸಿದ್ದಾರೆ.
ಅಜೀಜ್ ನಗರದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಬುಧವಾರ ಸಂಜೆ ಈ ಬಗ್ಗೆ ಶೋಧ ನಡೆಸಲಾಯಿತು ಎಂದೂ ಪೊಲೀಸರು ತಿಳಿಸಿದ್ದಾರೆ. "ಪಕ್ಷ ಬದಲಾಯಿಸಲು ಆಮಿಷ ಮತ್ತು ಲಂಚ ನೀಡಲಾಗುತ್ತಿದೆ" ಎಂದು ಶಾಸಕರು ಪೊಲೀಸರಿಗೆ ಕರೆ ಮಾಡಿದ್ದರು ಎಂದು ರವೀಂದ್ರ ಹೇಳಿದ್ದಾರೆ. "ಪಕ್ಷ ಬದಲಾಯಿಸಲು ಅವರಿಗೆ ದೊಡ್ಡ ಮೊತ್ತದ ಹಣ ಮತ್ತು ಹುದ್ದೆಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು" ಎಂದೂ ಪೊಲೀಸರು ಹೇಳಿಕೊಂಡಿದ್ದಾರೆ.
ಇದನ್ನು ಓದಿ: Punjab AAP ಶಾಸಕರ ಖರೀದಿಗೆ ಆಪರೇಷನ್ ಕಮಲ , ಬಿಜೆಪಿ ವಿರುದ್ಧ ಕೇಜ್ರಿವಾಲ್ ಕಿಡಿ!
ಇನ್ನು, ಮೂವರು ಬಂಧಿತ ವ್ಯಕ್ತಿಗಳು ನಕಲಿ ಗುರುತಿನ ಮೇಲೆ ಹೈದರಾಬಾದ್‌ಗೆ ಬಂದಿದ್ದಾರೆ ಎಂದೂ ಪೊಲೀಸರು ಖಚಿತಪಡಿಸಿದ್ದಾರೆ. ಬಂಧಿತರನ್ನು ಹರ್ಯಾಣದ ಫರಿದಾಬಾದ್‌ನ ಅರ್ಚಕ ಸತೀಶ್ ಶರ್ಮಾ ಅಲಿಯಾಸ್ ರಾಮಚಂದ್ರ ಭಾರತಿ, ತಿರುಪತಿಯ ಧರ್ಮದರ್ಶಿ ಡಿ. ಸಿಂಹಯಾಜಿ ಮತ್ತು ಉದ್ಯಮಿ ನಂದಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರ ಫಾರ್ಮ್‌ಹೌಸ್‌ನಲ್ಲಿ ಈ ಡೀಲ್ ನಡೆದಿದ್ದು, ಅವರೇ ಮೊದಲು ಪೊಲೀಸರಿಗೆ ದೂರು ನೀಡಿದ್ದು ಎಂದು ಹೇಳಲಾಗಿದೆ. ನಂತರ, ಆ ನಾಲ್ವರು ಶಾಸಕರನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಕರೆದೊಯ್ಯಲಾಗಿದೆ.
2019 ರಿಂದ, ಬಿಜೆಪಿಯು ತೆಲಂಗಾಣದಲ್ಲಿ "ಆಪರೇಷನ್ ಕಮಲ" ನಡೆಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕೇಸರಿ ಪಕ್ಷವು ದಕ್ಷಿಣದ ರಾಜಯದಲ್ಲಿ ಬಲ ಹೊಂದಿಲ್ಲ. ಇನ್ನು,
ಈ ವರ್ಷದ ಆರಂಭದಲ್ಲಿ ಏಕನಾಥ್ ಶಿಂಧೆಯವರ ಬಿಜೆಪಿ ಬೆಂಬಲಿತ ಬಂಡಾಯವು ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ ಮಹಾರಾಷ್ಟ್ರದ ಬೆಳವಣಿಗೆಗಳ ಬಳಿಕ ಆಪರೇಷನ್ ಕಮಲದ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದೆ. ಇತ್ತೀಚೆಗೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸಹ ದೆಹಲಿ ಮತ್ತು ಪಂಜಾಬ್‌ನಲ್ಲಿ ಬಿಜೆಪಿ ತನ್ನ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಮೂವರು ಕಾಂಗ್ರೆಸ್ ಶಾಸಕರಿದ್ದ ಕಾರಲ್ಲಿ ಪತ್ತೆಯಾಯ್ತು ಕಂತೆ ಕಂತೆ ನೋಟು..!
ಈ ಮಧ್ಯೆ, ಟಿಆರ್‌ಎಸ್‌ನ ಸುಮಾರು 18 ಶಾಸಕರು ಶೀಘ್ರದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂದು ಆಗಸ್ಟ್‌ನಲ್ಲಿ ಬಿಜೆಪಿ ನಾಯಕರೊಬ್ಬರು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿತ್ತು.
ಇದು ಆಡಳಿತ ಪಕ್ಷದ ಡ್ರಾಮಾ ಎಂದ ಬಿಜೆಪಿ
ಇನ್ನು, ಕುದುರೆ ವ್ಯಾಪಾರ ಆರೋಪ ತಳ್ಳಿಹಾಕಿದ ತೆಲಂಗಾಣ ಬಿಜೆಪಿ ನಾಯಕರಾದ ಡಿ.ಕೆ ಅರುಣಾ ಮತ್ತು ನಿಜಾಮಾಬಾದ್‌ನ ಬಿಜೆಪಿ ಸಂಸದ ಡಿ. ಅರವಿಂದ್, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಪಕ್ಷವು ಮುನುಗೋಡೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಗಮನವನ್ನು ಬೇರೆಡೆ ಸೆಳೆಯಲು "ಕುದುರೆ ವ್ಯಾಪಾರ" ನಾಟಕವನ್ನು ಆಯೋಜಿಸಿದೆ ಎಂದು ಹೇಳಿದ್ದಾರೆ.
"ಇದೊಂದು ನಾಟಕ. ಮುನುಗೋಡಿನಲ್ಲಿ ಟಿಆರ್‌ಎಸ್ ಸೋಲುತ್ತಿದೆ ಎಂದು ಕೆಸಿಆರ್ ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಈ ನಾಟಕವನ್ನು ರೂಪಿಸಿದ್ದಾರೆ" ಎಂದು ಬಿಜೆಪಿ ಮುಖಂಡ ವಿವೇಕ್ ವೆಂಕಟಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಕಳೆದ 6 ವರ್ಷದಲ್ಲಿ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಆಪರೇಷನ್ ಕಮಲ, 4 ಬಾರಿ ಸಕ್ಸಸ್!