Asianet Suvarna News Asianet Suvarna News

Telangana ಶಾಸಕರ ಖರೀದಿ ಯತ್ನ ಆರೋಪ: ಅಮಿತ್ ಶಾ ಬಂಧಿಸಿ ಎಂದ Manish Sisodia

ಈ ಹಿಂದೆ ದೆಹಲಿ, ಪಂಜಾಬ್ ಮತ್ತು ಇತರ 8 ರಾಜ್ಯಗಳಲ್ಲಿ ಬಿಜೆಪಿಯು ಆಪರೇಷನ್‌ ಕಮಲದ ಪ್ರಯತ್ನಗಳನ್ನು ಮಾಡಿತ್ತು ಎಂದೂ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಹೇಳಿದ್ದು, ಬಿಜೆಪಿ ಆಡುತ್ತಿರುವ ಡರ್ಟಿ ಗೇಮ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ, ಈ ಬಾರಿ ತೆಲಂಗಾಣದಲ್ಲಿ ಎಂದು ಮನೀಶ್‌ ಸಿಸೋಡಿಯಾ ಹೇಳಿಕೊಂಡಿದ್ದಾರೆ.

arrest amit shah aaps manish sisodia on telangana mla bribing charges ash
Author
First Published Oct 29, 2022, 8:24 PM IST

ತೆಲಂಗಾಣದ (Telangana) ಆಡಳಿತ ಪಕ್ಷದ ಶಾಸಕರನ್ನು (Ruling Party MLAs) ಖರೀದಿಸಲು ಬಿಜೆಪಿ (BJP)ನಾಯಕತ್ವ ಪ್ರಯತ್ನ ನಡೆಸಿದೆ ಎಂಬ ಆರೋಪದ ಬಗ್ಗೆ ಇಂದು ವಾಗ್ದಾಳಿ ನಡೆಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) , ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಈ ಆರೋಪದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಹಿಂದೆ ದೆಹಲಿ (Dehli) , ಪಂಜಾಬ್ (Punjab) ಮತ್ತು ಇತರ 8 ರಾಜ್ಯಗಳಲ್ಲಿ ಬಿಜೆಪಿಯು ಆಪರೇಷನ್‌ ಕಮಲದ (Operation Lotus) ಪ್ರಯತ್ನಗಳನ್ನು ಮಾಡಿತ್ತು ಎಂದೂ ಆಮ್ ಆದ್ಮಿ ಪಕ್ಷದ (Aam Aadmi Party) (ಎಎಪಿ) (AAP) ನಾಯಕ ಹೇಳಿದ್ದು, ಬಿಜೆಪಿ ಆಡುತ್ತಿರುವ ಡರ್ಟಿ ಗೇಮ್ (Dirty Game) ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ, ಈ ಬಾರಿ ತೆಲಂಗಾಣದಲ್ಲಿ ಎಂದು ಮನೀಶ್‌ ಸಿಸೋಡಿಯಾ ಹೇಳಿಕೊಂಡಿದ್ದಾರೆ.

 ಇತ್ತೀಚೆಗೆ ಭಾರತ್ ರಾಷ್ಟ್ರ ಸಮಿತಿ ಎಂದು ಮರುನಾಮಕರಣ ಮಾಡಲಾದ ಕೆ. ಚಂದ್ರಶೇಖರ್‌ ರಾವ್‌ ಪಕ್ಷದ ಶಾಸಕರನ್ನು ಬಿಜೆಪಿಗೆ ಬದಲಾಯಿಸಲು ಲಂಚ ನೀಡಲು ಪ್ರಯತ್ನಿಸುತ್ತಿರುವ ಮೂವರು ವ್ಯಕ್ತಿಗಳ ನಡುವಿನ ಸಂಭಾಷಣೆಯನ್ನು ಹೊಂದಿರುವ ಆಡಿಯೋ ಕ್ಲಿಪ್‌ ಅನ್ನು ಉಲ್ಲೇಖಿಸಿ, ಮನೀಶ್‌ ಸಿಸೋಡಿಯಾ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಆಡಿಯೋ ಕ್ಲಿಪ್‌ನಲ್ಲಿ ಉಲ್ಲೇಖಿಸಿರುವ "ಶಾ ಜಿ"  ಅವರು ನಿಜವಾಗಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಿದ್ದರೆ, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಏಕೆಂದರೆ ಒಬ್ಬ ದಲ್ಲಾಳಿ ಶಾಸಕನನ್ನು ಖರೀದಿಸುವಾಗ ಸಿಕ್ಕಿಬಿದ್ದರೆ ಮತ್ತು ದೇಶದ ಗೃಹ ಸಚಿವರ ಹೆಸರು ಅದರಲ್ಲಿ ಕಾಣಿಸಿಕೊಂಡರೆ, ಅದು ಇಡೀ ದೇಶಕ್ಕೆ ತುಂಬಾ ಅಪಾಯಕಾರಿ" ಎಂದು ದೆಹಲಿ ಉಪ ಮುಖ್ಯಮಂತ್ರಿ ಹೇಳಿದ್ದಾರೆ. 

ಇದನ್ನು ಓದಿ: ಕೆಸಿಆರ್‌ ಪಕ್ಷದ ನಾಲ್ವರು ಶಾಸಕರಿಗೆ BJPಯಿಂದ ತಲಾ 50 ಕೋಟಿ ಆಫರ್‌..?

ಬುಧವಾರ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪಕ್ಷದ ಶಾಸಕರನ್ನು ಕುದುರೆ ವ್ಯಾಪಾರ ಮಾಡಲು  ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿತ್ತು. ಇನ್ನು, ಅವರನ್ನು ನಮ್ಮ ಕಸ್ಟಡಿಗೆ ಕೊಡಬೇಕು ಎಂದು ಪೊಲೀಸರು ಮನವಿ ಮಾಡಿದರೂ, ನ್ಯಾಯಾಲಯ ಅದನ್ನು ತಿರಸ್ಕರಿಸಿದ್ದು, ಈ ಹಿನ್ನೆಲೆ ಆ ವ್ಯಕ್ತಿಗಳು ಬಿಡುಗಡೆಯಾಗಿದ್ದಾರೆ.

ಆ ಮೂವರನ್ನು ಹೈದರಾಬಾದ್ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಬಂಧಿಸಲಾಗಿತ್ತು.  ಟಿಆರ್‌ಎಸ್‌ನ ನಾಲ್ವರು ಶಾಸಕರನ್ನು ಬಿಜೆಪಿಗೆ ಸೇರಿಕೊಳ್ಳಲು ಲಂಚ ನೀಡುತ್ತಿದ್ದ ವೇಳೆ ಸಿಕ್ಕಿಬಿದ್ದಿರುವುದಾಗಿ ತೆಲಂಗಾಣ ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ಅಧಿಕಾರ ಹಿಡಿಯಲು ಹೊರಟ ಬಿಜೆಪಿಗೆ ಶಾಕ್, ರಿಷಿ ಸುನಕ್ ಕಾರಣ ನೀಡಿ ಹಿರಿಯ ನಾಯಕ ರಾಜೀನಾಮೆ!

ತೆಲಂಗಾಣದಲ್ಲಿ ಬಿಜೆಪಿ ನಡೆಸುತ್ತಿರುವ ‘ಆಪರೇಷನ್ ಕಮಲ’ವನ್ನು ಉಲ್ಲೇಖಿಸಿದ ಮನೀಶ್‌ ಸಿಸೋಡಿಯಾ, ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ಅಕ್ಟೋಬರ್ 27 ರಂದು ಸೈಬರಾಬಾದ್‌ನಲ್ಲಿ ದಾಳಿ ನಡೆಸಿ ಮೂವರು ಪಿಂಪ್‌ಗಳು ₹ 100 ಕೋಟಿಯೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ನಿಮ್ಮಲ್ಲಿ ಕೆಲವರು ವರದಿ ಮಾಡಿದ್ದರು. ಈ ದಲ್ಲಾಳಿಗಳು ಬಿಜೆಪಿಯ ಆಪರೇಷನ್ ಕಮಲವನ್ನು ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಮೂವರು ಬ್ರೋಕರ್‌ಗಳು ರಾಮಚಂದ್ರ ಭಾರತಿ, ಸಿಮಯ್ಯ ಮತ್ತು ನಂದ್ ಕುಮಾರ್." ಎಂದು ಹೇಳಿದ್ದಾರೆ.

ಬಂಧಿತ ಮೂವರು ವ್ಯಕ್ತಿಗಳು ಮತ್ತು ಟಿಆರ್‌ಎಸ್‌ನ ಕೆಲವು ಶಾಸಕರ ನಡುವಿನ ವರದಿಯಾದ ಸಂಭಾಷಣೆಗಳ ಆಡಿಯೋ ರೆಕಾರ್ಡಿಂಗ್ ಅನ್ನು ಉಲ್ಲೇಖಿಸಿ ಮಾತನಾಡಿದ ಸಿಸೋಡಿಯಾ, "ಅಕ್ಟೋಬರ್ 28 ರಂದು, ಅವರ ಸಂಪೂರ್ಣ ಸಂಭಾಷಣೆಯ ಆಡಿಯೋ ಹೊರಬಂದಿದೆ. ಈ ಜನರು, ವಿಶೇಷವಾಗಿ ಭಾರತಿ ಅವರು ಟಿಆರ್‌ಎಸ್‌ ಶಾಸಕರನ್ನು ಬಿಜೆಪಿಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ರಾಷ್ಟ್ರ ರಾಜಧಾನಿಯಲ್ಲಿ ಹೇಳಿದ್ದಾರೆ.

Follow Us:
Download App:
  • android
  • ios