ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ತಮ್ಮ ನಾಯಿಯ ಜೊತೆ ವಾಕಿಂಗ್ ಮಾಡುವ ಸಲುವಾಗಿ ಅಥ್ಲೀಟ್ಸ್ ಗಳನ್ನು ಖಾಲಿ ಮಾಡಿಸಿದ ವಿವಾದದಲ್ಲಿ ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ ಹಾಗೂ ಅವರ ಪತ್ನಿ ರಿಂಕು ದುಗ್ಗಾ ಅವರನ್ನು ಕೇಂದ್ರ ಸರ್ಕಾರ ಕ್ರಮವಾಗಿ ಲಡಾಖ್ ಹಾಗೂ ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಿದೆ. ಕೇಂದ್ರದ ನಿರ್ಧಾರದ ಕುರಿತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲ್ಕತ (ಮೇ. 27): ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ (Athletics Stadium) ತಮ್ಮ ನಾಯಿಯ ಜೊತೆ ವಾಕಿಂಗ್ ಮಾಡುವ ಸಲುವಾಗಿ ಅಥ್ಲೀಟ್ಸ್ ಗಳನ್ನು ಖಾಲಿ ಮಾಡಿಸಿದ ವಿವಾದದಲ್ಲಿ ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ (IAS officer Sanjeev Khirwar) ಹಾಗೂ ಅವರ ಪತ್ನಿ ರಿಂಕು ದುಗ್ಗಾ ( IAS officer Rinku Dugga) ಅವರನ್ನು ಕೇಂದ್ರ ಸರ್ಕಾರ ಕ್ರಮವಾಗಿ ಲಡಾಖ್ (Ladakh) ಹಾಗೂ ಅರುಣಾಚಲ ಪ್ರದೇಶಕ್ಕೆ (Arunachal Pradesh) ವರ್ಗಾವಣೆ ಮಾಡಿದೆ. ಇದನ್ನು ಟೀಕಿಸಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Trinamool Lok Sabha MP Mahua Moitra), ಈಶಾನ್ಯ ರಾಜ್ಯಗಳಿಗೆ ಕೇಂದ್ರ ಬಾಯಿಮಾತಿನಲ್ಲಿ ಮಾತ್ರವೇ ಪ್ರಾಧ್ಯನತೆ ನೀಡುತ್ತದೆ ಎನ್ನುವುದು ಇದರಲ್ಲಿ ಸ್ಪಷ್ಟವಾಗಿದೆ ಎಂದಿದ್ದಾರೆ.

ದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ತಮ್ಮ ನಾಯಿ ಜೊತೆ ವಾಕಿಂಗ್ ಮಾಡಬೇಕು ಎನ್ನುವ ಕಾರಣಕ್ಕೆ ಅಥ್ಲೀಟ್ ಗಳನ್ನು ಸ್ಟೇಡಿಯಂನಲ್ಲಿ ನಿನಗದಿತ ಅವಧಿಗಿಂತ ಮುಂಚಿತವಾಗಿ ಹೊರಹಾಕಲಾಗಿತ್ತು. ಈ ಕುರಿತಾದ ವರದಿ ಪ್ರಕಟವಾಗುತ್ತಿದ್ದಂತೆ ಕೇಂದ್ರ ಗೃಹ ಇಲಾಖೆ ಸಂಜೀವ್ ಖಿರ್ವಾರ್ ರನ್ನು ಲಡಾಖ್ ಗೆ ಹಾಗೂ ಅವರ ಪತ್ನಿ ರಿಂಕು ದುಗ್ಗಾರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಿತ್ತು.

ಈ ವಿಚಾರವಾಗಿ ಟೀಕೆ ಮಾಡಿರುವ ಮೊಯಿತ್ರಾ ಅರುಣಾಚಲ, ಲಡಾಖ್ ನಿಮ್ಮ ಕಸಗಳನ್ನು ಹಾಕುವ ತೊಟ್ಟಿಯಲ್ಲ ಎಂದಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಅವರಿಗೂ ಇದನ್ನೂ ಟ್ಯಾಗ್ ಮಾಡಿದಾರೆ. ಅರುಣಾಚಲ ಪ್ರದೇಶವನ್ನು ಕಸದ ತೊಟ್ಟಿಯಾಗಿ ಕಾಣುತ್ತಿರುವ ವಿಚಾರದಲ್ಲಿ ಗೃಹ ಸಚಿವಾಲಯದ ಮುಂದೆ ಪ್ರತಿಭಟಿಸಬೇಕು ಎಂದು ಹೇಳಿದ್ದಾರೆ.

Scroll to load tweet…


ದಿಲ್ಲಿಯ ಬೇಡದ ಅಧಿಕಾರಿಯೊಬ್ಬರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಿರುವುದು ರಾಜ್ಯಕ್ಕೆ ನಾಚಿಕೆಗೇಡು ಎಂದು ಲೋಕಸಭೆ ಸಂಸದರು ಹೇಳಿದ್ದಾರೆ. ಈ ವರದಿ ಪ್ರಕಟವಾಗುತ್ತಿದ್ದಂತೆ, ಅಥ್ಲೀಟ್‌ಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಕ್ರೀಡಾ ಸೌಲಭ್ಯಗಳು ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತವೆ ಎಂದು ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ನಿರ್ದೇಶನ ನೀಡಿದೆ. ಬಳಿಕ ಗುರುವಾರ ಐಎಎಸ್ ದಂಪತಿ ವರ್ಗಾವಣೆ ಆದೇಶ ಹೊರಬಿದ್ದಿದೆ. ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‌ಗೆ ವರ್ಗಾವಣೆ ಮಾಡಲಾಗಿದ್ದು, ರಿಂಕು ದುಗ್ಗಾ ಅವರ ಹೊಸ ಪೋಸ್ಟಿಂಗ್ ಅರುಣಾಚಲ ಪ್ರದೇಶದಲ್ಲಿದೆ.

ಐಎಎಸ್ ದಂಪತಿಗಳು ತಮ್ಮ ನಾಯಿಯನ್ನು ಖಾಲಿ ಮೈದಾನದಲ್ಲಿ ನಡೆಸುತ್ತಿರುವ ಫೋಟೋ ಗುರುವಾರ ವೈರಲ್ ಆಗಿದ್ದು, ನಂತರದ ವರ್ಗಾವಣೆಯನ್ನು ಅನೇಕರು ಶಿಕ್ಷೆ ಎನ್ನುವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಸುಂದರ ಸ್ಥಳವಾಗಿರುವ ಲಡಾಖ್‌ಗೆ ವರ್ಗಾವಣೆ ಮಾಡುವುದನ್ನು ಶಿಕ್ಷಾರ್ಹ ಪೋಸ್ಟಿಂಗ್‌ನಂತೆ ಏಕೆ ನೋಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (former J&K chief minister Omar Abdullah) ಕೂಡಾ ಪ್ರಶ್ನಿಸಿದ್ದರೆ, ಅರುಣಾಚಲ ಪ್ರದೇಶವನ್ನು ತಪ್ಪಿತಸ್ಥ ಐಎಎಸ್ ಅಧಿಕಾರಿಯನ್ನು ಪೋಸ್ಟ್ ಮಾಡುವ ಮೂಲಕ ಏಕೆ ಶಿಕ್ಷೆ ನೀಡಬೇಕು ಎಂದು ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ.

ನಾಯಿ ಪ್ರೇಮಿ ಐಎಎಸ್ ದಂಪತಿಗಳು ಲಡಾಕ್, ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ!

"ಜನರು ಲಡಾಖ್ ಅನ್ನು "ಶಿಕ್ಷೆಯ ಪೋಸ್ಟಿಂಗ್" ಎಂದು ಏಕೆ ಕರೆಯುತ್ತಾರೆ? ಲಡಾಕ್ ಅತ್ಯಂತ ಸುಂದರ ಸ್ಥಳ. ಜನರು ಬೆರಗುಗೊಳಿಸುವಂಥ ಪ್ರದೇಶಗಳನ್ನು ಲಡಾಖ್ ಹೊಂದಿದೆ. ಇನ್ನೊಂದೆಡೆ, ಅಧಿಕಾರಿಗಳನ್ನು ಶಿಕ್ಷೆಯಾಗಿ ಮಾತ್ರ ಕಳುಹಿಸಲಾಗುತ್ತದೆ ಎಂಬ ಭಾವನೆಯನ್ನು ಅಲ್ಲಿನ ಜನರಿಗೆ ನೀಡುವುದು ನಿರಾಶಾದಾಯಕವಾಗಿದೆ. ಮತ್ತು ನಾನು ಈ ಪ್ರದೇಶಕ್ಕೆ ಭೇಟಿ ನೀಡದಿದ್ದರೂ ಅರುಣಾಚಲ ಪ್ರದೇಶಕ್ಕೂ ಇದು ಅನ್ವಯಿಸುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ನಾಯಿ ಜೊತೆ ಐಎಎಸ್ ಅಧಿಕಾರಿಯ ವಾಕಿಂಗ್, ಅದಕ್ಕಾಗಿ ಅಥ್ಲೀಟ್ಸ್ ಗಳನ್ನು ಸ್ಟೇಡಿಯಂನಿಂದ ಹೊರಹಾಕಿದರು!

ಇಬ್ಬರೂ IAS ಅಧಿಕಾರಿಗಳು 1994 ಎಜಿಎಂಯುಟಿ ಕೇಡರ್‌ಗೆ ಸೇರಿದವರು. ಖಿರ್ವಾರ್ ಅವರು ದೆಹಲಿ ಸರ್ಕಾರದ ಹಿರಿಯ ಅಧಿಕಾರಿ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಯಾಗಿದ್ದರೆ, ರಿಂಕು ದುಗ್ಗಾ ದೆಹಲಿ ಸರ್ಕಾರದ ಭೂಮಿ ಮತ್ತು ಕಟ್ಟಡದ ಕಾರ್ಯದರ್ಶಿಯಾಗಿದ್ದರು.