Asianet Suvarna News Asianet Suvarna News

ನಾಯಿ ಜೊತೆ ಐಎಎಸ್ ಅಧಿಕಾರಿಯ ವಾಕಿಂಗ್, ಅದಕ್ಕಾಗಿ ಅಥ್ಲೀಟ್ಸ್ ಗಳನ್ನು ಸ್ಟೇಡಿಯಂನಿಂದ ಹೊರಹಾಕಿದರು!

2010ರ ಕಾಮನ್ವೆಲ್ತ್ ಗೇಮ್ಸ್ ಗಾಗಿ ನಿರ್ಮಾಣ ಮಾಡಲಾಗಿದ್ದ, ರಾಷ್ಟ್ರರಾಜಧಾನಿಯ ಆಯಕಟ್ಟಿನ ಸ್ಥಳದಲ್ಲಿರುವ ಕ್ರೀಡಾ ಸಂಕೀರ್ಣ ಸಾಕಷ್ಟು ವ್ಯವಸ್ಥೆಗಳನ್ನು ಹೊಂದಿದೆ. ಒಲಿಂಪಿಕ್ಸ್ ನ ಹಲವು ಕ್ರೀಡಾ ವಿಭಾಗಗಳ ವ್ಯವಸ್ಥೆ ಇಲ್ಲಿರುವ ಕಾರಣ, ರಾಜ್ಯ ಹಾಗೂ ರಾಷ್ಟ್ರೀಯ ಅಥ್ಲೀಟ್ಸ್ ಗಳೊಂದಿಗೆ ಫುಟ್ ಬಾಲ್ ಆಟಗಾರರನ್ನೂ ಆಕರ್ಷಿಸುತ್ತದೆ.
 

So that the IAS can walk with the dog the stadium was evacuated the athletes were asked to leave in new delhi san
Author
Bengaluru, First Published May 26, 2022, 12:29 PM IST

ನವದೆಹಲಿ (ಮೇ. 26): ಕಳೆದ ಕೆಲವು ತಿಂಗಳುಗಳಿಂದ ದೆಹಲಿ ಸರ್ಕಾರದ (delhi government ) ನಿಗಾವಣೆಯಲ್ಲಿರುವ ತ್ಯಾಗರಾಜ ಸ್ಟೇಡಿಯಂನಲ್ಲಿ (Thyagraj Stadium) ಅಥ್ಲೀಟ್ ಗಳು ಹಾಗೂ ಕೋಚ್ ಗಳಿಗೆ ತರಬೇತಿಗೆ ಸಮಸ್ಯೆ ಆಗುತ್ತಿದೆ. ಅದಕ್ಕೆ ಕಾರಣ ಸಾಮಾನ್ಯ ಸಂಜೆ 7 ಗಂಟೆಗೆ ಪ್ಯಾಕಪ್ ಆಗುತ್ತಿದ್ದ ಅವರ ಅಭ್ಯಾಸ ಅವಧಿ ಈಗ ಅದಕ್ಕೂ ಮುಂಚೆಯೇ ಒತ್ತಾಯಪೂರ್ವಕವಾಗಿ ಮುಗಿಸುವಂತೆ ಹೇಳಲಾಗುತ್ತಿದೆ. ಅದಕ್ಕೆ ಕಾರಣ ದೆಹಲಿಯ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ ಸಂಜೀವ್ ಖಿರ್ವಾರ್ (Delhi’s Principal Secretary (Revenue) Sanjeev Khirwar).

ಈ ಕುರಿತಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ್ದು, ಮುಖ್ಯ ಕಾರ್ಯದರ್ಶಿ (ಸಂಜೀವ್ ಖಿರ್ವಾರ್) ತ್ಯಾಗರಾಜ ಸ್ಟೇಡಿಯಂನಲ್ಲಿ ನಾಯಿಯ ಜೊತೆ ವಾಕಿಂಗ್ ಮಾಡಬೇಕಾದ ಕಾರಣಕ್ಕಾಗಿ ಸ್ಟೇಡಿಯಂನಲ್ಲಿ ಅಭ್ಯಾಸದಲ್ಲಿ ನಿರತರಾಗಿರುವ ಎಲ್ಲಾ ಅಥ್ಲೀಟ್ ಗಳಿಗೆ ನಿಗದಿತ ಸಮಯಕ್ಕಿಂತ ಮುಂಚೆಯೇ ಹೊರಕಳಿಸಲಾಗುತ್ತಿದೆ.

“ನಾವು ಮೊದಲು ಫ್ಲಡ್ ಲೈಟ್ಸ್ ಅಡಿಯಲ್ಲಿ ರಾತ್ರಿ 8-8.30 ರವರೆಗೆ ತರಬೇತಿಯಲ್ಲಿ ನಿರತರಾಗುತ್ತಿದ್ದೆವು. ಆದರೆ ಈಗ, ಅಧಿಕಾರಿಯು ತನ್ನ ನಾಯಿಯ ಜೊತೆ ಟರ್ಫ್ ಮೇಲೆ ವಾಕಿಂಗ್ ಮಾಡುವ ಸಲುವಾಗಿ, ನಮಗೆ ಸಂಜೆ 7 ಗಂಟೆಗೆ ಮೈದಾನದಿಂದ ಹೊರಡಲು ಹೇಳಲಾಗುತ್ತಿ. ನಮ್ಮ ತರಬೇತಿ ಮತ್ತು ಅಭ್ಯಾಸದ ದಿನಚರಿ ಇದರಿಂದಾಗಿ ಅಸ್ತವ್ಯಸ್ತಗೊಂಡಿದೆ' ಎಂದು ತರಬೇತುದಾರರೊಬ್ಬರು ಹೇಳಿದರು.

ಈ ಕುರಿತಂತೆ 1994 ಬ್ಯಾಚ್ ನ ಐಎಎಸ್ ಅಧಿಕಾರಿ ಖಿರ್ವಾರ್ ಅವರನ್ನು ಪ್ರಶ್ನೆ ಮಾಡಿದಾಗ, ನನ್ನ ಮೇಲೆ ಹೊರಿಸಿರುವ ಆರೋಪ ಶುದ್ಧ ಸುಳ್ಳು ಎಂದು ಹೇಳಿದಳು. ತೀರಾ ಅಪರೂಪಕ್ಕೆ ನಾನು ನಾಯಿಯನ್ನು ಕರೆದುಕೊಂಡು ಸ್ಟೇಡಿಯಂಗೆ ಹೋಗುತ್ತಿದ್ದೆ ಎನ್ನುವುದನ್ನು ಒಪ್ಪಿಕೊಂಡ ಖಿರ್ವಾರ್, ಇದರಿಂದಾಗಿ ಅಥ್ಲೀಟ್ ಗಳ ಅಭ್ಯಾಸಕ್ಕೆ ಅಡ್ಡಿಯಾಗಿದೆ ಎನ್ನುವುದು ಸಂಪೂರ್ಣವಾಗಿ ಸುಳ್ಳು ಎಂದರು. ಇನ್ನು ಕಳೆದ ಮೂರು ದಿನಗಳಿಂದ ಸ್ಟೇಡಿಯಂನ ಬಳಿ ಗಮನಿಸಿದಾಗ, ಸಂಜೆ 6.30ರ ವೇಳೆಗೆ ಸ್ಟೇಡಿಯಂನ ಗಾರ್ಡ್ಸ್ ಗಳು ಸೀಟಿ ಊದುತ್ತಾ 7 ಗಂಟೆಯ ಒಳಗಾಗಿ ಸ್ಟೇಡಿಯಂಅನ್‌ನು ಖಾಲಿ ಮಾಡುವಂತೆ ಸೂಚನೆ ನೀಡುತ್ತಿರುವುದು ಕಂಡಿದೆ. 2010ರ ಕಾಮನ್ವೆಲ್ತ್ ಗೇಮ್ಸ್ ಗಾಗಿ ನಿರ್ಮಾಣ ಮಾಡಲಾಗಿದ್ದ, ರಾಷ್ಟ್ರರಾಜಧಾನಿಯ ಆಯಕಟ್ಟಿನ ಸ್ಥಳದಲ್ಲಿರುವ ಕ್ರೀಡಾ ಸಂಕೀರ್ಣ ಸಾಕಷ್ಟು ವ್ಯವಸ್ಥೆಗಳನ್ನು ಹೊಂದಿದೆ. ಒಲಿಂಪಿಕ್ಸ್ ನ ಹಲವು ಕ್ರೀಡಾ ವಿಭಾಗಗಳ ವ್ಯವಸ್ಥೆ ಇಲ್ಲಿರುವ ಕಾರಣ, ರಾಜ್ಯ ಹಾಗೂ ರಾಷ್ಟ್ರೀಯ ಅಥ್ಲೀಟ್ಸ್ ಗಳೊಂದಿಗೆ ಫುಟ್ ಬಾಲ್ ಆಟಗಾರರನ್ನೂ ಆಕರ್ಷಿಸುತ್ತದೆ.

ಸ್ಟೇಡಿಯಂ ನಿರ್ವಾಹಕ ಅಜಿತ್ ಚೌಧರಿ ಈ ಕುರಿತಂತೆ ಮಾಹಿತಿ ನೀಡಿದ್ದಯ, ಅಂಜೆ ಅಭ್ಯಾಸಕ್ಕೆ ಅಧಿಕೃತ ಸಮಯ 4-6. ಆದರೆ ಬಿಸಿಲು ಹೆಚ್ಚಿರುವುದನ್ನು ಗಮನಿಸಿ, ಕ್ರೀಡಾಪಟುಗಳಿಗೆ ಸಂಜೆ 7 ರವರೆಗೆ ತರಬೇತಿ ನೀಡಲು ಅವಕಾಶ ನೀಡಲಾಗಿದೆ ಎಂದು ಹೇಳಿದರು. ಆದರೆ, ಚೌಧರಿ ಅವರು ಸಮಯವನ್ನು ನಿರ್ದಿಷ್ಟಪಡಿಸುವ ಯಾವುದೇ ಅಧಿಕೃತ ಆದೇಶವನ್ನು ಹಂಚಿಕೊಂಡಿಲ್ಲ. ಸಂಜೆ 7 ಗಂಟೆಯ ನಂತರ ಯಾವುದೇ ಸರ್ಕಾರಿ ಅಧಿಕಾರಿಗಳು ಸೌಲಭ್ಯಗಳನ್ನು ಬಳಸುತ್ತಿರುವ ಬಗ್ಗೆ ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು.

“ನಾವು ಸಂಜೆ 7 ಗಂಟೆಗೆ ಸ್ಟೇಡಿಯಂಅನ್ನು ಮುಚ್ಚಬೇಕು. ನೀವು ಸರ್ಕಾರಿ ಕಚೇರಿಯ ಸಮಯವನ್ನು ಎಲ್ಲಿ ಬೇಕಾದರೂ ಕಾಣಬಹುದು. ಇದು (ಕ್ರೀಡಾಂಗಣ) ದೆಹಲಿ ಸರ್ಕಾರದ ಅಡಿಯಲ್ಲಿ ಸರ್ಕಾರಿ ಕಚೇರಿಯಾಗಿದೆ. ಅಂತಹ ಯಾವುದೇ ವಿಷಯದ ಬಗ್ಗೆ ನನಗೆ ತಿಳಿದಿಲ್ಲ (ಅಧಿಕಾರಿಯೊಬ್ಬರು ತನ್ನ ನಾಯಿಯನ್ನು ನಡೆಯಲು ಸೌಲಭ್ಯಗಳನ್ನು ಬಳಸುತ್ತಾರೆ). ನಾನು ಸಂಜೆ 7 ಗಂಟೆಗೆ ಕ್ರೀಡಾಂಗಣದಿಂದ ಹೊರಡುತ್ತೇನೆ ಮತ್ತು ನನಗೆ ಈ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಚೌಧರಿ ಹೇಳಿದರು.

16ರ ಪ್ರಜ್ಞಾನಂದ ಚೆಸ್ಸೇಬಲ್‌ ಮಾಸ್ಟ​ರ್ಸ್‌ ಟೂರ್ನಿ ಫೈನಲ್‌ಗೆ

ಕಳೆದ ಮಂಗಳವಾರ ಕೂಡ ಖಿರ್ವಾರ್ ರಾತ್ರಿ 7.30 ರ ನಂತರ ತನ್ನ ನಾಯಿಯೊಂದಿಗೆ ಕ್ರೀಡಾಂಗಣವನ್ನು ವಾಕಿಂಗ್ ಮಾಡುತ್ತಿರುವುದನ್ನು ಕಂಡಿದ್ದಾರೆ. ಸೆಕ್ಯುರಿಟಿ ಗಾರ್ಡ್‌ಗಳು ಕಾವಲು ಕಾಯುತ್ತಿದ್ದರೂ ಮೈದಾನದ ಟ್ರ್ಯಾಕ್ ಹಾಗೂ ಫುಟ್ ಬಾಲ್ ಮೈದಾನದಲ್ಲಿ ನಾಯಿ ಅಡ್ಡಾಡುತ್ತಿರುವುದನ್ನು ಗಮನಿಸಲಾಗಿದೆ.

IOA ಚುನಾವಣೆ ನಡೆಯುವವರೆಗೂ ತಾವೇ ಅಧ್ಯಕ್ಷ: ಗಾಳಿ ಸುದ್ದಿಗೆ ತೆರೆ ಎಳೆದ ನರೇಂದ್ರ ಬಾತ್ರಾ

'ಕ್ರೀಡಾಪಟುಗಳಿಗೆ ಸೇರಿದ ಕ್ರೀಡಾಂಗಣವನ್ನು ಬಿಡಲು ಎಂದಿಗೂ ನಾನು ಕೇಳುವುದಿಲ್ಲ. ನಾನು ಭೇಟಿ ನೀಡಿದರೂ, ಸ್ಟೇಡಿಯಂ ಮುಚ್ಚುವ ಸಮಯದಲ್ಲಿ ಹೋಗುತ್ತೇನೆ. ನಾಯಿಯನ್ನು ಟ್ರ್ಯಾಕ್ ನ ಮೇಲೆ ಬಿಡುವುದಿಲ್ಲ. ಯಾರೂ ಇಲ್ಲದೇ ಇದ್ದಾಗ ಮಾತ್ರ ನಾಯಿಯನ್ನು ಬಿಡುತ್ತೇನೆ. ಇದರಿಂದ ಯಾವುದೇ ಅಥ್ಲೀಟ್ ಗೂ ಸಮಸ್ಯೆ ಆಗುವುದಿಲ್ಲ. ಇದರಿಂದ ಸಮಸ್ಯೆ ಆಗುತ್ತಿದ್ದರೆ, ನಾನು ಇಲ್ಲಿಗೆ ನಿಲ್ಲುಸುತ್ತೇನೆ' ಎಂದು ಹೇಳಿದ್ದಾರೆ.

Follow Us:
Download App:
  • android
  • ios