Asianet Suvarna News Asianet Suvarna News

ಶಾಲೆಯಲ್ಲಿ ಕ್ರೀಡಾಕೂಟದ ವೇಳೆ ದುರಂತ :ಬಾಲಕನ ಕುತ್ತಿಗೆ ಸೀಳಿದ ಈಟಿ

ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟದ ವೇಳೆ ದೊಡ್ಡ ಅನಾಹುತವೊಂದು ನಡೆದಿದೆ. ಈಟಿ ಎಸೆತದ (ಜಾವೆಲಿನ್ ಥ್ರೋ) ವೇಳೆ ಸ್ಪರ್ಧಾಳುಗಳು ಎಸೆದ ಈಟಿಯೊಂದು ಬಾಲಕನ ಕತ್ತು ಸೀಳಿದೆ. ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದ್ದು, ಬಾಲಕ ಜೀವಾಪಾಯದಿಂದ ಪಾರಾಗಿದ್ದಾನೆ.

Tragic incident in odisha school, javelin pierce boys neck when he was standing near practice site akb
Author
First Published Dec 18, 2022, 11:41 AM IST

ಒಡಿಶಾ: ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟದ ವೇಳೆ ದೊಡ್ಡ ಅನಾಹುತವೊಂದು ನಡೆದಿದೆ. ಈಟಿ ಎಸೆತದ (ಜಾವೆಲಿನ್ ಥ್ರೋ) ವೇಳೆ ಸ್ಪರ್ಧಾಳುಗಳು ಎಸೆದ ಈಟಿಯೊಂದು ಬಾಲಕನ ಕತ್ತು ಸೀಳಿದೆ. ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದ್ದು, ಬಾಲಕ ಜೀವಾಪಾಯದಿಂದ ಪಾರಾಗಿದ್ದಾನೆ. ಬಲಂಗಿರ್ ಜಿಲ್ಲೆಯ ಅಗಲ್ಪುರದ ಬಾಲಕರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ಮೈದಾನದಲ್ಲಿ ಈಟಿ ಎಸೆತದ ಅಭ್ಯಾಸ ಮಾಡುತ್ತಿದ್ದ. ಈ ವೇಳೆ ಒಂಭತ್ತನೇ ತರಗತಿ ವಿದ್ಯಾರ್ಥಿ ಅದನ್ನು ನೋಡುತ್ತಾ ನಿಂತಿದ್ದಾಗ ವಿದ್ಯಾರ್ಥಿಯೊಬ್ಬ ಎಸೆದ ಈಟಿಯೊಂದು ಬಂದು ಬಾಲಕನ ಕತ್ತಿಗೆ ತಾಗಿ ಈ ಅಚಾತುರ್ಯ ಸಂಭವಿಸಿದೆ. 14 ವರ್ಷ ಪ್ರಾಯದ ಸದಾನಂದ್ ಮೆಹರ್ ಎಂಬಾತನೇ ಈಟಿ ತಾಗಿ ಗಾಯಗೊಂಡ ಬಾಲಕ

ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಂದು ಗಂಟೆಯ ಕಾಲದ ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ಬಾಲಕನ ಕುತ್ತಿಗೆಯಲ್ಲಿ ಸಿಲುಕಿದ್ದ ಈಟಿಯನ್ನು ಹೊರತೆಗೆಯಲಾಗಿದೆ. ಬಲಂಗೀರ್‌ನಲ್ಲಿರುವ ಭೀಮಾ ಭಾಯ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ (Bhima Bhoi Medical College and Hospital) ಸಿಎಂ ಪರಿಹಾರ  ನಿಧಿಯಿಂದ ಬಾಲಕನ ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸುವುದಾಗಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ (Naveen Pattnaik) ಹೇಳಿದ್ದಾರೆ.

ಆನ್‌ಲೈನ್‌ನಲ್ಲೇ ಜಾವೆಲಿನ್ ಕಲಿತು ಪದಕ ಗೆದ್ದ ಕರಿಶ್ಮಾ..!

ಈಟಿ ಎಸೆತದಿಂದಾಗಿ ಈಟಿಯೂ ಬಾಲಕನ ಕುತ್ತಿಗೆಯ ಚರ್ಮದ ಕೆಳಗೆ ಸ್ನಾಯುಪದರಕ್ಕೆ ಸಿಲುಕಿಕೊಂಡಿತ್ತು. ಹೀಗಾಗಿ ಕುತ್ತಿಗೆಯ ಒಳಭಾಗಕ್ಕೆ ಯಾವುದೇ ಹಾನಿಯಾಗಿಲ್ಲ. ಸ್ನಾಯು ಪದರಕ್ಕೆ ಗಾಯವಾಗಿದೆ. ಪ್ರಸ್ತುತ ಬಾಲಕನ ಸ್ಥಿತಿ ಸ್ಥಿರವಾಗಿದೆ ಎಂದು ಬಿಬಿಎಂಸಿಹೆಚ್ ಆಸ್ಪತ್ರೆಯ ಸೂಪರಿಟೆಂಡೆಂಟ್ ಮನ್ಸಿ ಪಂಡ ಹೇಳಿದ್ದರು. ಈ ಶಸ್ತ್ರಚಿಕಿತ್ಸೆ ವೇಳೆ ಇಎನ್‌ಟಿ, ರೆಡಿಯೋಲಾಜಿ ಹಾಗೂ ಅರವಳಿಕೆ ತಜ್ಞರು ಕೂಡ ಉಪಸ್ಥಿತರಿದ್ದರು. ಜಾವೆಲಿನ್ ಅಥವಾ ಈಟಿಯ ಲೋಹದ ತಲೆಯನ್ನು ಶಸ್ತ್ರಚಿಕಿತ್ಸೆ ನಡೆಸಿ ಕುತ್ತಿಗೆಯಿಂದ ತೆಗೆದ ನಂತರ ಬಾಲಕನನ್ನು 72 ಗಂಟೆಗಳ ಕಾಲ ಪರಿಶೀಲನೆಯಲ್ಲಿ ಇಟ್ಟಿದ್ದೇವೆ. ಸರ್ಜರಿ ನಂತರ ಉಂಟಾಗುವ ಯಾವುದೇ ಸೋಂಕು ತಡೆಯುವ ಸಲುವಾಗಿ ಸಲುವಾಗಿ ಪರಿಶೀಲನೆಯಲ್ಲಿ ಇಡಲಾಗಿದೆ. 

National Open Athletics Championships: ಜಾವೆಲಿನ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಕನ್ನಡಿಗ ಮನು

Follow Us:
Download App:
  • android
  • ios