ರೈತ ಹೋರಾಟಕ್ಕೆ ಕ್ರಾಂತಿ ಸ್ವರೂಪ ನೀಡಿದ ಟೂಲ್‌ಕಿಟ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಟೂಲ್‌ಕಿಟ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ದಿಶಾ ರವಿಗೆ ಮತ್ತೆ ಮೂರು ದಿನ ಸೆರೆಮನೆ ವಾಸ ವಿಸ್ತರಿಸಲಾಗಿದೆ.
ನವದೆಹಲಿ(ಫೆ.19): ಟೂಲ್‌ಕಿಟ್ ಪ್ರಕರಣದಲ್ಲಿ ಕಳೆದ ವಾರ ಬಂಧನಕ್ಕೊಳಗಾಗಿರುವ ಬೆಂಗಳೂರಿನ 21 ವರ್ಷದ ದಿಶಾ ರವಿ ಸೆರೆಮನೆ ವಾಸ ವಿಸ್ತರಣೆಗೊಂಡಿದೆ. ಮತ್ತೆ ಮೂರು ದಿನ ಜೈಲಿಗೆ ಕಳುಹಿಸಲಾಗಿದೆ. ಇಂದು ದೆಹಲಿ ಪೊಲೀಸಲು ಪಟಿಯಾಲ ನ್ಯಾಯಾಲಕ್ಕೆ ದಿಶಾ ರವಿಯನ್ನು ಹಾಜರು ಪಡಿಸಿದ್ದರು.
ಟೂಲ್‌ಕಿಟ್‌ಗಾಗಿ 70 ಮಂದಿ ಝೂಮ್ ಸಭೆ?: ದಿಶಾ ಸೇರಿ ಹಲವರು ಭಾಗಿ?
ದಿಶಾ ರವಿ ತಮ್ಮ ಮೇಲಿನ ಆರೋಪಗಳನ್ನು ಸಹಪಾಠಿಗಳ ಮೇಲೆ ಹಾಕುತ್ತಿದ್ದಾರೆ. ಜಾಮೀನು ನೀಡಿದರೆ ಸಾಕ್ಷ್ಯ ನಾಶಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಬೇಲ್ ನಿರಾಕರಿಸಿ, ಹೆಚ್ಚಿನ ವಿಚಾರಣೆಗೆ ಮತ್ತೆ ಮೂರು ದಿನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯ ಇದೀಗ ದಿಶಾ ರವಿಗೆ ಮತ್ತೆ ಮೂರು ದಿನ ಜೈಲು ವಾಸ ವಿಸ್ತರಿಸಿದೆ.
ಯಾರೀಕೆ ದಿಶಾ ರವಿ? ಇಲ್ಲಿದೆ ಟೂಲ್‌ಕಿಟ್ ಸಂಚಿನ ಇಂಚಿಂಚು ಮಾಹಿತಿ
ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಪೋಸ್ಟ್ ಮಾಡಿದ ರೈತ ಹೋರಾಟದ ಕುರಿತ ಗೂಗಲ್ ಡಾಕ್ಯಮೆಂಟ್ ಹಿಂದೆ ಇದೇ ದಿಶಾ ರವಿ, ನಿಕಿತಾ ಜಾಕೋಬ್ ಹಾಗೂ ಶಂತನು ಕಾರ್ಯನಿರ್ವಹಿಸಿದ್ದಾರೆ ಅನ್ನೋ ಆರೋಪದಡಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಜನವರಿ 26 ರಂದು ಟ್ರಾಕ್ಟರ್ ರ್ಯಾಲಿಗೂ ಮೊದಲು ಖಲಿಸ್ತಾನ ಸಂಘಟನೆ ಮುಖ್ಯಸ್ಥ ಮೊ ಧಲಿವಾಲ್, ದಿಶಾ ರವಿ, ನಿಕಿತಾ ಜಾಕೋಬ್ ಸೇರಿದಂತೆ ಹಲವು ಜೂಮ್ ಮೀಟಿಂಗ್ ಮಾಡಿದ್ದರು.
ಕೇಂದ್ರ ಸರ್ಕಾರದ ವಿರುದ್ಧ ತಪ್ಪು ಮಾಹಿತಿಯನ್ನು ಹರಡುವುದು ಹಾಗೂ ಭಾರತದ ವಿರುದ್ಧ ಸಂಚು ರೂಪಿಸುವ ಉದ್ದೇಶದಿಂದ ಟೂಲ್ ಕಿಟ್ ರಚಿಸಲಾಗಿದೆ. ಈ ಕುರಿತು ದೆಹಲಿ ಪೊಲೀಸರು ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನು ಟೂಲ್‌ಕಿಟ್ ರಚನೆಗೆ ದಿಶಾ ರವಿ , ಖಲಿಸ್ತಾನ ಸಂಘಟನ ಸೇರಿದಂತೆ ಹಲವರು ರಚಿಸಿದ ವ್ಯಾಟ್ಸ್ ಆ್ಯಪ್ ಗ್ರೂಪನ್ನು ಡಿಲೀಟ್ ಮಾಡಲಾಗಿದೆ. ಈ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 19, 2021, 5:42 PM IST