Asianet Suvarna News Asianet Suvarna News

ವೈದ್ಯೆಯ ಹತ್ಯೆ ಖಂಡಿಸಿ ಪ್ರತಿಭಟಿಸ್ತಿದ್ದ ಮಹಿಳೆಯರ ಬಗ್ಗೆ ಟಿಎಂಸಿ ಸಚಿವನ ಅವಹೇಳನಕಾರಿ ಮಾತು

ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ನಿನ್ನೆ ನೈಟ್ ಫ್ರೀಡಂ ರಾಲಿ ಆಯೋಜಿಸಲಾಗಿತ್ತು, ಈ ಸಮಾವೇಶದಲ್ಲಿ ಭಾಗಿಯಾದ ಮಹಿಳೆಯರ ಬಗ್ಗೆ ಮಮತಾ ಬ್ಯಾನರ್ಜಿ ಸರ್ಕಾರದ ಸಚಿವನೋರ್ವ ಅವಹೇಳನಕಾರಿಯಾಗಿ ಮಾತನಾಡಿದ್ದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

TMC minister's derogatory words about women protesting against Kolkata doctor's rape and murder akb
Author
First Published Aug 15, 2024, 3:46 PM IST | Last Updated Aug 15, 2024, 3:46 PM IST

ಕೋಲ್ಕತ್ತಾ: ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ನಿನ್ನೆ ನೈಟ್ ಫ್ರೀಡಂ ರಾಲಿ ಆಯೋಜಿಸಲಾಗಿತ್ತು, ಈ ಸಮಾವೇಶದಲ್ಲಿ ಭಾಗಿಯಾದ ಮಹಿಳೆಯರ ಬಗ್ಗೆ ಮಮತಾ ಬ್ಯಾನರ್ಜಿ ಸರ್ಕಾರದ ಸಚಿವನೋರ್ವ ಅವಹೇಳನಕಾರಿಯಾಗಿ ಮಾತನಾಡಿದ್ದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಯಾರೆಲ್ಲಾ ಈ ನೈಟ್ ಫ್ರೀಡಂ ರಾಲಿಗೆ ಹೋಗುತ್ತಿದ್ದೀರೋ ಅವರ ಗಂಡಂದಿರು ಅವರಿಗೆ ಹೊಡೆದರೆ ರಕ್ಷಣೆಗೆ ನಮ್ಮನ್ನು ಕರೆಯಬೇಡಿ ಎಂದು ಹೇಳುವ ಮೂಲಕ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಪ್ರತಿಭಟನೆ ಆಯೋಜಿಸಿದ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. 

ದಿನ್ಹತಾದ ಶಾಸಕನೂ ಆಗಿರುವ ಸಚಿವ ಉದಯನ್ ಗುಹಾ ಈ ರೀತಿ ಹೇಳಿಕೆ ನೀಡಿದ್ದು, ಇವರ ಈ ಬೇಜವಾಬ್ದಾರಿಯುತ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬೆಂಗಾಳಿ ಭಾಷೆಯಲ್ಲಿ 'ಸ್ವಾಧಿನೋತರ ಮೊಧ್ಯರಾತಿ ನಾರಿ ಸ್ವಾಧಿನೋತರ ಜೊನ್ಯೊ' ಎಂಬ ಅಂದರೆ ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ್ಯದ ಮಧ್ಯರಾತ್ರಿಯ ಸಮಾವೇಶ ಎಂಬ ಹೆಸರಿನ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಟ್ರೈನಿ ಡಾಕ್ಟರ್ ರೇಪ್ & ಮರ್ಡರ್ ಕೇಸ್; ನಾಲ್ಕು ಮದ್ವೆಯಾಗಿದ್ದ ಆರೋಪಿಯನ್ನ ಬಿಟ್ ಹೋದ ಮೂರು ಪತ್ನಿಯರು!

ಆಗಸ್ಟ್‌ 9ರಂದು ಬೆಳಗ್ಗೆ ಆರ್‌ಜಿ ಕಾರ್‌ ಕಾಲೇಜಿನ ಎಮರ್ಜೆನ್ಸಿ ಕಟ್ಟಡದ ಸೆಮಿನಾರ್ ಹಾಲ್‌ನಲ್ಲಿ ನೈಟ್‌ಶಿಫ್ಟ್‌ನಲ್ಲಿದ್ದ ಟ್ರೈನಿ ವೈದ್ಯೆಯ ಶವ ರಕ್ತಸಿಕ್ತ ಸ್ಥಿತಿಯಲ್ಲಿ  ಪತ್ತೆಯಾಗಿತ್ತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಆರ್‌ ಜಿ ಕಾರ್ ಕಾಲೇಜು ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.  ಅಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಸಮುದಾಯವೂ ರಾಜ್ಯದಲ್ಲಿ ಕೇಂದ್ರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. 

ಕೋಲ್ಕತ್ತಾದ ಆಸ್ಪತ್ರೆಯಲ್ಲೇ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ: ಶಂಕಿತನ ಸುಳಿವು ನೀಡಿದ ಬ್ಲೂಟುಥ್

ಘಟನೆ ಖಂಡಿಸಿ ವೈದ್ಯರು, ವಿದೇಶಿ ಪ್ರಜೆಗಳು, ಕಿರಿಯ ವೈದ್ಯರು, ವೈದ್ಯ ವಿದ್ಯಾರ್ಥಿಗಳು ತಮ್ಮ ಕೆಲಸ ಹಾಗೂ ಶಿಕ್ಷಣ ಚಟುವಟಿಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳ ರಾಜ್ಯದಾದ್ಯಂತ ತುರ್ತು ಚಿಕಿತ್ಸೆ ಹೊರತುಪಡಿಸಿ ಎಲ್ಲಾ ವೈದ್ಯಕೀಯ ಸೇವೆಗಳಿಗೆ ಅಡಚಣೆಯುಂಟಾಗಿದೆ. ಅಲ್ಲದೇ ವೈದ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ಸಿಬಿಐ ಹೊಸದಾಗಿ ಎಫ್‌ಐಆರ್ ದಾಖಲಿಸಿದೆ. ಮತ್ತೊಂದೆಡೆ ವೈದ್ಯೆಯ ಪೋಷಕರು ತಮ್ಮ ಮಗಳ ಮೇಲೆ ಗ್ಯಾಂಗ್ ರೇಪ್ ಆಗಿರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತಾದಲ್ಲಿ ವೈದ್ಯೆಯ ರೇಪ್‌& ಕೊಲೆ ಕೇಸ್‌: ದೇಶವ್ಯಾಪಿ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ವೈದ್ಯರ ಕರೆ

Latest Videos
Follow Us:
Download App:
  • android
  • ios