ಟ್ರೈನಿ ಡಾಕ್ಟರ್ ರೇಪ್ & ಮರ್ಡರ್ ಕೇಸ್; ನಾಲ್ಕು ಮದ್ವೆಯಾಗಿದ್ದ ಆರೋಪಿಯನ್ನ ಬಿಟ್ ಹೋದ ಮೂರು ಪತ್ನಿಯರು!

ಟ್ರೈನಿ ವೈದ್ಯೆಯ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಬರೋಬ್ಬರಿ ನಾಲ್ಕು ಮದುವೆಯಾಗಿದ್ದಾನೆ. ಇತ್ತ ಆತನ ತಾಯಿ ಮಾತ್ರ ನನ್ನ ಮಗ ಅಮಾಯಕ ಎಂದು ಹೇಳಿಕೆ ನೀಡಿದ್ದಾರೆ.

RG Kar Trainee Doctor Case Accused Sanjay Rao married four time three of his four wives left him mrq

ಕೋಲ್ಕತ್ತಾ: ಆರ್‌.ಜಿ ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಟ್ರೈನಿ ವೈದ್ಯೆಯ ರೇಪ್ ಆಂಡ್ ಮರ್ಡರ್ ಪ್ರಕರಣದ ಆರೋಪಿಯ ಹಿನ್ನೆಲೆ ಬೆಳಕಿಗೆ ಬಂದಿದೆ. ಆರೋಪಿ ನಾಲ್ಕು ಮದುವೆಯಾಗಿದ್ದು,  ಇವರಲ್ಲಿ ಮೂವರು ಪತ್ನಿಯರು ಈತನನ್ನು ತೊರೆದು ಹೋಗಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಜಯ್ ರಾವ್ ವಾಸವಿದ್ದ ಮನೆಯ ನೆರೆಹೊರೆಯವರು ಈತನ ವರ್ತನೆ ಬಗ್ಗೆ ಮಾತನಾಡಿದ್ದಾರೆ. ಇಂಡಿಯಾ ಟುಡೇ ವರದಿ ಪ್ರಕಾರ, ಆರೋಪಿ ಸಂಜಯ್ ರಾಯ್ ನಾಲ್ಕು ಮದುವೆಯಾಗಿದ್ದಾನೆ. ಮೂವರು ಇವನ ವಿಚಿತ್ರ ವರ್ತನೆಯಿಂದಲೇ ಬಿಟ್ಟು ಹೋಗಿದ್ದಾರೆ. ವರ್ಷದ ಹಿಂದೆಯಷ್ಟೇ ಈತನ ನಾಲ್ಕನೇ ಪತ್ನಿ ಕ್ಯಾನ್ಸರ್‌ನಿಂದ ಮೃತಳಾಗಿದ್ದಾಳೆ. ತಡರಾತ್ರಿ ಮನೆಗೆ ಬರುತ್ತಿದ್ದಂತೆ ಸಂಜಯ್ ರಾವ್ ಯಾವಾಗಲೂ ನಶೆಯಲ್ಲಿರುತ್ತಿದ್ದ ಎಂಬ ಮಾಹಿತಿಯನ್ನು ನೆರೆಹೊರೆಯವರು ಹಂಚಿಕೊಂಡಿದ್ದಾರೆ. 

ಇನ್ನು ಘಟನೆಯ ಕುರಿತು ಆರೋಪಿ ಸಂಜಯ್ ರಾವ್ ತಾಯಿ ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ನೀಡಿದ ಒತ್ತಡದಿಂದ ಮಗ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಅದು ಸ್ವವಿವೇಚನೆಯಿಂದ ನೀಡಿದ ಹೇಳಿಕೆ ಅಲ್ಲ. ಆತ ನಿರಪಾರಾಧಿ ಮತ್ತು ಅಮಾಯಕನಾಗಿದ್ದಾನೆ ಎಂದು ಹೆತ್ತಕರಳು ವಾದ ಮಾಡುತ್ತಾರೆ. 

ಟ್ರೈನಿ ವೈದ್ಯೆಯ ಪ್ರಕರಣದಲ್ಲಿ ಶನಿವಾರ ಪೊಲೀಸರು ಆರೋಪಿ ಸಂಜಯ್ ರಾವ್‌ನನ್ನು ಬಂಧಿಸಲಾಗಿತ್ತು. 31 ವರ್ಷದ ಸ್ನಾತಕೋತ್ತರ ತರಬೇತಿಯಲ್ಲಿದ್ದ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿದೆ. ಕೋಲ್ಕತ್ತಾದ ಉತ್ತರದಲ್ಲಿ ಈ ಆಸ್ಪತ್ರೆಯಿದೆ. ಮರಣೋತ್ತರ ಶವ ಪರೀಕ್ಷೆಯ ನಾಲ್ಕು ಪುಟಗಳ ವರದಿ ವೈದ್ಯೆಯ ಕೊಲೆಯನ್ನು ವಿವರಿಸಿತ್ತು. ಆಕೆಯ ಎರಡು ಕಣ್ಣು ಮತ್ತು ಬಾಯಿಯಿಂದ ರಕ್ತ ಹೊರ ಬಂದಿತ್ತು. ಮುಖ ಹಾಗೂ ಕೆಬೆರಳುಗಳ ಭಾಗದಲ್ಲಿ ಗಾಯವಾಗಿತ್ತು. ಹಾಗೆಯೇ ಸಂತ್ರಸ್ತೆಯ ಖಾಸಗಿ ಭಾಗದಲ್ಲಿಯೂ ರಕ್ತಸ್ರಾವ ಉಂಟಾಗಿತ್ತು. ಹೊಟ್ಟೆ ಭಾಗ, ಎಡಗಾಲು, ಕುತ್ತಿಗೆ, ಬಲಗೈ, ಮಧ್ಯದ ಬೆರಳು ಮತ್ತು ತುಟಿಗಳ ಮೇಲೆಯೂ ಗಂಭೀರ ಗಾಯಗಳಾಗಿದ್ದವು.

ಚೀನಾದ ಕಂಪನಿಗೆ ಯುವಕರನ್ನು ಮಾರಾಟ ಮಾಡಿದ್ದ ವ್ಯಕ್ತಿಯ ಬಂಧನ; ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಒತ್ತಡ

ಸಂಜಯ್ ರಾವ್‌ನನ್ನು ಬಂಧಿಸಿರುವ ಪೊಲೀಸರು BNSನ ಸೆಕ್ಷನ್ 64 (ಅತ್ಯಾಚಾರ) ಮತ್ತು 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ನ್ಯಾಯಾಲಯ ಆಗಸ್ಟ್ 23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಘಟನೆ ಬಳಿಕ ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸಮಪರ್ಕ ಭದ್ರತೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು, ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರು, ನರ್ಸಿಂಗ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಉತ್ತಮ ಭದ್ರತಾ ಕ್ರಮಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. 

ಜಿಲ್ಲಾ ಆಸ್ಪತ್ರೆಗಳಾದ ಬರ್ಧಮಾನ್ ಮೆಡಿಕಲ್ ಕಾಲೇಜು ಮತ್ತು ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜುಗಳಲ್ಲಿಯೂ ವೈದ್ಯೆಯ ಹತ್ಯೆಯನ್ನು ಖಂಡಿಸಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಮಹಿಳಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸುರಕ್ಷತೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

ಹೆದ್ದಾರಿ ಪಕ್ಕದಲ್ಲಿಯೇ ಕಾರ್ ನಿಲ್ಲಿಸಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್; ಓಯೋ ರೂಮ್‌ಗೆ ಹೋಗಿ ಎಂದ ಜನರು

Latest Videos
Follow Us:
Download App:
  • android
  • ios