ಮೇ ತಿಂಗಳಲ್ಲಿ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ 1.2 ಕೋಟಿ ಲಡ್ಡುಗಳು ಮಾರಾಟವಾಗಿ ಹೊಸ ದಾಖಲೆ ಸೃಷ್ಟಿಯಾಗಿದೆ. ಇದೇ ವೇಳೆ, ಟಿಟಿಡಿಗೆ ನಕಲಿ ತುಪ್ಪ ಪೂರೈಸಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದೇಶದ ಹಲವೆಡೆ ದಾಳಿ ನಡೆಸಿ ತನಿಖೆ ನಡೆಸುತ್ತಿದೆ.

ತಿರುಪತಿ (ಜೂ.4): ಮೇ ಒಂದೇ ತಿಂಗಳಲ್ಲಿ 1.2 ಕೋಟಿಗೂ ತಿರುಪತಿ ವೆಂಕಟೇಶ್ವರ ದೇಗುಲ(Tirupati venkateshwar temple)ದ ಪ್ರಸಿದ್ಧ ಲಡ್ಡು ಮಾರಾಟವಾಗಿವೆ. ಇದು ಈವರೆಗಿನ ಅತಿ ಹೆಚ್ಚು ಮಾಸಿಕ ಮಾರಾಟದ ದಾಖಲೆ. ಇದು 2024 ಮತ್ತು 2025ರಲ್ಲಿ ಕ್ರಮವಾಗಿ 1.01 ಕೋಟಿ ಮತ್ತು 1.1 ಕೋಟಿ ಮಾರಾಟದ ದಾಖಲೆ ಹಿಂದಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಿರುಪತಿ ನಕಲಿ ತುಪ್ಪ: ದೇಶದ 15 ಸ್ಥಳದಲ್ಲಿ ಇ.ಡಿ. ರೇಡ್‌

ಹೈದರಾಬಾದ್: ಟಿಟಿಡಿ(TTD) ತುಪ್ಪ ಕಲಬೆರಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ, (ಇ.ಡಿ.), ಬುಧವಾರ ಡೆಹ್ರಾಡೂನ್, ದೆಹಲಿ, ತಮಿಳುನಾಡಿನ ದಿಂಡಿಗಲ್, ಆಂಧ್ರಪ್ರದೇಶದ ಗುಂಟೂರು ಮತ್ತು ಮುಂಬೈ ಸೇರಿದಂತೆ 15 ಸ್ಥಳಗಳಲ್ಲಿ ಶೋಧ ನಡೆಸಿದೆ ಹಾಗೂ 60 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ.

ದಿಂಡಿಗಲ್‌ನಲ್ಲಿರುವ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್, ಅಹಲ್ಯಾನಗರದ ಮಾಲ್ಗಂಗಾ ಮಿಲ್ಕ್ ಆ್ಯಂಡ್‌ ಆಗ್ರೋ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೂರ್ಕಿಯಲ್ಲಿರುವ ಭೋಲೆ ಬಾಬಾ ಆರ್ಗಾನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರ ವಸತಿ ಮತ್ತು ಕಚೇರಿ ಆವರಣದಲ್ಲಿ ಶೋಧ ನಡೆಸಲಾಗಿದೆ.

ನಕಲಿ ತುಪ್ಪ ಮಾರಿದ್ದರಿಂದ ಬಂದ ಅಕ್ರಮ ಆದಾಯದ ಹರಿದಾಟದ ಬಗ್ಗೆ ಇ.ಡಿ. ತನಿಖೆ ನಡೆಸುತ್ತಿದೆ.