- Home
- Astrology
- ತಿರುಪತಿ ದರ್ಶನಕ್ಕೆ ಬುಕಿಂಗ್- ವಿವಿಧ ಸೇವೆಗಳಿಗೆ ಆನ್ಲೈನ್ನಲ್ಲಿ ಶೀಘ್ರ ಬುಕ್ ಹೇಗೆ? ಪುಲ್ ಡಿಟೇಲ್ಸ್
ತಿರುಪತಿ ದರ್ಶನಕ್ಕೆ ಬುಕಿಂಗ್- ವಿವಿಧ ಸೇವೆಗಳಿಗೆ ಆನ್ಲೈನ್ನಲ್ಲಿ ಶೀಘ್ರ ಬುಕ್ ಹೇಗೆ? ಪುಲ್ ಡಿಟೇಲ್ಸ್
ವಿಶ್ವದ ಶ್ರೀಮಂತ ದೇವರು ತಿರುಪತಿ ವೆಂಕಟೇಶ್ವರನ ಆಗಸ್ಟ್ ತಿಂಗಳ ದರ್ಶನಕ್ಕಾಗಿ ಆನ್‌ಲೈನ್ ಬುಕಿಂಗ್ ದಿನಾಂಕಗಳು ಪ್ರಕಟಗೊಂಡಿವೆ. ಈ ಲೇಖನವು ಲಕ್ಕಿ ಡಿಪ್, ಆರ್ಜಿತ ಸೇವಾ, ವಿಶೇಷ ಪ್ರವೇಶ ದರ್ಶನ, ಅಂಗಪ್ರದಕ್ಷಿಣಂ ಮತ್ತು ವಸತಿ ಸೌಲಭ್ಯಗಳ ಬುಕಿಂಗ್‌ಗೆ ಸಂಬಂಧಿಸಿದ ಡಿಟೇಲ್ಸ್ ಇಲ್ಲಿದೆ.

ತಿರುಪತಿಗೆ ಆನ್‌ಲೈನ್ ಬುಕಿಂಗ್
ವಿಶ್ವದ ಅತ್ಯಂತ ಶ್ರೀಮಂತ ದೇವರಲ್ಲಿ ಒಂದು ಎಂದೆನಿಸಿಕೊಳ್ಳುತ್ತಿರುವ ತಿರುಪತಿಯ ವೆಂಕಟೇಶ್ವರನ ದರ್ಶನಕ್ಕೆ ಪ್ರತಿನಿತ್ಯವೂ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆನ್‌ಲೈನ್ ಮೂಲಕ ಮೂರು ತಿಂಗಳ ಮೊದಲೇ ಬುಕ್ಕಿಂಗ್ ವ್ಯವಸ್ಥೆಯಿದ್ದು, ಐದೇ ನಿಮಿಷಗಳಲ್ಲಿ ಎಲ್ಲಾ ದರ್ಶನಗಳೂ ಕ್ಲೋಸ್ ಆಗುವುದೇ ಇದಕ್ಕೆ ಸಾಕ್ಷಿಯಾಗಿದೆ. ಆನ್‌ಲೈನ್ ಬುಕ್ಕಿಂಗ್ ಮಾಡುವವರಷ್ಟೇ ಅಲ್ಲದೇ, ಬುಕ್ಕಿಂಗ್ ಇಲ್ಲದೆಯೂ ಬರುವವರ ಸಂಖ್ಯೆಯೂ ಹೆಚ್ಚಿದೆ. ಆದರೆ ಆನ್ಲೈನ್ನಲ್ಲಿ ಬುಕ್ ಮಾಡಿಕೊಂಡು ಹೋದರೆ ಸಾಕಷ್ಟು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.

ಆಗಸ್ಟ್ನ ಬುಕಿಂಗ್
ಇದೇ ಕಾರಣಕ್ಕೆ ಪ್ರತಿ ತಿಂಗಳೂ ಆನ್ಲೈನ್ನಲ್ಲಿ ದರ್ಶನದ ಟಿಕೆಟ್ ಬುಕ್ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗುತ್ತದೆ. ಮೂರು ತಿಂಗಳಿನ ಮುಂಚೆ ಈ ಬುಕಿಂಗ್ ಆರಂಭವಾಗುತ್ತದೆ. ಇದರ ಅರ್ಥ ಈಗ ಮೇ ತಿಂಗಳು. ನೀವು ಆಗಸ್ಟ್ ತಿಂಗಳಿಗೆ ಹೋಗಲು ಬಯಸಿದರೆ ಮೇ ತಿಂಗಳಿನಲ್ಲಿ ಆನ್‌ಲೈನ್ ಬುಕ್ ಮಾಡಿಕೊಳ್ಳಬಹುದು. ಟಿಟಿಡಿ ರಿಲೀಸ್ ಮಾಡುವ ದಿನಗಳಲ್ಲಿಯೂ ನೀವು ಬುಕ್ ಮಾಡಿಕೊಳ್ಳಬಹುದೇ ವಿನಾ ಬೇರೆ ದಿನಗಳಲ್ಲಿ ಆಗುವುದಿಲ್ಲ. ಪ್ರತಿ ಮೂರು ತಿಂಗಳಿಗಿಂತ ಮುಂಚಿತವಾಗಿ ಬುಕ್ ಮಾಡುವ ಅವಕಾಶ ನಿಮಗೆ ಸಿಗುತ್ತದೆ.
ಲಕ್ಕಿ ಡಿಪ್ನಿಂದ ಅದೃಷ್ಟ
ಇದೀಗ ಆಗಸ್ಟ್ ತಿಂಗಳ ಬುಕಿಂಗ್ ಇದೇ 21ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ ಅಂದರೆ, ಲಕ್ಕಿ ಡಿಪ್ ಮಾಡಲಾಗುತ್ತದೆ. ಅದು ಇದೇ ತಿಂಗಳ 18 ರ ಬೆಳಿಗ್ಗೆ 10 ಗಂಟೆಯಿಂದ 20ರವರೆಗೆ ಬೆಳಿಗ್ಗೆ 10 ಗಂಟೆಯವರೆಗೆ ಇರುತ್ತದೆ. ಅಲ್ಲಿ ನೀವು ನಿಮ್ಮ ಡಿಟೇಲ್ಸ್ ತುಂಬಿ ಅದೃಷ್ಟ ಪರೀಕ್ಷೆ ಮಾಡಬಹುದು.
ಆರ್ಜಿತ ಸೇವಾ- ವರ್ಚುವಲ್ ಸೇವಾ
ಇದನ್ನು ಸೇವೆಗಳು 21ರಿಂದ ಆರಂಭವಾಗುತ್ತದೆ. ಆರ್ಜಿತ ಸೇವಾ ಟಿಕೆಟ್‌ಗಳು 21ರ ಬೆಳಿಗ್ಗೆ 10 ಗಂಟೆಯಿಂದ ಲಭ್ಯ. ಇದರಲ್ಲಿ ವಿವಿಧ ಸೇವೆಗಳಿದ್ದು, ಒಂದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದೇ ದಿನ ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಸೇವೆ + ದರ್ಶನದ ಟಿಕೆಟ್ ಬಿಡುಗಡೆಯಾಗುತ್ತದೆ. ವರ್ಚುವಲ್ ಸೇವೆಗೆ ಪ್ರತಿಯೊಬ್ಬರಿಗೆ 500 ರೂಪಾಯಿ.
ಅಂಗಪ್ರದಕ್ಷಿಣಂ ಟಿಕೆಟ್
ಮೇ 23ರಂದು ಅಂಗಪ್ರದಕ್ಷಿಣಂ ಟಿಕೆಟ್ ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದ್ದರೆ, ಮಧ್ಯಾಹ್ನ 3ಕ್ಕೆ ಹಿರಿಯ ನಾಗರಿಕರ ಸೇವೆಯ ಟಿಕೆಟ್ ಬಿಡುಗಡೆಯಾಗಲಿದೆ. ಇವೆರಡೂ ಉಚಿತವಾಗಿದೆ. ವಿಶೇಷ ಪ್ರವೇಶ (Special Entry) ಟಿಕೆಟ್ 25ನೇ ತಾರೀಖಿನಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ಇದರ ಮೊತ್ತ ಒಬ್ಬರಿಗೆ 300 ರೂಪಾಯಿಗಳು. ಅದೇ ರೀತಿ ವಸತಿ ಸೌಲಭ್ಯ ಬೇಕಿದ್ದರೆ 25 ರಂದು ಮಧ್ಯಾಹ್ನ 3:00 ಗಂಟೆಗೆ ಬಿಡುಗಡೆಯಾಗುವ ಸ್ಲಾಟ್ನಲ್ಲಿ ಪಡೆಯಬಹುದು.
ಮೊದಲೇ ರೆಡಿ ಇಟ್ಟುಕೊಳ್ಳಿ
ಇದಕ್ಕೆ ನೀವು ಮೊದಲೇ ಸೈನ್ ಇನ್ ಮಾಡಿಟ್ಟುಕೊಂಡರೆ ಒಳಿತು. ಬಳಿಕ ನಿಮ್ಮ ಹೆಸರು, ಆಧಾರ್ ಸಂಖ್ಯೆ, ವಯಸ್ಸು, ವಿಳಾಸ ಇವೆಲ್ಲವುಗಳನ್ನೂ ಮೊದಲೇ ರೆಡಿ ಮಾಡಿಟ್ಟುಕೊಳ್ಳಬೇಕು. ಹಿರಿಯ ನಾಗರಿಕ ಕೋಟಾಕ್ಕೆ ಆಧಾರ್ ಕಾರ್ಡ್ ಅಪ್ಲೋಡ್ ಮಾಡಬೇಕಾಗುವ ಕಾರಣ ಅದನ್ನೂ ಮೊದಲೇ ರೆಡಿ ಇಟ್ಟುಕೊಂಡರೆ ಒಳಿತು. ಸೀನಿಯರ್ ಸಿಟಿಜನ್ ಹಾಗೂ ಅಂಗಪ್ರದಕ್ಷಿಣೆಯು ಉಚಿತವಾಗಿದೆ. ಆನ್‌ಲೈನ್ ಮೂಲಕ ನೀವು ಹಣ ಕೊಟ್ಟು ಮೂರು ತಿಂಗಳ ಮುಂಚಿತವಾಗಿ ಬುಕ್ ಮಾಡಿಕೊಳ್ಳಬೇಕು. ಟಿಕೆಟ್ ಬುಕ್ ಮಾಡಲು https://ttdevasthanams.ap.gov.in/home/dashboard ಇಲ್ಲಿ ಕ್ಲಿಕ್ ಮಾಡಿ.

