Bengaluru devotee donation to Tirupati ಬೆಂಗಳೂರಿನ ಭಕ್ತರೊಬ್ಬರು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ದಾನವಾಗಿ ನೀಡಿದ್ದಾರೆ. ಎಂ.ಮಹದೇವಮ್ಮ ಎಂಬ ಭಕ್ತೆಯು ಟಿಟಿಡಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಬೃಹತ್ ದೇಣಿಗೆಯನ್ನು ಸಮರ್ಪಿಸಿದ್ದಾರೆ.

ಪಿಟಿಐ ತಿರುಪತಿ (ಏ.25): ತಿರುಪತಿ ಭೇಟಿ ನೀಡುವ ಭಕ್ತರು ಅಪಾರ ದೇಣಿಗೆ ಉಡುಗೊರೆಗಳನ್ನ ನೀಡುತ್ತಾರೆ. ಕೆಲವರು ಭಕ್ತರು ಹುಂಡಿಗಳಿಗೆ ಸಾವಿರ ಲಕ್ಷಗಟ್ಟಲೆ ಹಣ ಹಾಕಿದರೆ ಇನ್ನು ಕೆಲವರು ತಮ್ಮಲ್ಲಿನ ಚಿನ್ನಾಭರಣಗಳನ್ನೇ ತಿಮ್ಮಪ್ಪನಿಗೆ ಉಡುಗೊರೆಯಾಗಿ ಕೊಡುತ್ತಾರೆ. ಕೆಲವು ಭಕ್ತರು ಟಿಟಿಡಿ ನಡೆಸುವ ಟ್ರಸ್ಟ್‌ಗಳಿಗೆ ದೇಣಿಗೆ ನೀಡುತ್ತಾರೆ. ಚಿನ್ನ, ಬೆಳ್ಳಿ, ವಾಹನಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಭಗವಂತನಿಗೆ ದಾನ ಮಾಡುತ್ತಾರೆ. ವಿಚಿತ್ರವೆನಿಸಬಹುದು ಕೆಲವು ಭಕ್ತರು ಭಕ್ತಿಯಿಂದ ತಮ್ಮ ಆಸ್ತಿಯನನ್ನೇ ಭಗವಂತನ ಮೇಲೆ ನೋಂದಾಯಿಸುವವರು ಇದ್ದಾರೆ. ಇತ್ತೀಚೆಗೆ ಭಕ್ತರೊಬ್ಬರು, ಭಕ್ತಿಯಿಂದ ತಿರುಮಲ ಶ್ರೀಗಳಿಗೆ ದುಬಾರಿ ಉಡುಗೊರೆಯನ್ನು ಅರ್ಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಸಿದ್ಧ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಬೆಂಗಳೂರು ಭಕ್ತೆಯೊಬ್ಬರು ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ಶುಕ್ರವಾರ ದಾನವಾಗಿ ನೀಡಿದ್ದಾರೆ.

ಎಂ.ಮಹದೇವಮ್ಮ ಹೆಸರಿನ ಭಕ್ತೆ 753 ಗ್ರಾಂ ತೂಕದ ಪದಕಗಳನ್ನು ವೆಂಕಟೇಶ್ವರ ದೇಗುಲದ ಒಳಗಿನ ರಂಗನಾಯಕಕುಲ ಮಂಟಪದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ರವಿಚಂದ್ರ, ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್.ವೆಂಕಯ್ಯ ಚೌಧರಿ ಸಮ್ಮುಖ ದಾನ ನೀಡಿದರು ಎಂದು ದೇಗುಲ ನಿರ್ವಹಣಾ ಸಂಸ್ಥೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಹೇಳಿಕೆ ತಿಳಿಸಿದೆ.

ಇಲ್ಲಿಯ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಬೆಂಗಳೂರು ಭಕ್ತೆಯೊಬ್ಬರು ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ಶುಕ್ರವಾರ ದಾನವಾಗಿ ನೀಡಿದ್ದಾರೆ.ಇಲ್ಲಿಯ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಬೆಂಗಳೂರು ಭಕ್ತೆಯೊಬ್ಬರು ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ಶುಕ್ರವಾರ ದಾನವಾಗಿ ನೀಡಿದ್ದಾರೆ.

View post on Instagram