Asianet Suvarna News Asianet Suvarna News

ದೋಣಿಯಿಂದ ಜಿಗಿದು ಈಜಿದ ಹುಲಿ : ವಿಡಿಯೋ ವೈರಲ್

  • ಲೈಫ್ ಆಫ್ ಪೈ ಸಿನಿಮಾ ನೆನಪಿಸಿದ ಹುಲಿ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
  • ದೋಣಿಯಿಂದ ಛಂಗನೇ ನೀರಿಗೆ ಜಿಗಿದ ಹುಲಿ 
tiger jumping from boat reminds netizens of Life of Pia kb
Author
Bangalore, First Published Apr 19, 2022, 7:04 PM IST

ರಾಯಲ್ ಬೆಂಗಾಲ್ ಟೈಗರ್ ಅನ್ನು ಸುಂದರಬನ್‌ಗೆ ಕಾಡಿನಲ್ಲಿ ಬಿಡಲು ಸಾಗಿಸುವಾಗ ದೋಣಿಯಿಂದ ನೀರಿಗೆ ಹಾರಿ ಈಜುತ್ತಾ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೋಣಿಯಿಂದ ಛಂಗನೇ ಜಿಗಿದ ಹುಲಿ ಮತ್ತೆಂದೂ ಹಿಂದೆ ತಿರುಗಿ ನೋಡದೆ ತನ್ನ ನೈಸರ್ಗಿಕ ಆವಾಸ ಸ್ಥಾನದತ್ತ ಮುಂದಡಿ ಇಟ್ಟಿದೆ. ಹುಲಿ ದೋಣಿಯಿಂದ ಜಿಗಿಯುತ್ತಿರುವ ಈ ದೃಶ್ಯ ನೋಡುಗರಿಗೆ ರಿಚರ್ಡ್ ಪಾರ್ಕರ್ (Richard Parker) ಅವರು 'ಲೈಫ್ ಆಫ್ ಪೈ' (Life of Pia)ಸಿನಿಮಾವನ್ನು ನೆನಪಿಸುತ್ತಿದೆ.

ಈ ವಿಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿ (IFS) ಪರ್ವೀನ್ ಕಸ್ವಾನ್‌ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ ಹುಲಿಯೊಂದರ ಆಕರ್ಷಕ ಜಿಗಿತದ ರಕ್ಷಿಸಿದ ಹುಲಿಯನ್ನು ಸುಂದರಬನ್‌ ಅರಣ್ಯಕ್ಕೆ (Sundarbun Forest) ಬಿಡುವ ಹಳೆಯ ವಿಡಿಯೋ ಇದು ಎಂದು ಅವರು ಟ್ವಿಟ್ಟರ್‌ನಲ್ಲಿ (Twitter) ಬರೆದುಕೊಂಡಿದ್ದಾರೆ.

Sariska Fire ಸಾರಿಸ್ಕಾ ಕಾಡ್ಗಿಚ್ಚು ಬಹುತೇಕ ನಿಯಂತ್ರಣಕ್ಕೆ, ಬೆಂಕಿಯಿಂದ ಹುಲಿಗೆ ತೊಂದರೆಯಾಗಿಲ್ಲ!

ಪೋಸ್ಟ್ ಮಾಡಿದ ನಂತರ, ಈ ವೀಡಿಯೊವನ್ನು 88,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 4,000 ಜನರು ಇಷ್ಟಪಟ್ಟಿದ್ದಾರೆ ಮತ್ತು  ಇದು ಮತ್ತಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಮಿತ್ರ ಜೋಶಿ ಎಂಬ ಹೆಸರಿನ ಬಳಕೆದಾರರು ಈ ದೃಶ್ಯ ಲೈಫ್ ಆಫ್ ಪೈ ಅನ್ನು ನನಗೆ ನೆನಪಿಸುತ್ತದೆ. ರಿಚರ್ಡ್ ಪೀಟರ್ ಹಿಂತಿರುಗಿ ನೋಡಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆ ಧ್ವನಿ ಆ ಸ್ವಿಮ್ ವಾವ್ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಫೆಬ್ರವರಿಯಲ್ಲಿ, ಐಎಫ್‌ಎಸ್ ಅಧಿಕಾರಿ (IFS Officer) ಪರ್ವಿನ್‌ ಕಸ್ವಾನ್‌ (Parween Kaswan)ಅವರು ಹಿಮಾಲಯನ್ ಕಪ್ಪು ಕರಡಿಯ ರಕ್ಷಣೆ ಮತ್ತು ಬಿಡುಗಡೆಯನ್ನು ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಸ್ವಾತಂತ್ರ್ಯವು ಹೇಗೆ ಕಾಣುತ್ತದೆ. ಹಿಮಾಲಯದ ಕಪ್ಪು ಕರಡಿ ಒಂದೆಡೆ ಸಿಲುಕಿಕೊಂಡಿತ್ತು. ನಮ್ಮ ತಂಡಗಳು ಬೆಳಗ್ಗೆಯಿಂದಲೇ ಇದರ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದ್ದವು. ಜನರು ಮತ್ತು ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಣಾ ಕಾರ್ಯ (Rescue Operation)ಯಶಸ್ವಿಯಾಗಿದೆ ಇದೊಂದು ತಂಡದ ಕೆಲಸ ಎಂದು ಅವರು ಆ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದರು.

Chikkamagaluru: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವ್ಯಾಘ್ರನ ದರ್ಶನ: ವಿಡಿಯೋ ವೈರಲ್‌
ವಿವಿಧ ತಂಡಗಳು ರಕ್ಷಣೆಗಾಗಿ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಸ್ಥಳವನ್ನು ತಲುಪಿದವು. ಸ್ಥಳವು ಅರಣ್ಯದಿಂದ ಬಹಳ ದೂರದಲ್ಲಿತ್ತು ಆದ್ದರಿಂದ ರಕ್ಷಿಸಲಾಗಿದೆ. ವೈದ್ಯಕೀಯ ತಪಾಸಣೆಯ ನಂತರ ಪ್ರಾಣಿಯನ್ನು ಅದರ ನೈಸರ್ಗಿಕ ಆವಾಸಸ್ಥಾನದಲ್ಲಿ ಬಿಡಲಾಯಿತು. ಆ ವೀಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು. ವನ್ಯಜೀವಿಗಳ ವೀಡಿಯೋಗಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಹಿಟ್ ಆಗುತ್ತವೆ. ಈ ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನಗಳಲ್ಲಿ ಆನಂದಿಸುತ್ತಿರುವ ವಿಡಿಯೋಗಳನ್ನು ಜನ ಇಷ್ಟ ಪಡುತ್ತಾರೆ.
 

Follow Us:
Download App:
  • android
  • ios